Latest Posts

ಭಾರತದ ಸಂವಿಧಾನ: ಭವಿಷ್ಯದ ಆತಂಕಗಳು

ಭಾರತದ ಸಂವಿಧಾನವು ಪ್ರಪಂಚ ಕಂಡ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರತಿಯೊಂದು ಮಜಲುಗಳಲ್ಲೂ ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ಭದ್ರ ಬುನಾದಿ ಮೇಲೆ ಕಟ್ಟಿದ ತತ್ವ ಸಂಹಿತೆಯಾಗಿದೆ ಸಂವಿದಾನ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ವಾಭಿಮಾನಕ್ಕೆ ದಕ್ಕೆಯಾಗದ ರೀತಿಯಲ್ಲಾಗಿರುವ ನಮ್ಮ ಸಂವಿಧಾನ ಎಲ್ಲಾ ರಾಷ್ಟ್ರಗಳಿಗೂ ಮಾದರಿಯಾಗಿದೆ. ಪ್ರಜಾಪ್ರಭುತ್ವದ ವಿರೋದಿ ಧೋರಣೆಯೊಂದಿಗೆ ಸರ್ವಾಧಿಕಾರಕ್ಕೆ ಹೆಚ್ಚಿನ ಮಹತ್ವ ಕಲ್ಪಿಸಿದ ಬ್ರಿಟೀಷರ ಕಪಿಮುಷ್ಠಿಯಿಂದ ಭಾರತವು ಬಿಡುಗಡೆಗೊಂಡಾಗ ಭಾರತದ ಸ್ಥಿತಿಯು ಶೋಚನೀಯವಾಗಿತ್ತು. ಉತ್ತಮ ಮಾರ್ಗದರ್ಶನದ ಕೊರತೆ, ಬಡತನದಿಂದ ಹಸಿದು ಕುಳಿತ ಜನರು ಒಂದಡೆಯಾದರೆ, ಪಾಕಿಸ್ತಾನದ ವಿಭಜನೆಯು ಭಾರತವನ್ನು ಇನ್ನಷ್ಟೂ ಕಗ್ಗಂಟಿನಲ್ಲಿ ಸಿಲುಸಿತ್ತು. ಅಸ್ಪೃಶ್ಯತೆ, ಹಸಿವುಗಳ ನಡುವೆಯೂ ಸುಧೃಡ ಭಾರತಕ್ಕಾಗಿ ಕಾಲವೂ ಹಾತೊರೆಯುತ್ತಿತ್ತು. ಆ ಕೆಲಸವು ಅಷ್ಟೊಂದು ಸುಲಭದಾಯಕವಾಗಿರಲಿಲ್ಲ. ಈ ಸಂದರ್ಭದಲ್ಲಿ ಕೊನಗೂ ಜನರ ಕಷ್ಟಕಾರ್ಪನ್ಯಗಳನ್ನ ಅರಿತ ಸಂವಿಧಾನ ತಜ್ಞರ ಹುಡುಕಾಟದಲ್ಲಿ ಬಾರತವು ವಿಜಯಿಯಾಯಿತು.. ಶೋಷಿತ ವರ್ಗದಿಂದ ಬಂದ ಬುದ್ಧಿ ಚಾತುರ್ಯದ ವಿಸ್ಮಯ ಕಲಾಗಾರ, ದೇಶಕಂಡ ಅಪ್ರತಿಮ ಮೇಧಾವಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನಕ್ಕೆ ಕಾಲವು ಸಾಕ್ಷಿಯಾಯಿತು. 1947 ಅಗಷ್ಟ್ 29ರಂದು ಸಂವಿದಾನವು ಅಸ್ತಿತ್ವಕ್ಕೆ ಬಂತು..

