Latest Posts

ಅಕಾರಣವಾದ ಈ ಕಾರಾಗೃಹ ತಡೆಗೆ ಕೊನೆ ಎಂದು ?

Quote
(ಭಾರತದಲ್ಲಿ ಭಯೋತ್ಪಾದಕರಿಗೆ ಬೇಕಾದ ಎಲ್ಲಾ ಸಹಾಯ ಸಹಕಾರಗಳನ್ನು ನೀಡುತ್ತಿದ್ದ ಹಿಝ್ಬುಲ್ ಮುಜಾಹಿದ್ದೀನ್ ಉಗ್ರರೊಂದಿಗೆ ಸೆರೆ ಹಿಡಿಯಲಾದ ಡಿವೈಎಸ್ಪಿ ದೆವೀಂದರ್ ಸಿಂಗ್ ಎಂಬ ದೇಶವಿರೋಧಿ ಅಪರಾಧಿಗೆ ಜಾಮೀನು ನೀಡಲಾಯಿತು, ಅಪರಾಧಿ ಎಂದು ಸಾಬೀತು ಪಡಿಸುವ ಒಂದು ತುಂಡು ಸಾಕ್ಷ್ಯಗಳನ್ನು ಸಹ ಕಲೆ ಹಾಕಲು ಸಾಧ್ಯವಿಲ್ಲದ ಮದನಿಗೆ ಎಷ್ಟೇ ಪ್ರಯತ್ನಿಸಿದರೂ ಜಾಮೀನು ನಿರಾಕರಣೆ. ಈ ತಾರತಮ್ಯ ನೀತಿ ಭವ್ಯ ಭಾರತದ ಸಂಸ್ಕೃತಿಗೆ ಸೇರಿದ್ದಲ್ಲ)

ಬೆಂಗಳೂರು ಸ್ಪೋಟ ಪ್ರಕರಣದಲ್ಲಿ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮದನಿಯ ವಿಚಾರಣಾ ತಡೆ 10ವರ್ಷಗಳು ದಾಟಲಾಗಿದೆ. ಮೊದಲೇ ಕೋಯಂಬತ್ತೂರ್ ಸ್ಪೋಟ ಪ್ರಕರಣದ ಹೆಸನಲ್ಲಿ ಒಂಬತ್ತು ವರ್ಷಗಳ ಕಾಲ ವಿಚಾರಣಾ ಬಂದನದಲ್ಲಿದ್ದು ಕೊನೆಗೆ ಸಾಕ್ಷ್ಯಾಧರಗಳು ಇಲ್ಲದ ಕಾರಣ ನಿರಪರಾಧಿ ಎಂದು ಬಿಡುಗಡೆಗೊಂಡರೂ ಸಹ ಅಧಿಕ ಕಾಲ ತಡವಾಗದೆ ಬೆಂಗಳೂರು ಸ್ಪೋಟದಲ್ಲೂ ಬಂದಿಸಲಾಯಿತು. ಇಷ್ಟೊಂದು ವರ್ಷಗಳಾದರೂ ಮದನಿ ಅಪರಾಧಿ ಎಂದು ಸಾಬೀತು ಪಡಿಸಲು ನ್ಯಾಯಾಲಯಕ್ಕೆ ಸಾಧ್ಯವಾಗಲಿಲ್ಲ. ಬೆಂಗಳೂರು ಸ್ಪೋಟದಲ್ಲಿ ಮದನಿ ಭಾಗಿಯಾಗಿದ್ದಾರೆ ಎಂದು ಸ್ಥಾಪಿಸುವ ಸಾಕ್ಷ್ಯಾಧಾರಗಳು ಹಾಜರುಪಡಿಸಲು ತನಿಖಾ ತಂಡಕ್ಕೂ ಸಹ ಸಾಧ್ಯವಾಗಿಲ್ಲ. ಹೀಗೆ ಸಾಬೀತು ಪಡಿಸಲಾಗದ ಸಮಾನ ಸ್ವಭಾವದ ಎರಡು ಪ್ರಕರಣಗಳಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಭಾರತದಲ್ಲಿ ಒಬ್ಬ ಪ್ರಜೆಯ ಬದುಕಿನ ಗಣ್ಯವಾದ 19 ವರ್ಷಗಳ ಕಾಲ ಬಂಧನದಲ್ಲಿ ಹೋಮಿಸಲ್ಪಡಲಾಗಿದೆ ಎಂಬುದು ಬಹಳ ದುಃಖದ ಸಂಗತಿ.

