Latest Posts

ಪರ್ದಾ ಪದ್ಧತಿ ಮಹಿಳೆಯ ಮಾನ ರಕ್ಷಣೆಗೆ ಇಸ್ಲಾಮಿನ ಕೊಡುಗೆ

ಪರ್ದಾ  ಸಂಪ್ರದಾಯ ಯಾಕೆ? ಅದರ ಹಿಂದೆ ಅಡಗಿದ ತಾತ್ಪರ್ಯವೇನು? ಎಂಬುವುದರ  ಕುರಿತು ಸಂಪೂರ್ಣ ಜ್ಞಾನವಿಲ್ಲದ ಕೆಲವೊಂದು ಮುಸ್ಲಿಂ ನಾಮದಾರಿ ವರ್ಗವು ಪಾರ್ದಾ ಸಂಪ್ರದಾಯವನ್ನು ವಿರೋಧಿಸುವ ಹಾಗೂ ಕಟುವಾಗಿ ಟೀಕಿಸುವ ಅಪಾಯಕರ ಸಂಗತಿಗೆ ಕೈ ಹಾಕಿರುವುದನ್ನು ಆಧುನಿಕ ಜಗತ್ತು. ದರ್ಶಿಸುತಿದೆ.

   ಉಳಿದವರೊಂದಿಗೆ ಬೆರೆಯಬೇಕು. ಅದಕ್ಕೆ ತಡೆಯುವುದೆಲ್ಲ ವನ್ನೂ  ತೊಡೆದು ಹಾಕಬೇಕು ಎಂಬುವುದೇ ಅವರ ಆಂತರಿಕ ಉದ್ದೇಶ! ಪರಮಾಣುy ಯುಗದಲ್ಲಿ ವಿಶ್ವವಿಡೀ  ಬದಲಾಗುತ್ತಿರುವ ಮುಸ್ಲಿಂ ಮಹಿಳೆಯರು ಬದಲಾಗದಿರಲು ಸಾಧ್ಯವೇ? ಸಮುದಾಯದ ಅರ್ಥ ಮಹಿಳೆಯರು ಅಡುಗೆ ಮನೆಯಲ್ಲಿ ಬಂಧಿಗಳಾದರೆ ಸಮುದಾಯ ಪ್ರಗತಿ ಹೊಂದುವುದು ಹೇಗೆ?  ಎಂಬುದೇ ಅವರ ಹೊಸ ಪ್ರಶ್ನೆಗಳು ಆದರೆ ಈ ಪರಿಷ್ಕೃತ ಜಗತ್ತಿನಲ್ಲಿ ಮತ್ತು ಅದರ ಹೊಸ ಸಿದ್ಧಾಂತಗಳ ಕುರಿತು ಹಾಗೂ ಅದರ ನೈಜ ಉದ್ದೇಶ,ಬೀಕರ ಪರಿಣಾಮಗಳ ಕುರಿತು ಅವರು ಚಿಂತಿಸುವುದಿದೆ?  ನಾವಾದರೂ ಅದರ ಕುರಿತು ಒಂದಿಷ್ಟು ಚಿಂತಿಸೋಣ!