1948 ಜನವರಿ ತಿಂಗಳಲ್ಲಿ ಸಂವಿಧಾನದ ಕರಡು ಪ್ರತಿಯನ್ನು ರಚಿಸಲಾಯಿತು. ಎಂಟು ತಿಂಗಳ ಕಾಲ ನಾಗರಿಕರಿಂದ ಚರ್ಚಿಸಲ್ಪಟ್ಟಿತು. ಬುದ್ಧಿ ತೀಕ್ಷ್ಣರೂ, ವಿಶಾಲ ಚಿಂತಕರೂ, ಆದ ಸಂವಿದಾನ ರಚನಕಾರರು ಹನ್ನೊಂದು ಭಾರಿ ಚರ್ಚಿಸಿ ಮಹತ್ವದ ತೀರ್ಮಾನಗಳನ್ನು ಕೈಗೊಂಡರು. ಸುಮಾರು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿವಸಗಳ ಕಾಲ ಚರ್ಚಿಸಲ್ಪಟ್ಟು 63 ಲಕ್ಷ 98 ಸಾವಿರದ 729 ರುಪಾಯಿಗಳ ವೆಚ್ಚದಲ್ಲಿ ಸಿದ್ಧ ಪಡಿಸಿದ ಸಂವಿಧಾನ ಕೊನೆಗೆ 1950 ಜನವರಿ 26 ರಂದು ಸ್ವತಂತ್ರ್ಯ ಭಾರತಕ್ಕೆ ಅರ್ಪಿಸಲಾಯಿತು.

ಸ್ವಾತಂತ್ರ್ಯ ನಂತರ ಭಾರತವನ್ನು ಒಂದಾಗಿಸಿ ನಿಲ್ಲಿಸಿದ ಶಕ್ತಿ ಕೇಂದ್ರವಾಗಿದೆ ಸಂವಿಧಾನ. ವಿವಿಧತೆಯಲ್ಲಿ ಏಕತೆ ಎಂಬುದಾಗಿ ಅದರ ಮಂತ್ರ. ಇಂದು ದೇಶಮಾತ್ರ ಸ್ವಾತಂತ್ರ್ಯವಾಗಿರುವುದಲ್ಲ. ನಾವೆಲ್ಲರೂ ಸ್ವತಂತ್ರರಾಗಿದ್ದೇವೆ. ಅದುವೇ ಸಂವಿದಾನದ ಮಹತ್ವ. ಸಾಧಿಸುವ ತಾಕತ್ತು, ದೈರ್ಯ, ಮತ್ತು ಆತ್ಮವಿಶ್ವಾಸ ಇದ್ದರೆ ಜಗತ್ತನ್ನೇ ಗೆಲ್ಲುವ ಸಾದ್ಯತೆ ಸಂವಿದಾನವೂ ಪ್ರತಿ ಬಾರತೀಯರಿಗೆ ಕೊಟ್ಟಿದೆ. ಹಾಗೇ ಅನೇಕ ಮಂದಿ ಅಂತಹ ಸಾಧನೆಯನ್ನು ಮಾಡಿದ್ದಾರೆ…

ಜಗತ್ತಿನಾದ್ಯಂತ ಫ್ಯಾಶಿಸ್ಟ್ ಹಾಗೂ ಕಮ್ಯೂನಿಷ್ಟ್ ಸಿದ್ಧಾಂತಗಳು ಪ್ರಬಲವಾಗಿದ್ದ ಕಾಲದಲ್ಲಿ ಭಾರತದಂತಹ ಬಹುಮುಖ ಸಂಸ್ಕೃತಿಯ ರಾಷ್ಟ್ರವೊಂದು ಇದ್ಯಾವುದರ ಪ್ರಭಾವಕ್ಕೂ ಒಳಗಾಗದೇ ತನ್ನನ್ನು ಆಳುತ್ತಿದ್ದ ವಸಾಹತುಶಾಹಿ ರಾಷ್ಟ್ರವಾದ ಇಂಗ್ಲೆಂಡಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದು ವಿಶೇಷವೇ ಸರಿ. ಆಕಸ್ಮಾತ್ ಅಂದು ಈ ಪ್ರಜಾಪ್ರಭುತ್ವ ಶೈಲಿಯನ್ನು ಒಪ್ಪಿಕೊಳ್ಳದೇ ಹೋಗಿದ್ದಲ್ಲಿ ಇವತ್ತು ಭಾರತವೊಂದು ಸಮಗ್ರ ಸಾರ್ವಭೌವ ರಾಷ್ಟ್ರವಾಗಿ ಉಳಿಯಲು ಸಾದ್ಯವಿರಲಿಲ್ಲ. ಜನರ ಆಶಯಗಳಿಗೆ ಪೂರಕವಾದ ಒಂದು ಸಂವಿಧಾನವನ್ನು ಅಂಗೀಕರಿಸಿ ಅದರ ಪ್ರಕಾರವೇ ನಿಗದಿತ ಅವಧಿಗಳಿಗೆ ಸಾರ್ವತ್ರಿಕ ಚುನಾವಣೆಗಳ ಪ್ರಕೃಯೆಯನ್ನು ಕೇಂದ್ರದಲ್ಲಿ ಜನಪ್ರತಿನಿಧಿಗಳ ಸಂಸತ್ತು, ರಾಜ್ಯಮಟ್ಟದಲ್ಲಿ ವಿಧಾನಸಭೆಗಳೆಂಬ ಶಾಶಕಾಂಗವನ್ನು, ಶಾಶನಗಳನ್ನು ಜಾರಿಗೆ ತರಲು ಪೂರಕವಾಗುವಂತಹ ಕಾರ್ಯಾಂಗವನ್ನು ಇವೆಡರ ಮೇಲೆ ಸ್ವತಂತ್ರವಾದ ಒಂದು ನ್ಯಾಯಾಂಗ ವ್ಯವಸ್ಥೆಯನ್ನೊಳಗೊಂಡ ನಮ್ಮ ಸಂಸದೀಯ ಪ್ರಜಾಸತ್ತೆಗೆ ಏಳು ದಶಕಗಳು ತುಂಬಿರುವ ಈ ಸಂದರ್ಭದಲ್ಲಿ ಈ ವ್ಯವಸ್ಥೆಯು ಅಪಮೌಲ್ಯಗಳಾಗುತ್ತಿರುವಾಗ ಭವಿಷ್ಯದಲ್ಲಿ ಆತಂಕ ಕಟ್ಟಿಟ್ಟಬುತ್ತಿಯಾಗುತ್ತಿದೆ.

