Latest Posts

ಡ್ರಗ್ಸ್ ದಂಧೆ ಸಮಾಜಕ್ಕಂಟಿದ ಬಾಧೆ

ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಾದಕ ವಸ್ತುಗಳ ಬಳಕೆಯು ಜನಸಾಮಾನ್ಯರೆಡೆಯಲ್ಲಿ ಕೈಗೆಟಕುವ ಹಂತವನ್ನು ಮೀರಿದೆಯಲ್ಲದೆ ಲಾಕ್ ಡೌನ್ ಸಂಕಷ್ಟದ ಮಧ್ಯೆಯೂ ವಿಧ್ಯಾರ್ಥಿಗಳು ಸೇರಿದಂತೆ ಯುವ ಪೀಳಿಗೆಯನ್ನು ವ್ಯಸನದ ಚಟಕ್ಕೆ ಬಲಿಯಾಗಿಸಿದೆ. ಉನ್ನತ ಪದವಿ ಮತ್ತು ಅಧಿಕಾರವನ್ನು ದುರ್ಬಲಕೆ ಮಾಡುವ ಒಂದು ವಿಭಾಗದ ಸಹಾಯ ಸಹಕಾರವನ್ನು ಪಡೆದು ಖ್ಯಾತರೆನಿಸಿಕೊಂಡವರೇ ಡ್ರಗ್ ಮಾಫಿಯಾದಲ್ಲಿ ಭಾಗಿಗಳಾಗಿ ಕುಖ್ಯಾತಿ ಪಡೆಯುತ್ತಿರುವುದು. ಈ ದೇಶದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಕಾರಣವಾಗಬಹುದು .

ದೇಶ ವಿದೇಶದ ಸಮಾಜ ಫಾತುಕ ಶಕ್ತಿಗಳು ಒಂದುಗೂಡಿ ಸ್ವಾಸ್ಥತೆಯನ್ನು ಕೆಡಿಸಿದಲ್ಲಿ ಬಡವರ್ಗದ ಜನತೆಯು ಸಂಕಷ್ಟಕ್ಕೀಡಾಗುವುದರಲ್ಲಿ ಸಂಶಯವಿಲ್ಲ .

ಮಾದಕ ವ್ಯಸನಿಗಳು ತಮ್ಮ ತಮ್ಮ ಬೇಡಿಕೆಯನ್ನು ಈಡೇರಿಸಲು ಆರ್ಥಿಕ ಅಡಚನೆಯುಂಟಾದಲ್ಲಿ ವ್ಯಸನಿಗಳ ಆಯ್ಕೆಯು ಕೊಲೆ-ಸುಲಿಗೆ-ದರೋಡೆಗಳಲ್ಲಿ ಅಂತ್ಯವಾಗುತ್ತದೆ. ಆತಂಕಕಾರಿ ಅಂಶವೆಂದರೆ ಹದಿ ಹರೆಯದವರೂ ಈ ದುಷ್ಚಟಕ್ಕೆ ಬಲಿಯಾಗುತ್ತಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಶಿಕ್ಷೆಯನ್ನು ಜಾರಿ ಮಾಡಿದಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಬಳಕೆಗೆ ಕಡಿವಾಣ ಹಾಕಬಹದು. ಇದಲ್ಲದೆ ಕೌನ್ಸ್ ಲಿಂಗ್ ನಡೆಸಿ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗವನ್ನು ನೀಡಿದಲ್ಲಿ ಮಾದಕ ವ್ಯಸನಿಗಳನ್ನು ಸಮಾಜದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಸಾಧ್ಯ.

ಹಕೀಂ ಬಿ.ಎ
ವಿಧ್ಯಾರ್ಥಿ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ

Share this on:
error: Content is protected !!