ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಕಕ್ಕಿಂಜೆ ಶಾಖೆ ವತಿಯಿಂದ ಚೇಸಿಂಗ್ ಡ್ರೀಂಸ್ ಇದರ ಸಹಕಾರದೊಂದಿಗೆ ಸರಕಾರಿ ಉಧ್ಯೋಗವನ್ನು ಹೇಗೆ ಪಡೆಯಬಹುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬ ವಿಷಯಗಳ ಕುರಿತು ಮಾಹಿತಿ ಕಾರ್ಯಾಗಾರ ನೂರುಲ್ ಇಸ್ಲಾಂ ಮದರಸ ಸಭಾಂಗಣ ಕಕ್ಕಿಂಜೆಯಲ್ಲಿ ಜರಗಿತು. ಬಹುಮಾನ್ಯ ಕಕ್ಕಿಂಜೆ ಉಸ್ತಾದ್ ಐ ಕೆ ಮೂಸಾ ದಾರಿಮಿ ಅವರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಜುಮಾ ಮಸೀದಿ ಕಕ್ಕಿಂಜೆ ಇದರ ಮುದರ್ರಿಸರಾದ ಶಂಸುಧ್ಧೀನ್ ಅಶ್ರಫಿ ಉಸ್ತಾದರು ಉಧ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಧರ್ಮಸ್ಥಳ ಪೋಲಿಸ್ ಠಾಣಾ ಉಪ ನಿರೀಕ್ಷಕರಾದ ಶ್ರೀ ಪವನ್ ಕುಮಾರ್ ಮಾತಾನಾಡುತ್ತ ವಿಧ್ಯಾರ್ಥಿಗಳು ಗುರಿ ತಲುಪುವ ತನಕ ನಿರಂತರ ಪರಿಶ್ರಮ ಪಟ್ಟರೆ ವಿಜಯದತ್ತ ತಲುಪಬಹುದು.ಇತರ ವಿಷಯಗಳ ಬಗ್ಗೆ ಗಮನ ಹರಿಸದೇ ನಿರ್ದೀಷ್ಟ ಗುರಿಯಿಟ್ಟು ಓದುವ ಬಗ್ಗೆ ಮಾತ್ರ ಶ್ರಧ್ಧೆ ಇರಬೇಕು ಎಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿ ಈ ನಿಟ್ಟಿನಲ್ಲಿ ಎಸ್ ಕೆ ಎಸ್ ಎಸ್ ಎಫ್ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿಯವರು ಮಾತಾನಾಡುತ್ತ ಎಸ್ ಕೆ ಎಸ್ ಎಸ್ ಎಫ್ ಧಾರ್ಮಿಕ, ಸಾಮಾಜಿಕ,ಮತ್ತ ಶೈಕ್ಷಣಿಕ ರಂಗದಲ್ಲಿ ಸಮಾಜಕ್ಕೆ ಬೇಕಾದ ಕೊಡುಗೆಗಳನ್ನು ನೀಡುತ್ತಿದೆ.ವಿಖಾಯ ,ಸಹಚಾರಿ ಯಂತಹ ವಿಂಗುಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡರೆ ಟ್ರೆಂಡ್ ಮತ್ತು ಕ್ಯಾಂಪಸ್ ವಿಂಗುಗಳು ಶೈಕ್ಷಣಿಕ ಅಭಿವ್ರಧ್ಧಿಯ ಬಗ್ಗೆ ಗಮನ ಹರಿಸುತ್ತಿವೆ ಎಂದರು.
ಕಕ್ಕಿಂಜೆ ಜಮಾಅತ್ ಅಧ್ಯಕ್ಷರಾದ ಕೆ ಎ ರಹ್ಮಾನ್ ,ಕಾರ್ಯದರ್ಶಿ ಅಬ್ದುರ್ರಶೀದ್ ಬಾರಿದ್,ಚೇಸಿಂಗ್ ಡ್ರೀಂಸಿನ ಅಬೂಬಕರ್ ಉಜಿರೆ,ಕ್ಲಷ್ಟರ್ ಅಧ್ಯಕ್ಷ ಝುಬೈರ್ ಬಂಡಸಾಲೆ,ವಿಖಾಯ ವಲಯ ಕಾರ್ಯದರ್ಶಿ ಶಕೀಲ್ ಅರೆಕ್ಕಲ್,ಯಾಸಿರ್ ಚಿಬಿದ್ರೆ,ಸಹಚಾರಿ ಕನ್ವೀನರ್ ಇಂರಾನ್ ಕಕ್ಕಿಂಜೆ,ಮಾಜಿ ಪಂಚಾಯತ್ ಸದಸ್ಯರಾದ ಶಾಜಿ, ಉಪಸ್ಥಿತರಿದ್ದರು.
ಪಿ ಎ ಕಾಲೇಜು ಮಂಗಳೂರು ಇದರ ಡೈರಕ್ಟರ್ ಡಾ.ಸಯ್ಯದ್ ಅಮೀನ್ ಅಹ್ಮದ್ ಮತ್ತು ಇನ್ಫರ್ಮೇಷನ್ ಫೌಂಡೇಷನ್ ಇದರ ಡೈರಕ್ಟರ್ ಅಬ್ದುಲ್ ಖಾದರ್ ಸಂಪನ್ನೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ಬೇಕಾದ ಮಾಹಿತಿಗಳನ್ನು ನೀಡಿದರು.ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ ಟ್ರೆಂಡ್ ಕಾರ್ಯದರ್ಶಿ ಅಡ್ವಕೇಟ್ ನವಾಝ್ ಅರೆಕ್ಕಲ್ ಕಾರ್ಯಕ್ರಮ ನಿರ್ವಹಣೆ ನಡೆಸಿದರು.ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಆಮಿರ್ ಕಕ್ಕಿಂಜೆ ಹೂಗುಚ್ಛ ನೀಡಿ ಸ್ವಾಗತಿಸಿದರು.ಶಾಖೆಯ ಕಾರ್ಯದರ್ಶಿ ಸಿರಾಜ್ ಅರೆಕ್ಕಲ್ ವಂದಿಸಿದರು.