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮ ಪ್ರಜಾಪ್ರಭುತ್ವಕ್ಕೆ ಹೊಸ ಸಮಸ್ಯೆಗಳು ಹೊಸ ಸವಾಲುಗಳು ಎದುರಾಗುತ್ತಿದೆ. ಈ ಸವಾಲು ಸಮಸ್ಯೆಗಳನ್ನು ವಿಶ್ಲೇಶಿಸಿ ನೋಡಿದಾಗ ಅವುಗಳ ನಿವಾರಣೆಗೆ ಬೇಕಾದ ಮಾರ್ಗಗಳನ್ನು ಹುಡಿಕೊಳ್ಳುವುದು ಇವತ್ತಿನ ಅನಿವಾರ್ಯತೆಯಾಗಿದೆ. ಇಲ್ಲವಾದರೆ ಭವಿಷ್ಯದಲ್ಲಿ ಆತಂಕದಿಂದ ದಿನದೂಡಬೇಕಾದ ದಿನಗಳು ಬಂದೆರಗಬಹುದು.

ಜಗತ್ತಿನ 165 ದೇಶಗಳ ಸಮೀಕ್ಷೆ ನಡೆಸಿದ “ದಿ ಎಕನಾಮಿಕ್ಸ್ ಇಂಟೆಲಿಜೆನ್ಸ್ ಯುನಿಟ್” ಪ್ರಕಟಿಸಿದ ಪ್ರಜಾಪ್ರಭುತ್ವ ಸೂಚ್ಯಾಂಕದಲ್ಲಿ ಭಾರತದ ಶ್ರೇಯಾಂಕವು ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ 10 ಸ್ಥಾನ ಕುಸಿದು 51ಕ್ಕೆ ಇಳಿದಿದೆ. ಹತ್ತು ಅಂಕಗಳಲ್ಲಿ ಭಾರತವು 6.90 ಅಂಕ ಪಡೆದಿದೆ. ‘ದೇಶದಲ್ಲಿ ನಾಗರಿಕ ಸ್ವಾತಂತ್ರ್ಯದ ಸವಕಳಿಯೇ ಪ್ರಜಾಪ್ರಭುತ್ವದ ಹಿನ್ನಡೆಗೆ ಪ್ರಮುಖ ಕಾರಣ’ವೆಂದು ವರದಿಯಲ್ಲಿ ಹೇಳಲಾಗಿದೆ. ದೇಶಗಳು ಪಡೆದ ಅಂಕಗಳ ಆಧಾರದಲ್ಲಿ ನಾಲ್ಕು ವರ್ಗಗಳಾಗಿ ಗುರುತಿಸಲಾಗಿದೆ. ಪೂರ್ವ ಪ್ರಜಾಪ್ರಭುತ್ವ, ಲೋಪಗಳಿಂದ ಕೂಡಿದ ಪ್ರಜಾಪ್ರಭುತ್ವ, ಹೈಬ್ರಿಡ್ ಪ್ರಜಾಪ್ರಭುತ್ವ, ನಿರಂಕುಶಾಧಿಕಾರ ಪ್ರಜಾಪ್ರಭುತ್ವ ಎಂಬುದಾಗಿದೆ ಈ ವರ್ಗಗಳು. ಭಾರತವು ಲೋಪಗಳಿಂದ ಕೂಡಿದ ಪ್ರಜಾಪ್ರಭುತ್ವ ವರ್ಗದಲ್ಲಿ ಇದೆ. ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯದ, ನಾಗರಿಕ ಹಕ್ಕುಗಳಿಗೆ ಗೌರವ ಇದ್ದರೂ ದುರ್ಬಲ ಆಡಳಿತ, ರಾಜಕೀಯ ಸಂಸ್ಕೃತಿಯು ಪ್ರಬುದ್ಧಗೊಂಡಿಲ್ಲದ ಮತ್ತು ರಾಜಕೀಯ ಭಾಗಿದಾರಿಕೆ ಕಡಿಮೆ ಪ್ರಮಾನದಲ್ಲಿರುವ ದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ.

