Latest Posts

ಮದುವೆ ಸಹಾಯಕ್ಕೆ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ.!
ಕಣ್ಣೀರೊರೆಸುವ ಕಾಯಕಕ್ಕೆ ಬೆಲೆ ಕಟ್ಟಲಾಗದು

ಮುಲ್ಕಿ: ಮನುಷ್ಯರನ್ನು ದೇವನು ಒಂದೇ ರೀತಿಯಲ್ಲಿ ಸೃಷ್ಟಿಸಿಲ್ಲ.
ಎಲ್ಲಾ ರೀತಿಯಲ್ಲೂ ಅವರನ್ನು ವಿಭಿನ್ನವಾಗಿ ಸೃಷ್ಟಿ ಮಾಡಿದ್ದಾನೆ.
ಕೆಲವರಿಗೆ ಬೇಕಾದಷ್ಟು ಸೊತ್ತುವಿತ್ತಗಳನ್ನು ನೀಡಿದರೆ ಇನ್ನು ಕೆಲವರಿಗೆ ದಾರಿದ್ರ್ಯ ನೀಡಿದ್ದಾನೆ‌.
ಆರೋಗ್ಯ,ಬುದ್ದಿ,ಪ್ರತಿಭೆ,ಧೈರ್ಯ ಮೊದಲಾದವುಗಳಲ್ಲಿ ಹಲವರದ್ದು ಹಲವು ರೀತಿಯ ಸಾಮರ್ಥ್ಯ.
ಇದನ್ನು ಮನುಷ್ಯ ಒಳಿತಿಗಾಗಿ ವಿನಿಯೋಗಿಸಿದರೆ ತನ್ನ ಜೀವನದಲ್ಲಿ ಸಾರ್ಥಕ್ಯ ಪಡೆದು ದೇವನ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದಂತೆಯೇ ಸರಿ.
ಅಲ್ಲಾಹನು ನೀಡಿದ ಸಂಪತ್ತಿನಿಂದ ಒಂದು ಭಾಗ ಕಷ್ಟ ಕಾರ್ಪಣ್ಯದಲ್ಲಿರುವವರ ಕಣ್ಣೀರೊರೆಸಲು ವಿನಿಯೋಗಿಸುವುದು ಎಲ್ಲಕ್ಕಿಂತಲೂ ಮಿಗಿಲಾದ ಜನ ಸೇವೆಯಾಗಿದೆ.
ಅದಕ್ಕಾಗಿ ಚಾಚುವ ಸಹಾಯ ಹಸ್ತವು ಸಣ್ಣದಿರಲಿ ,ದೊಡ್ಡದಿರಲಿ ಅದು ಬೆಲೆ ಕಟ್ಟಲಾಗದ ಅಮೂಲ್ಯ ನಿಧಿಯಾಗಿದೆ ಎಂದು ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಇಮಾಂ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ನಮ್ಮ ಅಸುಪಾಸಿನ ಮುಸ್ಲಿಂ ಸಮಾಜದಲ್ಲಿ ಮದುವೆ ಕಾರ್ಯಕ್ಕಾಗಿ ಅತೀ ಹೆಚ್ಚು ಸಹಾಯ ಮಾಡ ಬೇಕಾದ ಪರಿಸ್ಥಿತಿ ಇದೆ.
ಕೊಡುಗೈ ದಾನಿಗಳು ನೀಡುವ ಸಾವಿರದಿಂದ ಹಿಡಿದು ಶುಕ್ರವಾರ ಮಸೀದಿಗೆ ಬರುವ ಸಾದಾ ಸೀದಾ ವ್ಯಕ್ತಿಗಳು ಕೊಡುವ ಹತ್ತು,ಐವತ್ತು ರೂಪಾಯಿ ಹಣವನ್ನು ಸಂಗ್ರಹಿಸಿ ಅದೆಷ್ಟೋ ಮಹಿಳೆಯರ ವಿವಾಹ ಕಾರ್ಯ ನಡೆಯುತ್ತಿದೆ.
ಹೀಗೆ ಸಹಾಯ ಮಾಡಿ ಮದುವೆ ಕಾರ್ಯ ನೆರವೇರಿಸುವುದು ನಮ್ಮ ನಾಡಿನಲ್ಲಿ ಸದ್ಯದ ಮಟ್ಟಿಗೆ ಅನಿವಾರ್ಯವಾಗಿದೆ.