ಇಂದಿನ UAPA ಹಾಗೂ ಅದರ ಮೊದಲ ಆವೃತ್ತಿಯ ಕರಾಳನೀತಿಗಳಾದ ಮಾನವ ವಿರೋಧಿ ನಿಯಮಗಳಲ್ಲಿ ಸಿಲುಕಿಸಿ ಮದನಿಯನ್ನು ಆಡಳಿತವರ್ಗ ಕಾಲೋನಿಯಲ್ ಕಾಲದಲ್ಲೂ ಸಹ ಕಾಣದ ರೀತಿಯಲ್ಲಿ ಧೀರ್ಘಕಾಲ ಅಕಾರಣವಾಗಿ ಬಂಧನದಲ್ಲಿರಿಸಿದ್ದಾರೆ. 1998ರಲ್ಲಿ ನಡೆದ ಕೋಯಂಬತ್ತೂರ್ ಸ್ಪೋಟದಲ್ಲಿ ಬಹಳ ಅಂತರದ ಸಂಬಂಧವಿದೆ ಎಂದು ಮೊದಲ ಬಾರಿಗೆ ಬಂಧಿಸಿ ದೇಶ ಸುರಕ್ಷತೆ ನಿಯಮ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು.
2007 ಆಗಸ್ಟಿನಲ್ಲಿ ಅಪರಾದಧಿ ಅಲ್ಲವೆಂದು ಕಂಡುಬಂದು ನ್ಯಾಯಾಲಯ ಬಿಡುಗಡೆಗೊಳಿಸುವಷ್ಟರಲ್ಲಿ ಮೊದಲೇ ತನ್ನ ಒಂದು ಕಾಲು ಕಳೆದುಕೊಂಡ ಮದನಿ ಹಲವು ರೀತಿಯ ರೋಗಗಳಿಗೀಡಾದರು. ಹೊರಬಂದು ಚಿಕಿತ್ಸೆ, ರಾಜಕೀಯ ಕಾರ್ಯಾಚಟುವಟಿಕೆಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ 2008ರಲ್ಲಿ ನಡೆದ ಬೆಂಗಳೂರು ಸರಣಿ ಸ್ಪೋಟ ಕೇಸಿನಲ್ಲಿ ಬಂದಿಸಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗಟ್ಟಿದರು.

ಬೆಂಗಳೂರು ಸ್ಪೋಟದ ಸೂತ್ರದಾರರಲ್ಲಿ ಒಬ್ಬನಾದ ಲಕ್ಷರೇ ತ್ವಯ್ಯಿಬಾ ನಾಯಕನೆಂದು ತನಿಕಾದಳ ಹೇಳಲ್ಪಡುವ ತಡಿಯನ್ವಿಡ ನಝೀರಿನೊಂದಿಗೆ ಯಾವುದೋ  ರೀತಿಯಲ್ಲಿ ಸಂಬಂಧವಿದೆ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಅವರನ್ನು ತಳುಕು ಹಾಕಿರುವುದು. ಇದುವರೆಗೂ ಮದನಿ ವಿರುದ್ಧ ಯಾವುದೇ ಸಾಕ್ಷ್ಯಾಧರಗಳನ್ನು ಕಲೆ ಹಾಕಲು ತನಿಕಾತಂಡಕ್ಕೆ ಸಾಧ್ಯವಾಗಿಲ್ಲ. ಈ ಕೇಸಿನಿಂದ ಹೊರಬರಲಾಗದೆ ಮದನಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇದರೆಡೆಯಲ್ಲಿ ಬೆಂಗಳೂರು ಬಿಟ್ಟು ಹೊರ ಹೋಗಬಾರದೆಂಬ ಕಟ್ಟುನಿಟ್ಟಿನ ವ್ಯವಸ್ಥೆಗಳೊಂದಿಗೆ ಜಾಮೀನು ನೀಡಿದರು ಸಹ ಫಲದಲ್ಲಿ ಅದು ಬಂದಿತನ ರೀತಿಯಲ್ಲೇ ಅವರ ಬದುಕು ಸಂಕಷ್ಟಬರಿತವಾಗಿ ಸಾಗುತ್ತಿದೆ. ರೋಗ ಪೀಡಿತನಾಗಿ ಬಹುತೇಕ ಹದೆಗೆಟ್ಟ ಆರೋಗ್ಯ ಸ್ಥಿತಿಯೊಂದಿಗೆ ಮದನಿ ನರಳುತ್ತಿದೆ. ತ್ವರಿತ ಗತಿಯಲ್ಲಿ ವಿಚಾರಣೆ ಕಾರ್ಯಗಳನ್ನು ಪೂರ್ತಿಗೊಳಿಸಿ  ಕೇಸಿನಲ್ಲಿ ತೀರ್ಪು ಕಲ್ಪಸಬೇಕೆಂಬ ಬೇಡಿಕೆಗಳು ದೇಶದ ವಿವಿಧ ಕಡೆಗಳಿಂದ ಕೇಳಿಬಂದರೂ ಬದಲಾಗಿ ಬಂದ ಯಾವುದೇ ಆಡಳಿತವರ್ಗಗಳು ಹಾಗೂ ನ್ಯಾಯಪೀಠ ಅದಕ್ಕೆ ಕಿವಿಕೊಡಲಿಲ್ಲ.