2014ರ ಬಳಿಕ ಭಾರತದ ಶ್ರೇಯಾಂಕ ಕುಸಿಯುತ್ತಲೇ ಸಾಗಿದೆ ಎಂಬುದು ಕಳವಳದ ವಿಚಾರ. ‘ದಿ ಎಕನಾಮಿಸ್ಟ್’ ತನ್ನ ಇತ್ತೀಚಿನ ಸಂಚಿಕೆಯಲ್ಲಿ “ನರೇಂದ್ರ ಮೋದಿ ಮತ್ತು ಅವರ ಪಕ್ಷವು ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳುತ್ತಿದೆ” ಎಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದೆ. ಆದರೆ ವರ್ಷಗಳು ಕಳೆಯುತ್ತಾ ಹೋದಂತೆ ಪ್ರಜಾಪ್ರಭುತ್ವ ಸೊರಗುತ್ತಲೇ ಹೋಗುತ್ತಿದೆ.2018ರ ಜನವರಿಯಲ್ಲಿ ಸುಪ್ರಿಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳ ಮಾದ್ಯಮಾಗೋಷ್ಠಿ ನಡೆಸಿ “ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದಿದ್ದರು. ದೇಶದ ಕರಾಳ ಯೋಜನೆಗಳ ವಿರುದ್ಧವಾಗಿ ದೇಶದ ಉನ್ನತ ಪೌರರಾದ ಐಎಎಸ್, ಐಪಿಎಸ್, ನ್ಯಾಯಮೂರ್ತಿಗಳು ಹುದ್ದೆಯನ್ನು ತ್ಯಜಿಸಿ ಭವಿಷ್ಯದ ಆತಂಕವನ್ನು ಪ್ರಕಟಿಸುತ್ತಿದ್ದಾರೆ.

ವರ್ತಮಾನ ಭಾರತದ ಅತೀದೊಡ್ಡ ಸಮಸ್ಯೆಯಾಗಿ ಜಾತೀಯತೆಯನ್ನು ಪರಿಗಣಿಸಬಹುದಾಗಿದೆ. ಮನುಸ್ಮೃತಿಯ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಮತ್ತೆ ದೇಶದಲ್ಲಿ ಜಾರಿ ತರುವ ಪ್ರಯತ್ನವು ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ದೇಶದ ಆಡಳಿತ ವ್ಯವಸ್ಥೆಯೇ ಸಂಪೂರ್ಣ ಸಹಕಾರ ನೀಡುತ್ತಿರುವುದು ಅತೀ ದೊಡ್ಡ ದುರಂತವೇ ಸರಿ. ಇದರ ಪರಿಣಾಮವಾಗಿ ಇಲ್ಲಿನ ಹಿಂದುಳಿದ ವರ್ಗಗಳ ಮೇಲೆ ನಿರಂತರ ದಾಳಿ ಸಾಮೂಹಿಕ ಬಹಿಷ್ಕಾರ, ಅತ್ಯಾಚಾರಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ. ಜೊತೆಗೆ ಕ್ಷುಲಕ ಕಾರಣಗಳನ್ನೊಡ್ಡಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಗೋಹತ್ಯೆ, ಗೋಮಾಂಸದ ಹೆಸರಿನಲ್ಲಿ ನರಹತ್ಯೆ ಮಾಡುವಂತಹ ಮನೋಸ್ಥಿತಿಯೇ ಮೇಲುಗೈ ಸಾಧಿಸಿದೆ. ದಲಿತರ ಹತ್ಯೆ, ಫ್ಯಾಸಿಷ್ಟ್ ಶಕ್ತಿಗಳ ಅಟ್ಟಹಾಸವು ಮಿತಿಮೀರಿ ಹೋಗಿದೆ. ಈ ದೇಶದ ವ್ಯೆವಿದ್ಯತೆ ಹಾಗೂ ಬಹುತ್ವವನ್ನು ತೊಡೆದು ಹಾಕಿ ಏಕಧರ್ಮ ಸಂಹಿತೆಯನ್ನು ಜಾರಿಗೊಳಿಸುವ ಹುನ್ನಾರವು ತೆರೆಮರೆಯಲ್ಲಿ ನಡೆಯುತ್ತಿದ್ದು ಇದು ಪ್ರಜಾಪ್ರಭುತ್ವದ ಅಳಿವುಳಿವಿನ ಪ್ರಶ್ನೆಯಾಗಿ ನಮ್ಮನ್ನು ಕಾಡುತ್ತಿದೆ.

