Latest Posts

ಓ.. ಮನವೇ…{ಕವನ}

ಓ ಮನವೇ ನಗುವಾಗ ನಕ್ಕು ಬಿಡು
ತುಟಿಯಲ್ಲಿ ಮುಗುಳು ನಗೆಯು ಸದಾ ಉಳಿಯುವಂತೆ
ಓ ಮನವೇ ಅಳುವಾಗ ಅತ್ತು ಬಿಡು
ಮನದಿ ನೋವುಗಳೆಲ್ಲ ಒಮ್ಮೆಲೆ ಕರಗಿ ಹೋಗುವಂತೆ

ನಾವು ನಂಬಿದವರೆಲ್ಲಾ ಒಂದೇ ಅಲ್ಲ..!
ನಮ್ಮನ್ನು ದೋಚುವ ಕಳ್ಳರೇ ಜಗವೆಲ್ಲಾ..!
ನಡು ಜೀವನದಲ್ಲಿ ಕೈ ಬಿಡುವ ದುಷ್ಟರೆಷ್ಟೋ..?
ಸುಖ ಶಾಂತಿಯಲ್ಲಿ ತೇಲಿಸುವ ಸಜ್ಜನರೆಷ್ಟೋ..?

ಓ ಮನವೇ ನಗುವಾಗ ನಕ್ಕು ಬಿಡು
ತುಟಿಯಲ್ಲಿ ಮುಗುಳು ನಗೆಯು ಸದಾ ಉಳಿಯುವಂತೆ

ನಾವು ಪ್ರೀತಿಸಿದ ಜನರೆಲ್ಲಾ ಆಪ್ತರಲ್ಲ..!
ಬೆನ್ನಿಗೆ ಚೂರಿ ಇರಿಯುವ ಪಾಪಿಗಳೇ ಎಲ್ಲ..!
ದ್ರೋಹ ಬಗೆದು ಖುಷಿಪಡುವ ಮೋಸಗಾರರೆಷ್ಟೋ..?
ತ್ಯಾಗ ಮಾಡಿ ಮಮತೆ ತೋರುವ ಬಂದುಗಳೆಷ್ಟೋ..?

ಓ ಮನವೇ ಅಳುವಾಗ ಅತ್ತು ಬಿಡು
ಮನದಿ ನೋವುಗಳೆಲ್ಲ ಒಮ್ಮೆಲೆ ಕರಗಿ ಹೋಗುವಂತೆ

ನಮಗಾಗಿ ಜೀವ ಬಿಡುವ ಜನರೆಲ್ಲ ಸ್ನೇಹಿತರಲ್ಲ..!
ಕಣ್ಣಿಗೆ ಕಂಡ ವಸ್ತುಗಳು ತನಗೆನ್ನುವ ಸ್ವಾರ್ಥಿಗಳೇ ಎಲ್ಲ..!
ಗುಂಡಿ ತೋಡಿ ತಳ್ಳಿ ಬಿಡುವ ಶತ್ರುಗಳೆಷ್ಟೋ..?
ಹೆಗಲು ನೀಡಿ ಹೊರುವ ನಾಲ್ಕು ಪುಣ್ಯಾತ್ಮರೆಷ್ಟೋ..?

ಓ ಮನವೇ ನಗುವಾಗ ನಕ್ಕು ಬಿಡು
ತುಟಿಯಲ್ಲಿ ಮುಗುಳು ನಗೆಯು ಸದಾ ಉಳಿಯುವಂತೆ
ಓ ಮನವೇ ಅಳುವಾಗ ಅತ್ತು ಬಿಡು
ಮನದಿ ನೋವುಗಳೆಲ್ಲ ಒಮ್ಮೆಲೆ ಕರಗಿ ಹೋಗುವಂತೆ

✒️.ಸಿದ್ದೀಕ್ ಶನಿವಾರಸಂತೆ,ಕೊಡಗು

Share this on:
error: Content is protected !!