ಹಿಂದೆ ISS ನಂತರ PDP ರೂಪಿಸಿದ ಕಾಲದಲ್ಲಿ ಮದನಿಯ ಕೆಳವೊಂದು ಭಾಷಣಗಳು, ಪ್ರಸ್ತಾಪಗಳು ವಿವೇಕಪೂರ್ವಕವಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿರುವುದು ವಾಸ್ತವ. ಅವರ ಮಾತುಗಳಲ್ಲಿ ಹೆಚ್ಚಿನವು ಮುಸ್ಲಿಂ ಸಮುದಾಯದ ಸಮಸ್ಯೆಗಳ ಕುರಿತಾಗಿದ್ದರೂ ಸಹ ಸಮುದಾಯದಲ್ಲಿನ ಬಹುತೇಕರಿಗೆ ಅದು ಅರೋಚಕ, ಭಾವನಾತ್ಮಕವಾಗಿ ಕಂಡು ಸಮುದಾಯದಿಂದಲೇ ಟೀಕೆಗಳಿಗೆ ಒಳಗಾಗಿದ್ದರು. ಅದರ ಹೆಸರಿನಲ್ಲಿ ಕೆಲವೊಂದು ಪ್ರಕರಣಗಳು ದಾಖಲಿಸಲಾಗಿದ್ದು ಅದೆನ್ನೆಲ್ಲಾ ಕಾನೂನು ಬದ್ದವಾಗಿ ಎದುರಿಸಲಾಗಿದೆ. ಆದರೆ ಈಗ ಅನುಭವಿಸುತ್ತಿರುವ ಈ ದೀರ್ಘಕಾಲದ ಕಾರಾಗೃಹ ಬದುಕು ಆ ಕಾರಣಕ್ಕಾಗಿ ಅಲ್ಲ. ಅನೇಕ ಜನರು ಕೊಲೆಗೈಯ್ಯಲ್ಪಟ್ಟ ಬಾಂಬ್ ಸ್ಪೋಟ ಪ್ರಕರಣದ ಹೆಸರಿನಲ್ಲಾಗಿದೆ. ಒಂದರಲ್ಲಿ ಸಾಕ್ಷ್ಯಾಧರಗಳು ಲಭ್ಯವಲ್ಲದ ಕಾರಣ ಒಂಬತ್ತು ವರ್ಷಗಳ ಕರಾಗೃಹ ಬಂದನದ ನಂತರ ನ್ಯಾಯಾಲಯ ಅವರನ್ನು  ನಿರಪರಾಧಿ ಎಂದು ಕಂಡು ಬಿಡುಗಡೆಗೊಳಿಸಿದರು. ಇನ್ನೊಂದರಲ್ಲಿ ಒಂದು ದಶಕ ಕಳೆದರೂ ಸಾಕ್ಷ್ಯಗಳೇನು ಸಹ ಲಭ್ಯವಾಗದ ಹಿನ್ನೆಲೆಯಲ್ಲಿ ಸಹಜವಾಗಿ ಅವರು ನಿರಪರಾಧಿ ಎಂದೇ ಭಾರತೀಯ ಜನತೆ ನಂಬುತ್ತಿದೆ. ಆದರೂ ಸಹ ಅಕಾರಣವಾಗಿ ಅನಿಶ್ಚಿತಕಾಲದ ಈ ಯಾತನೆ ಅನುಭವಿಸಬೇಕಾದ ಪರಿಸ್ಥಿತಿ ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಎಂದೂ ನಡೆಯಬಾರದ ಸಂಗತಿಯಾಗಿದೆ.

