ಪೇರಲ್ತಡ್ಕ: SSF ಶಾಖಾ ಮಟ್ಟದ ತರಗತಿ ಕಾರ್ಯಾಗಾರ ‘ಮಫಾಝ-2020’ ರಝಾಕ್ ಹಿಮಮಿಯವರ ಅಧ್ಯಕ್ಷತೆಯಲ್ಲಿ 20-09-2020 ರಂದು ನಡೆಯಿತು.ಪಿ ಐ ಮುಹಮ್ಮದ್ ಮದನಿ ಉದ್ಘಾಟಿಸಿದರು.ನಂತರ ನಡೆದ ‘ಎಸ್ ಎಸ್ ಎಫ್ನ ಕನಸುಗಳು’ ಎಂಬ ವಿಷಯಾಧಾರಿತ ತರಗತಿಯು ಪಿ ಎ ಮುಹಮ್ಮದ್ ಮದನಿ ಉಸ್ತಾದರು ನೆರವೇರಿಸಿದರು. ಇದರ ಬಳಿಕ SBS ಪೇರಲ್ತಡ್ಕ ನೂತನ ಕಮಿಟಿ SYS-SSF ಅಧ್ಯಕ್ಷರು,ಪದಾರ್ಥಗಳ ಸಹಕಾರದಿಂದ ರೂಪಿಸಲಾಯಿತು.
SBS ಪೇರಲ್ತಡ್ಕ ಇದರ ಅಧ್ಯಕ್ಷರಾಗಿ ಮಶ್ಹೂದ್, ಕಾರ್ಯದರ್ಶಿಯಾಗಿ ಝಹೀಂ, ಕೋಶಾಧಿಕಾರಿಯಾಗಿ ಕಾಮಿಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಾಗೆಯೆ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿಯಾಗಿ ಸಾಬಿಕ್ ಮತ್ತು ಸದಸ್ಯರಾಗಿ ತ್ವಯ್ಯಿಬ್, ಜಾಸಿಂ, ತೌಸೀರ್, ಹಾಸಿರ್, ಶಮ್ಮಾಸ್, ಶಹೀರ್, ಅಫ್ಲಹ್, ಸಹಲ್ ಮಿನಾಝ್ ಆಯ್ಕೆಯಾದರು.
ಸಲಹಾ ಸಮಿತಿಗೆ SSF ಪೇರಲ್ತಡ್ಕ ಯುನಿಟ್ ಸದಸ್ಯರಾದ ಹಾಮಿದ್ ಅಲಿ ಹಿಮಮಿ, ಮುಹಾದ್, ಸ್ವಬಾಹ್, ಮುಸ್ತಫಾ, ಶಹೀದ್ ಅವರನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಬಿ ವೈ ಮುಹಮ್ಮದ್ ಮದನಿ, ಇಬ್ರಾಹಿಂ ಸಅದಿ, ಪಿ ಐ ಅಬ್ದುಲ್ಲ ಮದನಿ, ಶರೀಫ್ ಮಾಸ್ಟರ್, ಖಾಸಿಂ ಪಿ ಎ, ರಝಾಕ್ ಪಿ ಎ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪ್ಪಿನಂಗಡಿ ಡಿವಿಶನ್ ನೂತನ ಉಸ್ತುವಾರಿಯಾಗಿ ಆಯ್ಕೆಗೊಂಡಿರುವ ಹಮೀದ್ ಸಖಾಫಿ ಪಾಣಾಜೆ ಇವರು ಹೊಸ SBS ಘಟಕಕ್ಕೆ ಆದರ್ಶ ಬದ್ಧತೆ, ಮತ್ತು ಶಿಸ್ತು ಸಂಯಮಗಳ ಬಗ್ಗೆ ವಿವರಿಸಿ ಶುಭಹಾರೈಸುವುದರೊಂದಿಗೆ ಹಬೀಬರ ಸನ್ನಿಧಿಗೆ ಸ್ವಲಾತ್ ಸಮರ್ಪಿಸುತ್ತಾ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.