Latest Posts

ನೆಹರೂ : ಸ್ವಾತಂತ್ರ್ಯೋತ್ತದ ಭಾರತದ ನಿರ್ಮಾತೃ

1889 ನವೆಂಬರ್ 14 ಜವಾಹರಲಾಲರ ಜನ್ಮದಿನ ರಾಷ್ಟ್ರದಲ್ಲಿ ಅದನ್ನು ‘ಮಕ್ಕಳ ದಿನ’ ಎಂದು ಆಚರಿಸಲಾಗುತ್ತದೆ. ಮಕ್ಕಳ ಪಾಲಿಗೆ ಆ ಹಿರಿಯ ವ್ಯಕ್ತಿ ‘ಚಾಚಾ ನೆಹರು’. ಮಕ್ಕಳ ಜೊತೆ ಇರುವುದು, ಅವರೊಡನೆ ಮಾತಾಡುವುದು, ಅವರೊಂದಿಗೆ ಆಟವಾಡುವುದು ಜವಾಹರಲಾಲರಿಗೆ ತುಂಬ ಪ್ರಿಯವಾಗಿತ್ತು. ಕಾಶ್ಮೀರ, ಜವಾಹರಲಾಲರ ಪೂರ್ವಿಕರ ನಾಡು. ತಂದೆ ಮೋತಿಲಾಲರು. ತಾಯಿ ಸ್ವರೂಪರಾಣಿ, ಜವಾಹಲಾಲರು ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಹೋದರು. ಹ್ಯಾರೋ ಶಾಲೆಯ ಬಳಿಕ ಕೇಂಬ್ರಿಡ್ಜ್ನಲ್ಲಿ ರಸಾಯನಶಾಸ್ತ್ರ, ಭೂ ವಿಜ್ಞಾನ ಮತ್ತು ಸಸ್ಯಶಾಸ್ತ್ರ ವಿಷಯದಲ್ಲಿ ಪದವೀಧರರಾದರು. ಅನಂತರ ನ್ಯಾಯ ಶಾಸ್ತ್ರದಲ್ಲಿ ಪಾರಂಗತವಾಗಿ ಬಾರ್-ಅಟ್-ಲಾ ಪದವಿ ಪಡೆದರು. ಭಾರತಕ್ಕೆ ಹಿಂದಿರುಗಿದ ಬಳಿಕ ಪರಕೀಯರ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದರು. ಜವಾಹರಲಾಲರ ಮುಂದೆ ಗಾಂಧೀಜಿಯ ಪ್ರಭಾವದಿಂದ ನೆಹರು ಮನೆತನ ಸರ್ವಸ್ತವನ್ನು ದೇಶಕ್ಕಾಗಿ ಧಾರೆಯೆರೆಯಿತು. ನೆಹರು ಅವರ ಮಡದಿ ಕಮಲಾ, ತಂದೆ, ತಾಯಿ, ತಂಗಿ ಎಲ್ಲರೂ ಸ್ವಾತಂತ್ಯ ಸಮರದಲ್ಲಿ ಸಕ್ರಿಯಾವಾಗಿ ಪಾಲ್ಗೊಂಡರು. ಜೈಲುವಾಸವನ್ನು ಅನುಭವಿಸಿದರು. ಜವಾಹರರು ಬುದ್ದಿಜೀವಿ, ವಿಚಾರತಜ್ಞ , ಜಾಗತಿಕ ದೃಷ್ಟಿಕೋನವಿದ್ದವರು. ನೇರ ಮಾತು, ಧೀರ ನಿಲುವು ಅಚಲ ದೇಶಪ್ರೇಮಿ ಇವುಗಳಿಂದ ಅವರು ಭಾರತೀಯರ ಆರಾಧ್ಯ ಮೂರ್ತಿಯಾರರು. 