Latest Posts

ಸಾಮಾಜಿಕ ಜಾಲತಾಣ ನವಯುಗದ ಆಶ್ರಯ ತಾಣ

ಮಾನವ ಸದಾ ನೂತನ ಪ್ರಗತಿಯನ್ನು ರೂಪಿಸಲು ಚಿಂತಿಸುತ್ತಾನೆ. ಹಿಂದೆ ಜನರೆಡೆಯ ಸಂಪರ್ಕದಲ್ಲಿ ಸಾಮಾಜಿಕ ಜಾಲತಾಣಗಳ ಕೊರತೆ ಇದ್ದ ಕಾರಣ ಸಂವಹನಗಳ ಉತ್ತರಕ್ಕಾಗಿ ವಾರಗಳನ್ನು ವ್ಯರ್ಥಪಡಿಸಬೇಕಾಗುತ್ತಿತ್ತು. ಕ್ರಮೇಣ ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನಗಳನ್ನು ನಡೆಸತೊಡಗಿದರು. ಮಾಹಿತಿ, ಚಿತ್ರ ಹಾಗೂ ವೀಡಿಯೋಗಳನ್ನು ವಿನಿಮಯ ಮಾಡತೊಡಗಿದರು. ಸಾಮಾಜಿಕ ಜಾಲತಾಣವು ಇಡೀ ಜಗತ್ತಿನಲ್ಲಿ ವಿಸ್ತಾರವಾಗಿದ್ದು, ಇದರ ಪರಿಣಾಮವು ಜನರ ದೈನಂದಿನ ಜೀವನದಲ್ಲಿ ಅಗಾಧವಾಗಿ ಬೀರಿತು. ಜಾಲತಾಣದ ಬಳಕೆದಾರರು ಹೆಚ್ಚಾದಂತೆ ಜೀವನಶೈಲಿ ಬದಲಾವಣೆಗೂ ಅದು ಕಾರಣವಾಯಿತು. ಸಾಮಾಜಿಕ ಜಾಲತಾಣವು ಎಷ್ಟು ಕ್ಷಿಪ್ರ ಪ್ರಗತಿಯಲ್ಲಿ ಅವಿಷ್ಕಾರಗೊಳ್ಳುತ್ತಿವೆ ಎಂದರೆ, ಇಂದು ಆರ್ಥಿಕ ವಹಿವಾಟುಗಳು ಕೂಡ ಜಾಲತಾಣಗಳ ಮೂಲಕವೇ ನಡೆಯುತ್ತಿರುವುದೆಂಬುವುದು ಆಶ್ಚರ್ಯಕರವಾಗಿದೆ.
ಭಾರತದಲ್ಲಿ ಮೊಟ್ಟಮೊದಲು ಅಂತರ್ಜಾಲ ಸಂಪರ್ಕದ ಮೂಲಕ ಸಾಮಾಜಿಕ ಜಾಲತಾಣಗಳು ಪ್ರಾರಂಭವಾದದ್ದು 1988ರಲ್ಲಿ ಮುಂಬೈಯಲ್ಲಾಗಿದೆ. ನಂತರ ಅಹ್ಮದಬಾದ್, ಪುಣೆ, ಬರೋಡಾ, ಕೊಲ್ಕತ್ತಾ, ಹಾಗೂ ಚೆನ್ನೈ ಇತರ ನಗರಗಳಲ್ಲಿ ವಿಸ್ತಾರವಾಗಿ ಬೆಳೆಯಿತು. ಪ್ರಸ್ತುತ 100 ಮಿಲಿಯನ್ ಗಿಂತ ಹೆಚ್ಚು ಅಂತರ್ಜಾಲ ಬಳಕೆದಾರರು ಸಂಪರ್ಕ ಏರ್ಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯ ಪರಿಣಾಮ ಹಾಗೂ ದುಷ್ಪರಿಣಾಮಗಳೂ ಬೀರುತ್ತದೆ. ಇದು ಶೈಕ್ಷಣಿಕವಾಗಿ ಬಹಳ ಉಪಯುಕ್ತವಾಗಿದೆ. ಶೈಕ್ಷಣಿಕ ಕೌಶಲ್ಯಗಳನ್ನು ಸೃಷ್ಟಿಸಲು ಸಮರ್ಥರಾದ ವಿದ್ಯಾರ್ಥಿಗಳಿಗೆ ಅಧ್ಯಯನಗಳು, ತರಬೇತಿ ಶಿಬಿರಗಳು ಹಾಗೂ ಕೋರ್ಸ್ಗಳು ಮುಂತಾದವುಗಳನ್ನು ರೂಪಿಸಿಕೊಳ್ಳುವುದು ಬಹಳಷ್ಟು ಅನುಕೂಲಕಾರಿಯಾಗಿದೆ. ಕೆಲವರು ಯೂಟುಬ್ ಮುಂತಾದವುಗಳಿಂದ ದಿನದೂಡುತ್ತಿದ್ದಾರೆ. ಆದರೆ ಇವೆಲ್ಲವೂ ಪುಟ್ಟ ಮಕ್ಕಳಲ್ಲಿ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಇವುಗಳು ಮಕ್ಕಳ ಮನಸ್ಸನ್ನು ತನ್ನತ್ತ ಸೆಳೆಯುತ್ತದೆ. ಮಕ್ಕಳು ಸಮಯದಿಂದ ಸಿಂಹಪಾಲನ್ನೂ ಇ-ಲೋಕದಲ್ಲಿ ತಲ್ಲೀನರಾಗುವುದರಿಂದ ಅವರ ಅಂಗಾಂಗಳಿಗೆ ಮಾರಕ ದುಷ್ಪರಿಣಾಮಗಳು ಬೀರುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೋಸ,ವಂಚನೆ ಮತ್ತು ಅವ್ಯವಹಾರ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ.ಎಲ್ಲಾ ವಿಚಾರಗಳಲ್ಲೂ ಸಾಧಕ ಬಾಧಕಗಳಿದ್ದು ಸಾಮಾಜಿಕ ಜಾಲತಾಣವೂ ಇದರಿಂದ ಹೊರತಾಗಿಲ್ಲ. ಕೆಲವೊಂದು ಜಾಣತನವನ್ನು ಪ್ರದರ್ಶಿಸಿ, ಕ್ಷಿಪ್ರ ಪ್ರಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ಕೈಜೋಡಿಸಿದಲ್ಲಿ ಪ್ರತಿಯೊಬ್ಬರಿಗೂ ಪ್ರಗತಿಯ ಹಾದಿಯನ್ನು ತನ್ನದಾಗಿಸಬಹುದು.

ಸಾಲಿಂ ಅಮೀನ್ ಕನ್ಯಾನ       
(ವಿದ್ಯಾರ್ಥಿ ದಾರುನ್ನೂರ್ ಕಾಶಿಪಟ್ನ)

Share this on:
error: Content is protected !!