ಹಿಂದೂ ರಾಷ್ಟ್ರದ ಅಜೆಂಡದೊಂದಿಗೆ ಅಸ್ತಿತ್ವಕ್ಕೆ ಬಂದ ಆರೆಸ್ಸೆಸ್ ಹಾಗೂ ಜನಸಂಘದ ಕೂಸಾಗಿರುವ ಬಿಜೆಪಿ ಸರಕಾರವು ಇಂದು ದೇಶದಲ್ಲಿ ಆಡಳಿತ ನಡೆಸುತ್ತಿದೆ. ಅಲ್ಲದೇ ಬಹುತೇಕ ರಾಜ್ಯಗಳಲ್ಲಿಯೂ ಬಿಜೆಪಿ ನೇತೃತ್ವದ ಸರಕಾರವೇ ಅಸ್ತಿತ್ವದಲ್ಲಿದೆ.ಇಡೀ ದೇಶವನ್ನೇ ತನ್ನ ತೆಕ್ಕೆಯಲ್ಲಿಡುವ ಪ್ರಯತ್ನದಲ್ಲಿದೆ. ಹೀಗಿರುವಾಗ ದೇಶದ ಜ್ಯಾತಾತೀತ ಪರಂಪರೆಗೆ ಬಹುದೊಡ್ಡ ಹೊಡೆತ ಬೀಳುವ ಆತಂಕವೂ ಪ್ರಜ್ಞಾವಂತರಲ್ಲಿ ಕಾಡಲಾಂಭಿಸಿದೆ. ಇತ್ತೀಚಿನ ದಿನಗಳಲ್ಲಿನ ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡರ ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿದೆ. ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೊಬ್ಬರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಕೂಡ. ದೇಶದ ಸೌರ್ವಭೌಮತೆಗೆ ಕೊಡಲಿಯೇಟು ನೀಡುವಂತಹ ಇಂತಹ ಪ್ರಯತ್ನಗಳು ಸಮಾಜದ ಮುಖ್ಯವಾಹಿನಿಯಲ್ಲೇ ನಡೆಯುತಲಿದ್ದು, ಅದನ್ನು ಪ್ರಶ್ನಿಸುವವರಿಗೆ ದೇಶದ್ರೋಹದ ಪಟ್ಟಕಟ್ಟಿ ಧ್ವನಿ ಅಡಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪ್ಯಾಶಿಷ್ಟ್ ಶಕ್ತಿಗಳ ವಿರುದ್ಧ ದ್ವನಿ ಎತ್ತಿದ ದಲಿತ ನಾಯಕ ಜಿಗ್ನೇಶ್ ಮೆವಾನಿ, ವಿದ್ಯಾರ್ಥಿ ನಾಯಕ ಕಣ್ಹಯ್ಯ ಕುಮಾರ್, ಶೆಹ್ಲಾ ರಶೀದ್ ಮುಂತಾದವರ ಮೇಲೆ ಇಂತಹದ್ದೇ ಪ್ರಯೋಗವನ್ನು ಮಾಡಲಾಗಿದೆ. ಒಟ್ಟಿನಲ್ಲಿ ಭಾರತದ ಪ್ರಜೆಗಳ ಮೂಲಭೂತ ಹಕ್ಕನ್ನು ಕಸಿದು ಕೊಳ್ಳುವ ಪ್ರಯತ್ನ ಆಡಳಿತ ವರ್ಗದಿಂದ ನಡೆಯುತ್ತಿದೆ.