      ಆಧುನಿಕ ಯುರೋಪ್ ಇಂದಿನ ಪರಿಷ್ಕೃತ ಜಗತ್ತಿನ ಮಾದರಿ. ಸ್ತ್ರೀ-ಪುರುಷ ಸಮಾನತೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಪುರುಷರೊಂದಿಗೆ ಸ್ವತಂತ್ರ-ಮಿಶ್ರ ಜೀವನ ಎಂಬ ಮೂರು ಅಂಶಗಳ ಮೂಲಕ ಮಹಿಳೆಯರ ಪ್ರಗತಿಯನ್ನು ಎಣಿಕೆ ಮಾಡುವ ಇವರು 18ನೇ ಶತಮಾನದಲ್ಲಿ ನೂತನ ಸಿದ್ಧಾಂತಗಳಿಗೆ ಹುಟ್ಟುಹಾಕಿದರು. ಮೇಲೆ ತಿಳಿಸಿದ ಮೂರು ಸಿದ್ಧಾಂತಗಳ ಮೂಲಕ ಮಹಿಳೆಯರ ಸಬಲೀಕರಣವನ್ನು ಸಾಧಿಸ ಹೊರಟ ಪಾಶ್ಚಾತ್ಯರು ಆಧುನಿಕ ಮುಸಲ್ಮಾನನು ತನ್ನತ್ತ ಸೆಳೆಯುವಲ್ಲಿ ಸಂಪೂರ್ಣ ಸಫಲರಾದರು. ಆದರೆ ಇಸ್ಲಾಂ ಧರ್ಮಕ್ಕೆ ಹೋಲಿಸುವಾಗ ಮೇಲೆ ತಿಳಿಸಿದ ಸ್ತ್ರೀ-ಪುರುಷ ಸಮಾನತೆ ಸ್ತ್ರೀಯರ ಆರ್ಥಿಕ ಸ್ವಾವಲಂಬನೆ,ಪುರುಷರೊಂದಿಗೆ ಸ್ವತಂತ್ರ ಮಿಶ್ರ ಜೀವನ ಇವು ಮೂರು ಮಹಿಳೆಯರಿಗೆ ಅಸಂಭವಪಟ್ಟದಾಗಿದೆ.ಏಕೆಂದರೆ ಪುರುಷರಿಗೂ ಮಹಿಳೆಯರಿಗೂ ಪ್ರಾಕೃತಿಕವಾಗಿಯೂ ದೈಹಿಕವಾಗಿಯೂ ವೈಜ್ಞಾನಿಕವಾಗಿಯೂ ಅಜಗಜಾಂತರ ವ್ಯತ್ಯಾಸಗಳಿವೆ. ಪುರುಷರಿಗಿರುವ ದೈಹಿಕ ಸಾಮರ್ಥ್ಯ ಸ್ತ್ರೀಯರಿಗಿರದು ಮಹಿಳೆಯರಿಗಿರುವಷ್ಟು ಕಾಮ ಕೇಳಿ ಪುರುಷರಿಗಿರದು ಹಾಗೆಯೇ ಚಿಂತಾಲೋಚನೆ ಶಕ್ತಿ ವಿವೇಕ ಶಕ್ತಿಯು ಪುರುಷರಿಗಿರುವಂತೆ ಸ್ತ್ರೀಯರಿಗಿರದು ಹೀಗಿರುವಾಗ ಸ್ತ್ರೀ-ಪುರುಷರ ಮಧ್ಯೆ ಯಾವ ರೀತಿ ಸಾಮರಸ್ಯವನ್ನು ಸಾಧಿಸಲು ತಾನೇ ಸಾಧ್ಯ? ಸ್ತ್ರೀಯರಿಗೆ ಅವರದೇ ಆದ ಮಿತಿಯಿದೆ. ಆ ಚೌಕಟ್ಟನ್ನು ಮೀರಿ ಹೋದರೆ ಅದು ಇತರ ಅನಾಹುತಗಳಿಗೆ ಹೇತಾಗಬಹುದು ಎಂಬುದಕ್ಕೆ ಪಾಶ್ಚಾತ್ಯ ಮಾದರಿಯ ಆಧುನಿಕ ಜಗತ್ತೇ ಪ್ರತ್ಯಕ್ಷ ಸಾಕ್ಷಿ.

