ಎಂ ಎಸ್ ಆಸಿಫ್ ಮೂಡಿಗೆರೆ
ಕೊರೋನ ಎಂಬ ಮಹಾ ಮಾರಿ ರೋಗ ಬಂದು ನಮ್ಮೆಲ್ಲರಲ್ಲಿ ಭಯದ ವಾತಾವರಣಕ್ಕೆ ಅಡಿಪಾಯ ಮಾಡಿ ಕೊಟ್ಟರೆ .ಆ ಭೀಕರತೆಯಿಂದ ರಕ್ಷೆ ಹೊಂದಬೇಕು ಎಂಬ ಹಂಬಲದಲ್ಲಿದ್ದರೆ. ಇಲ್ಲಿ ಕೆಲವರು ಕ್ರೂರ ಪ್ರಾಣಿಗಳಂತೆ ತಮ್ಮ ಸುಖಕ್ಕಾಗಿ ಬೇರೆಯವರ ಪ್ರಾಣ ತೆಗೆಯುತ್ತಿದ್ದಾರೆ. ನನ್ನ ಬರಹದ ಉದ್ದೇಶ ಹೆಣ್ಣು ಮಕ್ಕಳನ್ನು ಬದುಕಲು ಬಿಡದ ಈ ಸಮಾಜದ ಕೆಲವು ಕ್ರೂರಿಗಳ ಕುರಿತು ತಮಗೆಲ್ಲರಿಗೂ ಗೊತ್ತಿರಬಹುದು ಈ ಹಿಂದೆ ನಡೆದ ಅತ್ಯಾಚಾರದ ಕುರಿತು. ನಾನು ಸವಿಸ್ತಾರವಾಗಿ ಬರೆಯುವ ಅವಶ್ಯಕತೆ ಇಲ್ಲವೆಂದು ಭಾವಿಸುತ್ತಾ.. ಉತ್ತರ ಪ್ರದೇಶದ ಮನಿಷಾ ವಾಲ್ಮೀಕಿ ಈ ಹೆಸರು ಎಲ್ಲಾರು ಕೇಳಿರ ಬಹುದು ನ್ಯೂಸ್ ಚಾನಲ್ ನ್ಯೂಸ್ ಪೇಪರ್ ಯ್ಯೂಟುಬ್ ಗಳಲ್ಲಿ ಪ್ರಸಾರವಾಗುತ್ತಿರುವ ಒಂದು ಮುಗ್ಧ ಹೆಣ್ಣಿನ ದಯನೀಯ ಸುದ್ದಿ. ಈಕೆ ತನ್ನ ತಾಯಿಯೊಂದಿಗೆ ಹುಲ್ಲು ತರಲು ಹೋದ ಸಂದರ್ಭದಲ್ಲಿ 4 ದುಷ್ಕಾರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಮಾಡಿ ಆಕೆಯ ನಾಲಿಗೆ ಕತ್ತರಿಸಿ ಬೆನ್ನು ಮೂಳೆ ಪುಡಿಮಾಡುತ್ತಾರೆ ಮತ್ತು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಸೆಪ್ಟೆಂಬರ್ 29 ರಂದು ಆಕೆ ಬಾರದ ಲೋಕಕ್ಕೆ ಪಯಣ ಬೆಳೆಸುತ್ತಾಳೆ. ಆದರೆ ಯಾರು ಇದರ ಕುರಿತು ಧ್ವನಿ ಎತ್ತಲಿಲ್ಲ ಎಲ್ಲಿ ನಮ್ಮ ನಾಯಕರು. ಯಾಕೆ ಸ್ವಾಮಿ ನಮ್ಮ ಹೆಣ್ಮು ಮಕ್ಕಳಿಗೆ ಈ ಶಿಕ್ಷೆ.ಅವರಿಗೆ ಈ ದೇಶದಲ್ಲಿ ಬದುಕುವ ಅವಕಾಶ ಇಲ್ವ ಹೆಣ್ಣಿಗೆ ಈ ಭೂಮಿಯಲ್ಲಿ ಸ್ಥಾನ ಇಲ್ವ ಇದಕ್ಕೆಲ್ಲ ಕೊನೆ ಯಾವಾಗ? ಅತ್ಯಾಚಾರಿಗಳಿ ಶಿಕ್ಷೆ ಯಾವಾಗ ಇನ್ನೂ ಎಷ್ಟು ಹೆಣ್ಣು ಮಕ್ಕಳ ಜೀವ ಬಲಿಯಾಗಬಹುದು??
ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು….
ಅವರ ನ್ಯಾಯಕ್ಕಾಗಿ ನಾವು ಒಂದುಗೂಡೋಣ….