ಹಲವು ಸಾಂಕೇತಿಕ ಕಾರಣಗಳನ್ನು ,ಕುಂಟು ನೆಪಗಳನ್ನು ಮುಂದಿಟ್ಟು ಕೆಲವರು ಇದಕ್ಕೆ ತಡೆಯೊಡ್ಡುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಧಾರ್ಮಿಕ ವ್ಯಾಖ್ಯಾನವನ್ನೂ ನೀಡುತ್ತಿದ್ದಾರೆ ಕೂಡಾ.
ನಿಜವಾಗಿಯೂ ಇದು ಸರಿಯಾದ ರೀತಿಯಲ್ಲ.
ಮದುವೆಯ ನೆಪದಲ್ಲಿ ಸಮಾಜವು ಚಾಚುವ ಸಹಾಯ ಹಸ್ತದಿಂದಾಗಿ ಅದಷ್ಟೋ ಕುಟುಂಬ ಸಂತುಷ್ಟಗೊಂಡಿದೆ.
ಮದುವೆ ವೇಳೆ ಖರೀದಿಸಿದ ಚಿನ್ನಾಭರಣಗಳು ಮನೆಕಟ್ಟುವ ವೇಳೆ,ಮಕ್ಕಳ ಶಿಕ್ಷಣಕ್ಕೆ,ಆಸ್ಪತ್ರೆಯ ಬಿಲ್ಲು ಕಟ್ಟುವುದಕ್ಕೆ ಉಪಕಾರಕ್ಕೆ ಬರುತ್ತದೆ ಎಂದು ವಿವರಣೆ ನೀಡಿದ ಖತೀಬರು ಮದುವೆಗೆ ಸಹಾಯ ಮಾಡಿದವರು ಒಂದರ್ಥದಲ್ಲಿ ಈ ಎಲ್ಲಾ ಪುಣ್ಯ ಕಾರ್ಯಕ್ಕೆ ಸಹಾಯ ಮಾಡಿದ್ದಾರೆಂದೇ ಅರ್ಥೈಸ ಬೇಕಾಗುತ್ತದೆ ಎಂದರು.
ಶ್ರೀಮಂತರು ವೈಭವದ ಆಡಂಬರ ವಿವಾಹ ಮಾಡಿ ಬಡವರಿಗೆ ಬುದ್ದಿ ಹೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ‌.
ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಮದುವೆ ಮನೆಯವರ ಭಾವನೆಗಳನ್ನು ಅರ್ಥಮಾಡಿಕೊಂಡು ನಾವು ಅವರ ಸಹಾಯಕ್ಕೆ ಧಾವಿಸ ಬೇಕಾಗಿದೆ.
ಬಿಟ್ಟಿ ಉಪದೇಶ ಕೊಡುವುದು ಸುಲಭ.ಆದರೆ ಸಾಮಾಜಿಕವಾಗಿ ಬೇರೂರಿದ ಕೆಲ ಪದ್ದತಿಗಳನ್ನು ರದ್ದುಪಡಿಸುವುದು ಅಷ್ಟು ಸುಲಭದ ಮಾತಲ್ಲ ಎಂದ ಖತೀಬರು
ಅಗತ್ಯ ಇರುವವರಿಗೆ ಸಹಾಯ ಹಸ್ತ ನೀಡುವುದೇ ಇಸ್ಲಾಮಿನ ಅವಿಭಾಜ್ಯ ಅಂಗ ಎನ್ನುತ್ತಾ
ನಿಮ್ಮ ಹೆಚ್ವಿನ ಯಾವುದೇ ಚರ್ಚೆಗಳಲ್ಲಿ ಹೇಳತಕ್ಕ ಪ್ರಯೋಜನ ಇಲ್ಲ,ಆದರೆ ದಾನಧರ್ಮಕ್ಕೆ ,ಒಳಿತಿಗೆ ಮತ್ತು ಸೌಹಾರ್ಧತೆಗೆ ಪ್ರೋತ್ಸಾಹ ನೀಡುವುದರಲ್ಲೇ ಹೆಚ್ಚು ಪುಣ್ಯ ಇದೆ
ಎಂಬ ಕುರಾನ್ ವಚನ ಉಲ್ಲೇಖಿಸಿದರು.