ಇನ್ನೂ 21ನೇ ಶತಮಾನದಲ್ಲಿ ಇಡೀ ವಿಶ್ವವೇ ಭಯೋತ್ಪದಕತೆಯ ಪಿಡುಗಲ್ಲಿ ಸಿಕ್ಕಿ ನರಳುತ್ತಿದೆ. ಭಾರತವು ಇದಕ್ಕೇನು ಹೊರತಾಗಿಲ್ಲ. ನೆರೆಯ ದೇಶಗಳಿಂದ ನುಸುಳಿ ಬಂದು ದೇಶದೊಳಗೆ ಭಯೋತ್ಪಾದನೆ ನಡೆಸುವ ಚಟುವಟಿಕೆ ಒಂದಡೆಯಾದರೆ ಆಂತರಿಕವಾಗಿ ಹೆಚ್ಚುತ್ತಿರುವ ಮತಾಂಧ ರಾಜಕಾರಣ ಇನ್ನೊಂದೆಡೆ ಭಯೋತ್ಪಾದಕತೆ ಸೃಷ್ಟಿಸುತ್ತಿದೆ. ದೇಶದ ಭದ್ರತೆಗೆ ಮಾರಕವಾಗುತ್ತಿರುವ ಆಂತರಿಕ ಹಾಗೂ ಬಾಹ್ಯ ಭಯೋತ್ಪಾದನೆಗಳು ನಮ್ಮ ಆರ್ಥಿಕ ವ್ಯವಸ್ಥೆಯ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳಾದ ಶಾಂತಿ ಸಹಭಾಳ್ವೆಯ ತತ್ವಗಳನ್ನೇ ನಾಶ ಮಾಡುತ್ತಿದೆ. ಪೋಲಿಸ್ ಹಾಗೂ ಭಯೋತ್ಪಾದಕರ ನಡುವೆ ಸಿಲುಕಿದ ಯಾವುದೇ ಸಾಮಾನ್ಯ ಮನುಷ್ಯನಿಗೂ ನಿರಾತಂಕವಾಗಿ ಪ್ರಜಾಪ್ರಭುತ್ವ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಸಾದ್ಯವಿಲ್ಲ. ಅಭಿಪ್ರಾಯ ಸ್ವಾತಂತ್ರ್ಯವನ್ನೇ ಹತ್ತಿಕ್ಕಲು ಯತ್ನಿಸುವ ಭಯೋತ್ಪಾದನೆ ಕ್ರಮೇಣ ಪ್ರಜಾಪ್ರಭುತ್ವದ ಕುತ್ತಿಗೆಯನ್ನೇ ಹಿಚುಕುವುದು ಖಚಿತ.

ಶಾಂತಿ ಸಾಮರಸ್ಯದ ಭದ್ರ ಬುನಾದಿಯ ಮೇಲೆ ಕಟ್ಚಿದ ಈ ದೇಶದ ಶ್ರೇಷ್ಠ ಸಂವಿಧಾನವನ್ನೇ ಅಲುಗಾಡಿಸುವ ಪ್ರಯತ್ನ ಇಂದು ಕೆಲವರಿಂದ ನಡೆಯುತ್ತಿದೆ. ಒಂದು ಕಡೆ ಜ್ಯಾತಾತೀತ ಮೌಲ್ಯಗಳು ಅಪಮೌಲ್ಯಗಳಾಗುತ್ತಿದ್ದರೆ ರಾಜಕೀಯ ಅಧಿಕಾರಕ್ಕಾಗಿ ಜನರನ್ನು ದರ್ಮದ ಹೆಸರಿನಲ್ಲಿ ಕಚ್ಚಾಡಿಸಿ ಅಧಿಕಾರ ಗದ್ದುಗೆಗೇರುತ್ತಾರೆ. ಜನರ ಗುಲಾಮರಾಗಿ ಅಧಿಕಾರ ಹಿಡಿದ ರಾಜಕೀಯ ನಾಯಕರು ಸೊಗಸಾಗಿ ತಿಂದು ತೇಗಿ ಈ ದೇಶವನ್ನು ಲೂಟಿ ಹೊಡೆದು ಪ್ರಜಾಪ್ರಭುತ್ವದ ಪ್ರಜೆಯ ಹಕ್ಕನ್ನು ಕಸಿದುಕೊಂಡಿದ್ದಾರೆ…