ಮದನಿ ಮಾತ್ರವಲ್ಲ, ಆರೋಪ ಸಾಬೀತು ಪಡಿಸಲಾಗದ ಕರಾಳನೀತಿಗಳಲ್ಲಿ ಬಂದನದಲ್ಲಿರುವ ಸಾವಿರಾರು ಅಮಾಯಕರಿದ್ದಾರೆ ಈ ಪ್ರಜಾಪ್ರಭುತ್ವ ದೇಶದಲ್ಲಿ.
ಅದರಲ್ಲಿ ಅಧಿಕವು ಅಲ್ಪಸಂಖ್ಯಾತ, ದಲಿತ ವಿಭಾಗಕ್ಕೆ ಒಳಪಟ್ಟವರಾಗಿದ್ದಾರೆ, ಅಲ್ಪಸಂಖ್ಯಾತ, ದಲಿತರಿಗಾಗಿ  ಧ್ವನಿಯೆತ್ತಿದವರು ಅದರಲ್ಲಿದ್ದಾರೆ. 
ಭೀಮಾ ಕೋರೇಂಗಾವ್ ಕೇಸಿನಲ್ಲಿ ಬಂದಿಸಿ UAPA ದಾಖಲಿಸಿದ ಪ್ರಮುಖ ಕ್ರಾಂತಿಕಾರಿ ಕವಿ 80ಕ್ಕಿಂತಲೂ ಅಧಿಕ ವಯಸ್ಸಿನ ವರವರಾವು, ಮಾನವ ಹಕ್ಕು ಹೋರಟಗಾರ ಆನಂದ್ ತೆಲ್ತುಂಬ್ದೆ, ಸೋವಾಸೆನ್, ಸುಧಾ ಬರಧ್ವಾಜ್ ಇತರ ಹಲವು ಕೇಸುಗಳಲ್ಲಾಗಿ ಇದೇ ಪರಿಸ್ಥಿತಿ ಅನುಭವಿಸುತ್ತಿದೆ. ಅಂಗವಿಕಲನಾದ ಡಾ. ಸಾಯಿಬಾಬಾ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪೌರತ್ವ ಕಾಯ್ದೆಯಲ್ಲಿ ತಂದ ಮಾನವ ವಿರೋಧಿ ತಿದ್ದುಪಡಿ ವಿರುದ್ಧ ದೇಶದಾದ್ಯಂತ ಬುಗಿಲೆದ್ದ ಹೋರಾಟಗಳಲ್ಲಿ ಪಾಲ್ಗೊಂಡವರು ಸಹ ಮುಂತಾದ ಪಟ್ಟಿ ಬಹಳ ದೀರ್ಘವಾಗಿದೆ. ಇದರಲ್ಲಿ ವಯೋದಿಕನಾದ ವರವರಾವು ಸಮೇತ ಹಲವರು ಜೈಲುವಾಸದೆಡೆಯಲ್ಲಿ ಕೋವಿಡ್ ಬಾಧಿಸಿ ಅವರ ಜೀವನ ಸಹ ಅಪಾಯದ ಪರಿಸ್ಥಿತಿ ಎದುರಿಸಲಾಗಿದೆ.

