Latest Posts

ಪ್ರತಿ ಗ್ರಾಮಗಳಲ್ಲಿ ಕೊರೋನ ಪರೀಕ್ಷೆ ನಡೆಸುವ ವಿಚಾರದಲ್ಲಿ ಹಿರಿಯರಿಗೆ, ಮಕ್ಕಳಿಗೆ ಸರಕಾರ ರಿಯಾಯಿತಿ ನೀಡಬೇಕು
ಜಿ.ಎ ಶಂಸುದ್ದೀನ್ ಅಜ್ಜಿನಡ್ಕ

ಪುಣಚ: ದ.ಕ.ಜಿಲ್ಲೆಯಲ್ಲಿ ಕೊರೋನ ಪರೀಕ್ಷೆಯನ್ನು ಎಲ್ಲರೂ ಸ್ವಯಂ ಪ್ರೇರಿತವಾಗಿ ಮಾಡಿಸಬೇಕು ಮತ್ತು ಪ್ರತಿ ಗ್ರಾಮಗಳಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಕೊರೋನ ಪರೀಕ್ಷೆ ಮಾಡಬೇಕು ಎಂದು ಈಗಾಗಲೇ ದ.ಕ.ಜಿಲ್ಲಾ ಪಂಚಾಯತ್ ಸಿಇಒ ಅವರು ಆದೇಶ ಹೊರಡಿಸಿದ್ದಾರೆ.
ಈ‌ ಆದೇಶ ಬಲವಂತ ಆಗಬಾರದು ಮತ್ತು ಹಿರಿಯರಿಗೆ ಈ ವಿಚಾರದಲ್ಲಿ ಸರಕಾರ ಜಿಲ್ಲಾಡಳಿತ ರಿಯಾಯಿತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರಕಾರ, ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಈಗಾಗಲೇ ದೇಶಾದ್ಯಂತ ಕೊರೋನ ವೈರಸ್ ವ್ಯಾಪಕವಾಗಿದೆ ಎಂಬ ವಿಚಾರ ದಿನನಿತ್ಯ ಪತ್ರಿಕಾ ಮಾಧ್ಯಮಗಳ ಮೂಲಕ ವರದಿ ಬರುತ್ತಿದೆ
ಪ್ರತಿಯೊಬ್ಬರು ಆರೋಗ್ಯದ ಸುರಕ್ಷತೆಯ ನಿಟ್ಟಿನಲ್ಲಿ ಮುನ್ನೆಡಯುತ್ತಿದ್ದಾರೆ.
ಇಂತಹ ಸಮಯದಲ್ಲಿ ಈ ನಿರ್ಧಾರ ಹಿರಿಯರಿಗೆ ತುಂಬಾ ಆತಂಕದ ಮತ್ತು ಭಯ ಉಂಟು ಮಾಡುವ ನಿರ್ಧಾರವಾಗಿದೆ ಕೂಡಲೇ ಸರಕಾರ ಜಿಲ್ಲಾಡಳಿತ ಈ ವಿಚಾರದಲ್ಲಿ ಹಿರಿಯರಿಗೆ ರಿಯಾಯಿತಿ ನೀಡಬೇಕು ಎಂದರು

ಒಂದು ಕಡೆಯಲ್ಲಿ ಜಿಲ್ಲಾ ಪಂಚಾಯತ್ ಹೇಳುತ್ತಿದೆ 60 ವರ್ಷ ಮೇಲ್ಪಟ್ಟವರು ಪರೀಕ್ಷೆ ಮಾಡಿಸಬೇಕು ಎಂದು ಆದರೆ 60 ವರ್ಷ ದಾಟಿದ ಹೆಚ್ಚಿನ ಮಂದಿ ಆರೋಗ್ಯದ ಸಮಸ್ಯೆ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಅವರಿಗೆ ಇನ್ನಷ್ಟು ಹೆಚ್ಚಿನ ಭಯಪಡಿಸುವ ನಿರ್ಧಾರದಿಂದ ಸರಕಾರ , ಜಿಲ್ಲಾ ಪಂಚಾಯತ್ ಹಿಂದೆ ಸರಿಯಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸುವುದಾಗಿ ಜಿ.ಎ ಅಜ್ಜಿನಡ್ಕ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಯುವಕರು ಈ ವಿಚಾರದಲ್ಲಿ ಇಲಾಖೆಗೆ ಪೂರ್ಣ ಸಹಕಾರ ನೀಡಲಿದ್ದಾರೆ.
ಹಿರಿಯರಿಗೆ 60 ವರ್ಷ ಮೇಲ್ಪಟ್ಟವರು, ಸಣ್ಣ ಮಕ್ಕಳಿಗೆ ಬಲವಂತದ ಪರೀಕ್ಷೆ ನಡಸಬಾರದು ಎಂದು ಮನವಿ ಮಾಡಿದ್ದಾರೆ.

ಪ್ರತಿಯೊಬ್ಬರು ಕೊರೋನ ಪರೀಕ್ಷೆ ಮಾಡಲು ಸ್ವತಂತ್ರರು, ಅವರು ಅವರು ಸ್ವಯಂಪ್ರೇರಣೆಯಿಂದ ಪರೀಕ್ಷೆ ಮಾಡುವುದು ಸೂಕ್ತವಾಗಿದೆ
ಆದ್ದರಿಂದ ಹಿರಿಯರಿಗೆ ಮಕ್ಕಳಿಗೆ ಬಲವಂತದ ಕೊರೋನ ಪರೀಕ್ಷೆ ನಡೆಸದಂತೆ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಮನವಿ ಮಾಡಿದ್ದಾರೆ.

Share this on:
error: Content is protected !!