  ಮಹಿಳೆಯರ ಮೇಲೆ ಅತ್ಯಾಚಾರ ಪ್ರೇಮ ಪ್ರಕರಣ,ವ್ಯಭಿವಿಚಾರ ಮಾನಭಂಗಕ್ಕೆ ಯತ್ನ ಈ ರೀತಿ ಹಲವಾರು ಪ್ರಕರಣಗಳನ್ನು ಎದುರಿಸುವ ಮಹಿಳೆಯರು ಇಂತಹ ಅನಾಹುತಗಳಿಂದ ತಪ್ಪಿಸಲು ಕಾಮುಕರ ಕಣ್ಮನ ತನಿಸುವ ತನ್ನ ಲೋಹ ಶರೀರವನ್ನು ಆತನಿಂದ ಕಣ್ಮರೆಯಾಗುವಂತೆ ಮಾಡಲಿ.ಅರೆನಗ್ನರಾಗಿ ಸಂಪೂರ್ಣ ಪುರುಷರಂತೆ ಹೋಲಿಕೆಯಾಗಲು ಟಿ ಶರ್ಟ್ ಪ್ಯಾಂಟ್ ಧರಿಸಿ ಸುತ್ತುವ ಮಹಿಳೆಯರು ತನಗೆ ಪ್ರಾಕೃತಿಕ ನಿಯಮವೇನು ತಿಳಿಸುತಿದೆ ಎಂದು ಮೊದಲು ತಿಳಿಯಲಿ. ತನ್ನ ಕೋಮಲ ಶರೀರವನ್ನು ಕಾಮುಕರ ಮುಂದೆ ಪ್ರದರ್ಶನಕ್ಕಿಟ್ಟು ಮದ್ಯೆ ದಾರಿಯಲ್ಲಿ ದೊಂಬರಾಟ ಮಾಡುವ ಮಹಿಳೆಯರು ಆತನಿಂದ ಕೆಂಗೆಣ್ಣಿಗೆ ಗುರಿಯಾಗದೆ ಮುಕ್ತಿ ಪಡೆಯಲು ಪ್ರಯತ್ನಿಸಲಿ. ಇದಕ್ಕೆಲ್ಲವೂ ಮೂಲ ಪರಿಹಾರ.ಇದರ ಶಾಶ್ವತ ನಿಗ್ರಹಣವೇ 8ನೇ ಶತಮಾನದಲ್ಲಿ ಹಝ್ರತ್ ಪ್ರವಾದಿಯರು ಆಜ್ಞಾಪಿಸಿದ ಪರ್ದಾ ಪದ್ಧತಿ ಎಂದು ಅಭಿಮಾನದಿಂದ ಹೇಳಲು ಇಂದು ಆಧುನಿಕ ಮುಸಲ್ಮಾನನು ಸಂತೋಷಪಡಬೇಕಾಗಿದೆ. ಅದರೆ?
    ಅಭಿಮಾನ ಪಡಬೇಕಾದ ಸಮೂಹದ ಸ್ಥಿತಿಗತಿಯೇ ಇಂದು ಶೋಚನೀಯ! ಪಾಶ್ಚಾತ್ಯ ಪ್ರಭುಗಳನ್ನು ಎಲ್ಲಾ ಸಂಗತಿಯಲ್ಲೂ ಅನುಕರಿಸಲು ಮುಸ್ಲಿಂ ಗುಲಾಮ ಪರ್ದಾ ಪದ್ಧತಿಯಲ್ಲೂ ಅವರನ್ನೆ  ಅನುಕರಿಸಿದ.ಪಾಶ್ಚಾತ್ಯರೊಂದಿಗೆ ಅವರ ಮಹಿಳೆಯರ ವೇಶಭೂಷಣಗಳನ್ನು, ಪುರುಷರೊಂದಿಗೆ ಮಹಿಳೆಯರು ಇಷ್ಟಾನುಸಾರ ವಿಹರಿಸುವ ಸ್ವೇಚಾರವನ್ನೇ ಆಧುನಿಕ ಮುಸಲ್ಮಾನ ಬೆಂಬಲಿಸಿದ. ಸಾಹಿತಿಕ ಸಂಪುಷ್ಠಿ ಇರುವ ಯಜಮಾನನ ಭಾಷೆಯಲ್ಲಿರುವ ಸ್ತ್ರೀ-ಪುರುಷ ಸಮಾನತೆಯ ತತ್ವಗಳು,ಸ್ತ್ರೀ ವಿದ್ಯಾಭ್ಯಾಸ, ಸ್ತ್ರೀ-ಸ್ವಾತಂತ್ರ್ಯದ ಘೋಷಣೆಗಳು ಆಧುನಿಕ ಮುಸಲ್ಮಾನನ್ನು ಅಂದನನ್ನಾಗಿಸಿತು .ಹೀಗೆ ಜಗತ್ತು ಆಧುನಿಕಾರಣಗೊಳ್ಳುತ್ತಿದ್ದಂತೆ ಸ್ತ್ರೀಯರ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾವ ಕೇಳಿಬರತೊಡಗಿತು.ಈ  ಎಲ್ಲಾ ನೂತನ ಆಶಯಗಳನ್ನು ಬೆಂಬತ್ತಿದ ಮುಸಲ್ಮಾನನು ಮೊದಲು ತಾನು ಸ್ವೀಕರಿಸ ಧರ್ಮದ ಮರ್ಮವನ್ನು ಮೊದಲು ತಿಳಿಯಲಿ ಅನಾದಿ ಕಾಲದಿಂದಲೂ ಅಂತ್ಯ ಕಾಲಕ್ಕೂ ಬದಲಾಗದೆ ಭದ್ರವಾಗಿರುವ ಇಸ್ಲಾಂ ಧರ್ಮದ ಆಶಯಗಳನ್ನು ದೃಢಮನಸ್ಸಿನಿಂದ ಸ್ವೀಕರಿಸಿ ಭಗವಂತನಾದ ಅಲ್ಲಾಹನ ಸಂತೃಪ್ತಿಗೆ ಪಾತ್ರಿಭೂತರಾಗಿ ಎಂಬ ಉಪದೇಶದೊಂದಿಗೆ.

         ✍ ಬಿ.ಎಂ.ತ್ವಯ್ಯಿಬ್ ಫೈಝಿ ಬೊಳ್ಳೂರು

Share this on:
error: Content is protected !!