ಮದನಿ, ವರವರಾವು ಹಾಗೂ ಸಾಯಿಬಾಬಾ ಹೇಳಿರುವುದು ಒಂದೇ ರೀತಿಯ ರಾಜಕೀಯ ವಿಚಾರಗಳಲ್ಲ. ಸಾಮುದಾಯಿಕ ರಾಜಕೀಯ ಹೇಳಿದ ಮದನಿ, ಕಮ್ಯುನಿಸ್ಟ್ ಕ್ರಾಂತಿಕಾರಿ ಕುರಿತು ಮಾತಾನಾಡಿದ ವರವರಾವು ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆ ರೀತಿಯ ಭಿನ್ನ ಆಶಯಗಳು ಬೆಲಕು ಚೆಲ್ಲುವುದು ಕ್ರೂರವಾಗಿ ತುಳಿದು ತಡೆಯಿಡಬೇಕು ಎಂದು ಇಲ್ಲಿನ ಫ್ಯಾಸಿಸ್ಟ್ ಸರ್ಕಾರ ಯಾವುದೇ ಮರೆಯಿಲ್ಲದೆ ನಂಬುತ್ತಿದೆ. ಸಂಘಪರಿವಾರದ ಕೋಮುವಾದಿ ಪ್ರತ್ಯಾಶಾಸ್ತ್ರದ ವಿರುದ್ಧ ಬರುವ ಯಾವುದೇ ಧ್ವನಿಗಳನ್ನು ನಿಷ್ಟೂರವಾಗಿ ಎದುರಿಸುತ್ತೇವೆ ಎಂಬ ಘೋಷಣೆ ಇದರಲ್ಲಿ ಅಡಗಿದೆ. ವರವರಾವು, ತೆಲ್ತುಂಬ್ದೆ ವಿಚಾರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲೇ ವಿರೋಧಗಳು ಬಂದರೂ ಸಹ ಅಂತರರಾಷ್ಟ್ರೀಯ ಮಾನವ ಹಕ್ಕು ನೀತಿ ನಿಯಮಗಳನ್ನು ಪಾಲಿಸದೆ ವಿರೋಧಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಇಲ್ಲಿನ ಆಡಳಿತ ವರ್ಗ ನಡೆಸುತ್ತಿದೆ.

ಸ್ವಪಕ್ಷದ ಆಡಳಿದತ ಅಧೀನದಲ್ಲಿರುವ ಪೋಲೀಸರೇ ಸೆರೆ ಹಿಡಿದು UAPA ದಾಖಲಿಸಿ ಬಂದನದಲ್ಲಿರಿಸಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಗೊಳಿಸಿರುವ ಕೇರಳದ ಸಿಪಿಎಂ ಕಾರ್ಯಕರ್ತರಾದ ಅಲನ್ ತ್ವಾಹ ಹಾಗೂ ಪೌರತ್ವ ಕಾಯ್ದೆ ವಿರುದ್ಧ ಹೋರಾಟದಲ್ಲಿ ಭಾಗವಹಿದ ಡಾ. ಖಫೀಲ್ ಖಾನ್ ವಿರುದ್ಧ UAPA ದಾಖಲಿಸಿದ ಉತ್ತರ ಪ್ರದೇಶದ ಯೋಗಿ ಸರ್ಕಾರದ ನೀತಿಯನ್ನು ನ್ಯಾಯಾಲಯ ಅಸ್ಥಿರಗೊಳಿಸಿ ಆದೇಶ ಹೊರಡಿಸಿದ್ದು ಆಶ್ವಾಸನೀಯ ವಿಚಾರ.