1929 ರಲ್ಲಿ ಲಾಹೋರಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸಿನ ಅಧಿವೇಶನದಲ್ಲಿ “ಪೂರ್ಣ ಸ್ವಾತಂತ್ರ್ಯ” ನಮ್ಮ ಗುರಿ ಎಂದು ಘೋಷಿಸಲಾಯಿತು. ಧೀರ್ಘ ಕಾಲದ ಹೋರಾಟದ ನಂತರ ಭಾರತ 15 ಆಗಸ್ಟ್ 1947 ರಂದು ಸ್ವತಂತ್ರ್ಯಗೊಂಡಿತು. ಜವಾಹರಲಾಲ್ ನೆಹರು ಸ್ವತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿಯಾದರು. ಆಗ ಅವರಿಗೆ 58 ವರ್ಷ. ಮುಂದೆ 17 ವರ್ಷಗಳ ಕಾಲ ರಾಷ್ಟ್ರವನ್ನು ಪ್ರಧಾನಿಯಾಗಿ ಮುನ್ನಡೆಸಿದ ನೆಹರು 1964 ಮೇ 27 ರಂದು ನಿಧನರಾದರು. ಇತಿಹಾಸ ಜ್ಞಾನ , ಕಲೆ, ಸಾಹಿತ್ಯ , ನಾಟಕದಲ್ಲಿ ಅಪಾರ ಆಸಕ್ತಿಯಿದ್ದ ನೆಹರು ಭಾರತದ ಧೀಮಂತ ನಾಯಕರಾಗಿದ್ದರು. ಜವಾಹರರ ‘ಆತ್ಮಕಥೆ’, ‘ಜಗತ್ತಿಗೆ ಚರಿತ್ರೆಯ ಇಣುಕು ನೋಟಗಳು’ ಭಾರತ ದರ್ಶನ ಎಲ್ಲವೂ ಶ್ರೇಷ್ಠ ಕೃತಿಗಳು ಬ್ರಿಟಿಷ್ ಸರ್ಕಾರದ ವಿರುದ್ದ ಜೈಲುವಾಸ ಅನುಭವಿಸಿ ಒಟ್ಟು 1041 ದಿನ ಅಲ್ಲೇ ಕಳೆದಿದ್ದರು. ಜೈಲಿನಲ್ಲಿ ಬರವಣಿಗೆ, ಅಧ್ಯಯನಗಳಲ್ಲಿ ಕಾಲ ಸವೆಸಿದರು. ನೆಹರೂರವರು ಯುದ್ಧ ವಿರೋಧಿಯಾಗಿದ್ದರು. ಶಾಂತಿಸಾಧಕರಾಗಿದ್ದರು. ಸಹಭಾಳ್ವೆಯ ಸೂತ್ರಗಳನ್ನು ಪ್ರತಿಪಾದಿಸಿದ ಅವರು ಜಗತ್ತಿನಲ್ಲಿ ಶಕ್ತಿ ಬಣ್ಣಗಳಿಗೆ ಸೇರದ ಅಲಿಪ್ತ ರಾಷ್ಟ್ರಗಳ ಬಲವನ್ನು ನಿರ್ಮಿಸಲು ಕಾರಣರಾದರು. ಭಾರತದ ಏಳಿಗೆಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯವೆಂದು ನಂಬಿದ್ದರು. ಇದಕ್ಕಾಗಿ ಯೋಜನಬದ್ಧನಾಗಿ ಕೆಲಸ ಮಾಡಿದರು. ಅಣೆಕಟ್ಟುಗಳ ಭವ್ಯ ನಿರ್ಮಾಣಗಳನ್ನು ಕಂಡು ಮನತುಂಬಿದ ಜವಾಹರರು ಇವು ನಾನು ಪೂಜಿಸುವ ಭಾರತದ ನೂತನ ದೇವಾಲಯಗಳೆಂದರು. ಇದೇ ರಾಷ್ಟ್ರೀಯ ಯಾತ್ರಾಸ್ಥಳಗಳು ಎಂದರು. ನೆಹರು ಭಾರತದ ಸುಖೀ ರಾಜ್ಯದ ಕನಸು ಕಂಡವರು. ಹಗಲಿರುಳು ಭಾರತದ ಜನಕೋಟಿಯ ಹಿತಕ್ಕಾಗಿಯೇ ಕೆಲಸ ಮಾಡಿದರು. ಕೊನೆಯುಸಿರಿನ ತನಕ ಶ್ರೇಷ್ಠ ಪ್ರಜಾಪ್ರಭುತ್ವ ವಾದಿಯಾಗಿ ಜೀವನಸಾಗಿಸಿದರು.

Share this on:
error: Content is protected !!