ಮುಂದುವರೆದು ಮಾತನಾಡಿದ ಅವರು
ನಾವು ಉತ್ತಮ ಉದ್ದೇಶವಿಟ್ಟು ಮಾಡುವ ಸಹಾಯಗಳು ಯಾವತ್ತೂ ವ್ಯರ್ಥ ಆಗುವುದಿಲ್ಲ ಎಂಬುದಕ್ಕೆ ಬಡ ವಿದ್ಯಾರ್ಥಿನಿ ಐ ಎ ಎಸ್ ಆಗಲು ಹೋಟೇಲ್ ಸಿಬ್ಬಂದಿ ಮತ್ತು ಮಾಲಕ ಕಾರಣಕರ್ತರಾದ ಸ್ಟೋರಿ ಸಾಮಾಜಿಕ ತಾಣದಲ್ಲಿ ವೈರಲ್ ಆದದ್ದನ್ನು ಉಲ್ಲೇಖಿಸಿದರು. ಇಂತಹ ಹಲವಾರು ನೈಜ ಘಟನೆಗಳು ಇತಿಹಾಸದುದ್ದಕ್ಕೂ ನಡೆದಿದ್ದರೂ ಹೆಚ್ಚಿನವು ಯಾರ ಗಮನಕ್ಕೂ ಬಂದಿರುವುದಿಲ್ಲ ಎಂದ ಅವರು
ಒಂದು ನೈಜ ಘಟನೆಯನ್ನು ವಿವರಿಸಿದರು.
ಇಂಗ್ಲೆಂಡ್ ನ ಒಬ್ಬ ಸಾಹುಕಾರನ ಮಗ ಕೆಸರಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ . ಆ ವೇಳೆ ಅಲ್ಲಿಗೆ ಧಾವಿಸಿ ಬಂದು ರೈತನೊಬ್ಬ ಮಗನನ್ನು ರಕ್ಷಿಸಿದ .ಮರುದಿನ ಸಾಹುಕಾರ ರೈತನ ಬಳಿ ಬಂದು ಪಾರಿತೋಷಕ ನೀಡಿದಾಗ ಅದನ್ನು ಆತ ತಿರಸ್ಕರಿಸಿದ. ಇದಕ್ಕೆ ಪ್ರತಿಯಾಗಿ ಸಾಹುಕಾರ ರೈತನ ಮಗನನ್ನು ದತ್ತುಪಡೆದು ಸಂಪೂರ್ಣ ಶಿಕ್ಷಣ ಕೊಡಿಸಿದ್ದ.
ನಂತರದಲ್ಲಿ ಮೆಡಿಕಲ್ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ಪೆನ್ಸಿಲಿನ್ ಔಷಧಿ ಸಂಶೋಧಿಸಿದ್ದು ಅದೇ ವಿದ್ಯಾರ್ಥಿಯಾಗಿದ್ದ ,ಅಲೆಕ್ಸಾಂಡರ್ ಪ್ಲೆಮಿಂಗ್ ಎಂಬ ಈತ ಸಂಶೋಧಿಸಿದ ಪೆನ್ಸಿಲಿನ್ ಔಷಧಿ ಅಂದು ಕೆಸರಲ್ಲಿ ಬಿದ್ದು ಹೊರಲಾಡಿದ್ದ ಸಾಹುಕಾರನ ಮಗನಿಗೆ ನ್ಯೂಮೇನಿಯಾ ಭಾದಿಸಿ ಮತ್ತೊಮ್ಮೆ ಜೀವನ್ಮರಣ ಸ್ಥಿತಿಯಲ್ಲಿರುವಾಗ ಉಪಕಾರಕ್ಕೆ ಬಂದಿತ್ತು.ಇಂಗ್ಲಂಡ್ ಅದ್ಯಕ್ಷರಾಗಿದ್ದ ವಿನ್ಸಂಟ್ ಚರ್ಚಿಲ್ ಎಂಬವರೇ ರೈತನಾದ ತಂದೆ ಮತ್ತು ಮಗನಿಂದ ಎರಡು ಸಲ ಜೀವದಾನ ಪಡೆದ ಮಹಾನ್ ವ್ಯಕ್ತಿ ಎಂಬ ಸ್ವಾರಸ್ಯಕರ ಇತಿಹಾಸವನ್ನು ಬಿಚ್ಚಿಟ್ಟರು.0️

ಎಸ್. ಬಿ.ದಾರಿಮಿ

Share this on:
error: Content is protected !!