ದೇಶಪ್ರೇಮದ ಹೆಸರಿನಲ್ಲಿ ಭಾವನಾತ್ಮಕ ವಿಚಾರಗಳನ್ನು ತುಂಬಿಸಿ ಸುಲಭವಾಗಿ ತಪ್ಪು ಕಲ್ಪನೆಗೆ ಒಳಗಾಗುವ ರೀತಿಯಲ್ಲಿ ದೇಶವಿರೋಧಿ ಆರೋಪಗಳನ್ನು ಹೊರಿಸಿರುವ ಆರೋಪಗಳಾಗಿವೆ ಮದನಿಯಂತಹ ಅನೇಕ ಪ್ರಜೆಗಳ ಮೇಲೆ ದಾಖಲಾಗಿರುವುದು. ದೇಶವಿರೋಧಿ ಕೃತ್ಯದಲ್ಲಿ ಇವರಲ್ಲಿ ಯಾರಾದರೂ ಭಾಗಿಯಾಗಿದ್ದಲ್ಲಿ ಅದನ್ನು ಸಾಕ್ಷ್ಯಧಾರಗಳ ಮುಖಾಂತರ ಸಾಬೀತು ಪಡಿಸಿ ನ್ಯಾಯಪೀಠದ ಮುಂದೆ ಹಾಗೂ ಸಾರ್ವಜನಿಕರಿಗೆ ಬೋಧ್ಯಪಡಿಸಿ ಇವರಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಿಸುವುದಕ್ಕೆ ಇಲ್ಲಿ ಯಾರೂ ವಿರೋಧ ಮಾಡುವುದಿಲ್ಲ. ಆದರೆ ಅದನ್ನು ಸಾಬೀತು ಪಡಿಸಲಾಗದೆ ಕೇವಲ ಆರೋಪದ ಮೇಲೆ  ಅದೆಷ್ಟೋ ಅಮಾಯಕ ಮನುಷ್ಯ ಜೀವಗಳು ಬಂದನದಲ್ಲಿರಿಸಿ ಕ್ರೂರವಾಗಿ ಪೀಡಿಸಿ ಅವರ ಬದುಕು ಕಾರಗೃಹದಲ್ಲಿ ಹೋಮಿಸುವುದು ಒಂದು ಪರಿಷ್ಕೃತ ಸಮಾಜಕ್ಕೆ ಯೋಗ್ಯವಲ್ಲ. ಯಾವುದೇ ಒಬ್ಬ ಗಂಭೀರ ಅಪರಾದಿಗೆ ನ್ಯಾಯಾಲಯವನ್ನು ಅಭಿಮುಖೀಕರಿಸಿ ತನ್ನ ವಾದಗಳನ್ನು ಮಂಡಿಸಲು ಅವಕಾಶ ನೀಡುತ್ತಿರುವ ದೇಶವಾಗಿದೆ ಭಾರತ. ಯಾವುದೇ ಪ್ರಕರಣ ತೀರ್ಪು ಕಲ್ಪಿಸದೆ ಅನಿಶ್ಚಿತಕಾಲ ಮುಂದುಡುತ್ತಲೇ ಇರುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ನಮ್ಮ ಭವ್ಯ ಭಾರತದ ಆತ್ಮಕ್ಕೆ ಆಳವಾದ ಗಾಸಿ ಉಂಟುಮಾಡಿದ ಮುಂಬೈ ಭಯೋತ್ಪಾದಕ ದಾಳಿ ನಡೆಸಿದಲ್ಲಿಂದಲೇ ಸೆರೆ ಹಿಡಿದು ಈ ದೇಶದ ಶತ್ರುವೆಂದು ಎಲ್ಲರಿಗೂ ಬೋಧ್ಯವಾದ ಅಜ್ಮಲ್ ಕಸಬ್ ಎಂಬ ಭಯೋತ್ಪಾದಕನಿಗೆ ನ್ಯಾಯಾಲಯವನ್ನು ಅಭಿಮುಖೀಕರಿಸಿ ತನ್ನ ವಾದವನ್ನು ಮಂಡಿಸಲು ವಕೀಲರನ್ನು ನೀಡಿರುವ ದೇಶವಾಗಿದೆ ನಮ್ಮ ಭಾರತ.  ಇದು ಭಾರತೀಯ ನೀತಿ ನ್ಯಾಯ ವ್ಯವಸ್ಥೆಯ ಬಹುದೊಡ್ಡ ಮಹತ್ವವಾಗಿದೆ. ಆ ಮಹತ್ವವನ್ನು ನಿಷ್ಕ್ರಿಯಗೊಳಿಸುವುದರ ಮೂಲಕ ಧ್ವಂಸವಾಗುತ್ತಿರುವುದು ಪ್ರಜಾಪ್ರಭುತ್ವ ಭಾರತವಾಗಿದೆ.

ಆದರೆ ದೇಶದ್ರೋಹ ಕೃತ್ಯಗಳೆಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸಾಕ್ಷ್ಯಾಧರಗಳ ಮೂಲಕ ಸಾಬೀತುಪಡಿಸಲಾದ ಆರ್.ಎಸ್. ಎಸ್. ಸಂಘಪರಿವಾರ ಭಯೋತ್ಪಾದಕರು ನಡೆಸಲಾದ ಮಲೆಗಾಂವ್, ಮೆಕ್ಕಾ ಮಸ್ಜಿದ್, ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ UAPA ಅಡಿಯಲ್ಲಿ ಬಂದಿತರಾದ ಕರ್ನಲ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಗ್ಯಾಸಿಂಗ್, ನಿವೃತ್ತ ಸೇನಾಧಿಕಾರಿ ರಮೇಶ್ ಉಪಾಧ್ಯಾಯ, ಅಸೀಮಾನಂದ್, ಸುಧಾಕರ್ ಚತುರ್ವೇದಿ, ಸ್ವಾಮಿ ದಯಾನಂದ್ ಮುಂತಾದ  ಬಹುತೇಕ ಅಪರಾಧಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಲಾಗಿದೆ ಎಂಬುದು ಗಮನಿಸಿಬೇಕಾದ ಇನ್ನೊಂದು ವಿಚಾರ. ಇದರಲ್ಲಿ ಪ್ರಗ್ಯಾಸಿಂಗ್ ಎಂಬ ಹಿಂದುತ್ವ ಭಯೋತ್ಪಾದಕಿ ಬಿಜೆಪಿ ಟಿಕೆಟಿನಲ್ಲೇ ಲೋಕಸಭೆಗೆ ಆಯ್ಕೆಯಾಗಿರುತ್ತಾರೆ. ದೇಶವಿರೋಧಿ ಕೃತ್ಯದ ಆರೋಪಿಯನ್ನು ಲೋಕಸಭೆಗೆ ಆಯ್ಕೆ ಮಾಡಿರುವ ಬಿಜೆಪಿ ಬೆಂಬಲಿತ ಸಂಘಟನೆಗಳಿಗೆ ಇತರರ ದೇಶಪ್ರೇಮವನ್ನು ಅಳತೆಮಾಡುವ ಯೋಗ್ಯತೆಯಾದರೂ ಏನಿದೆ ?