ಜನರನ್ನು ದರ್ಮದ ಹೆಸರಿನಲ್ಲಿ ಹೊಡೆದಾಡಿಸುವ ಕೋಮುವಾದ, ಉಗ್ರವಾದಗಳು ಸಂವಿಧಾನಕ್ಕೆ ಮಾರಕವಾಗಿದೆ. ದರ್ಮ-ದರ್ಮಗಳ ಮದ್ಯೆ ಸಂಘರ್ಷ, ಜಾತಿ-ಜಾತಿಗಳ ಮದ್ಯೆ ಕಲಹ, ಮಂದಿರ ಮಸೀದಿಗಳ ನಡುವೆ ಹೊಡೆದಾಟ, ಪ್ರಾರ್ಥನ ಸ್ಥಳಗಳ ಮೇಲೆ ದಾಳಿ ಇಂತಹ ರಾಜಕೀಯ ಪ್ರೇರಿತ ಕುಕೃತ್ಯಗಳು ಪ್ರಜಾಪ್ರಭುತ್ವ ಭಾರತಕ್ಕೆ ಭೂಷಣವಲ್ಲ. “ಶಾಂತಿಯೇ ಜೀವನ, ಜ್ಯಾತಾತೀತಯೇ ಭಾರತದ ಉಸಿರು. ಕೋಮು ಆದಾರಿತ ಅಜೆಂಡಾ ಸಲ್ಲದು. ಎಲ್ಲರೂ ಸಮಾನರು. ಯಾರೂ ಮೇಲಲ್ಲ- ಯಾರೂ ಕೀಳಲ್ಲ. ಎಲ್ಲರಿಗೂ ಸಮಾನ ಹಕ್ಕು ಇಂತಹ ಶ್ರೇಷ್ಠ ಸಂವಿಧಾನವನ್ನು ಬದಲಾಯಿಸಲು ಹೊರಟ ನಾಲಾಯಕ್ ರಾಜಕೀಯ ವ್ಯಕ್ತಿಗಳು ರಾಷ್ಟ್ರದ್ರೋಹಿಗಳಲ್ಲದೇ ಮತ್ತೇನು?? ಇಂಥವರಿಂದ ಅಲ್ಲವೇ ದೇಶದ ಶ್ರೇಷ್ಠ ಸಂವಿಧಾನಕ್ಕೆ ಅಪಚಾರವಾಗುತ್ತಿರುವುದು.. ಹೇಳಿ?”

ಇಂತಹ ಮತೀಯ ರಾಜಕೀಯರ ಮುಕ್ತಿಗಾಗಿ ಹಾಗೂ ಕೋಮುವಾದ ಉಗ್ರವಾದಗಳ ವಿರುಧ್ದ ಯುವಜನಾಂಗದ ಹೋರಾಟ ಅಗತ್ಯವಾಗಿದೆ. ಜಾತಿ ದರ್ಮಗಳ ಅಂತರ ದೂರವಾಗಿಸಿ ಈ ದೇಶದ ಪ್ರಜೆಗಳು ನಾವೆಲ್ಲ ಒಂದೇ! ಎಂದು ಬೆಸೆಯುತ್ತಾ ಕಾರ್ಯಗಳು ನಡೆಯಬೇಕು. ಶಾಂತಿ, ಪ್ರೀತಿಯ ನೆಲಗಟ್ಟಿನ ಮೇಲೆ ನಿಂತು ಬಲಿಷ್ಠ ರಾಷ್ಟ್ರ ಕಟ್ಟಲು ಪ್ರತಿಯೊಬ್ಬರು ಪಣತೊಡಬೇಕು. ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ನಮ್ಮಿಂದಾಗಬೇಕು. ಆಗ ಮಾತ್ರ ನಮ್ಮ ದೇಶವು ಮತ್ತಷ್ಟೂ ಸುಧೃಡವಾಗುತ್ತದೆ…

ಸಪ್ವಾನ್ ಮಾಪಾಲ್

Share this on:
error: Content is protected !!