ಹಿಝ್ಬುಲ್ ಮುಜಾಹಿದ್ದೀನ್ ಉಗ್ರರೊಂದಿಗೆ ಸೆರೆ ಹಿಡಿಯಲಾದ ಡಿವೈಎಸ್ಪಿ ದೆವೀಂದರ್ ಸಿಂಗ್ ಭಾರತದಲ್ಲಿ ಉಗ್ರರಿಗೆ ಬೇಕಾದ ಎಲ್ಲಾ ಸಹಕಾರಗಳನ್ನು ನೀಡುತ್ತಿರುವ ಉಗ್ರರನ್ನು ಸುರಕ್ಷಿತವಾಗಿ ಭಾರತದಲ್ಲಿ ಪ್ರಯಾಣಿಸಲು ಅವಕಾಶ ಒದಗಿಸುವ ಕೊಡಿಯ ಅಪರಾಧಿ. ಹಲವು ವೀರಯೋಧರು ಪ್ರಾಣತ್ಯಾಗ ಮಾಡಲಾದ ಪುಲ್ವಾಮ ದಾಳಿಯಲ್ಲಿ ಸಂಶಯಾಸ್ಪದ ವಿಚಾರಗಳು ಅಡಗಿರುವಾಗ  ದೆವೀಂದರ್ ಸಿಂಗನನ್ನು ತನಿಕೆಗೆ ಒಳಪಡಿಸಿದರೆ ಎಲ್ಲಾ ಸುಳಿವುಗಳು ಹೊರಬರುವ ಸಾಧ್ಯತೆಗಳಿತ್ತು. ಆದರೂ ಈ ದೇಶದ್ರೋಹಿ ಅಪರಾಧಿಗೆ ಜಾಮೀನು ನೀಡುವ ಮೂಲಕ ದೇಶದಲ್ಲಿ ದೇಶವಿರೋಧಿ ಉಗ್ರಚಟುವಟಿಕೆಗಳ ಮೂಲ, ಹಲವು ಸ್ಪೋಟಗಳ ಸುಳಿವು ಹೊರತರುವ ಅವಕಾಶ ಆಡಳಿತವರ್ಗ ನಿರ್ಲಕ್ಷಿಸಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಮದನಿಯಂತಹ ಸಾಕ್ಷ್ಯಾಧಾರಗಳಿಲ್ಲದ ಸಾವಿರಾರು ಅಮಾಯಕರು UAPA ದಾಖಲಿಸಿ  ಜೈಲಿನಲ್ಲಿ ಕೊಳೆಯುವಾಗ  ಸಾಕ್ಷ್ಯಗಳಿರುವ ಅಪರಾಧಿಗೆ ಜಾಮೀನು ನೀಡಿದ್ದು UAPA  ಎಂಬ ಕರಾಳನಿಯಮ ಕೇವಲ ಒಂದು ಸಮುದಾಯದ ಮೀಸಲಾತಿಯೇ ಎಂಬ ಪ್ರಶ್ನೆ ಮೂಡಿಬರುತ್ತಿದೆ.

✒️ ಉನೈಸ್ ಹುಂಡಿ (ಕೊಡಗು)

Share this on:
error: Content is protected !!