Latest Posts

ಓವೈಸಿಯಲ್ಲ : ಬದಲಾಗಬೇಕಾಗಿದ್ದು ಕಾಂಗ್ರೆಸ್, ಎಡಪಕ್ಷಗಳ ನಿಲುವುಗಳು

ಬಿಹಾರ ಚುನಾವಣೆಯಲ್ಲಿ ಎನ್ ಡಿ ಎ ಗಳಿಸಿದ ಗೆಳುವಿಗಿಂತ ಚರ್ಚೆಯಾಗಿದ್ದು ದೇಶೀಯ ಪಕ್ಷದವಾದ ಕಾಂಗ್ರೆಸಿನ ಹೀನಾಯ ಸೋಲಿನ ಬಗ್ಗೆಯಾಗಿದೆ. ಬಹಳ ಸರಳವಾಗಿ ಇದರ ಕಾರಣ ಹುಡಿಕಿದರೆ ಫ್ಯಾಸಿಸ್ಟ್ ಶಕ್ತಿಯಿಂದ ಈ ದೇಶದ ವಿಮೋಚನೆ ಕಾಂಗ್ರೆಸ್ ಮೂಲಕ ಸಾಧ್ಯವಿದೆ ಎಂದು ನಂಬುವ ದೊಡ್ಡದಾದ ಒಂದು ಜನಸಮೂಹ ಇಂದಿಗೂ ಇದೆ ಎಂಬುದಾಗಿದೆ ಇದಕ್ಕಿರುವ ಉತ್ತರ. ಆದರೆ ಸ್ಪಷ್ಟವಾದ ಆತ್ಮಾವಲೋಕನ ನಡೆಸುವ ಬದಲು ಇನ್ನೊಬ್ಬರ ಮೇಲೆ ಆರೋಪ ನಡೆಸಿ ಕೈ ತೊಳೆಯುವ ಪ್ರಯತ್ನ ಎಲ್ಲಾ ಕಾಲದಲ್ಲೂ ಎಂಬ ರೀತಿ ಬಿಹಾರದಲ್ಲೂ ಕಾಂಗ್ರೆಸ್ ನಡೆಸಿದರು. ಅಸಾದುದ್ಧೀನ್ ಓವೈಸಿಯಾಗಿದೆ ಕಾಂಗ್ರೆಸ್ ಒಲಗೊಂಡ ಮಹಾಘಟ್ಬಂಧನ್ ಮೈತ್ರಿಕೂಟ್ಟದ ಸೋಲಿಗೆ ಕಾರಣ ಎಂಬುದಾಗಿತ್ತು ಕಾಂಗ್ರೆಸ್ ಆಕ್ಷೇಪ. ಸ್ಪಷ್ಟವಾಗಿ ಲೆಕ್ಕಾಚಾರ ಪರಿಶೀಲಿಸದೆ, ರಾಜಕೀಯ ವಿಶ್ಲೇಷಣೆ ನಡೆಸದೆಯಾಗಿತ್ತು ಹೀನಾಯ ಸೋಲಿನ ಬಗ್ಗೆ ಕಾಂಗ್ರೆಸ್ ಮೂಲದಿಂದ ಈ ರೀತಿಯ ಪ್ರತಿಕ್ರಿಯೆ ಹೊರಡಿಸಿದ್ದು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎ ಐ ಎಂ ಐ ಎಂ ಸ್ಪರ್ಧಿಸಿದ 20 ಕ್ಷೇತ್ರಗಳಲ್ಲಿ 6 ಕ್ಷೇತ್ರದಲ್ಲಿ ಎನ್ ಡಿ ಎ ಗೆಲುವು ಕಂಡರು. ಇದರಲ್ಲಿ 5ರಲ್ಲಿ ಎ ಐ ಎಂ ಐ ಎಂ ಪಕ್ಷ ಪಡೆದ ಮತಗಳಿಗಿಂತ ಹೆಚ್ಚು ಅಂತರದ ಮತಗಳಿಂದ ಎನ್ ಡಿ ಎ ಜಯಗಳಿಸಿದೆ. ಈ ಐದು ಕ್ಷೇತ್ರಗಳಲ್ಲಿ ಎ ಐ ಎಂ ಐ ಎಂ ಸ್ಪರ್ಧಿಸದಿದ್ದರೂ ಎನ್ ಡಿ ಎ ಜಯಗಳಿಸುತಿತ್ತು ಎಂಬುದು ಸ್ಪಷ್ಟ. ಇಲ್ಲಿ ಎನ್ ಡಿ ಎಯನ್ನು ಸೋಲಿಸುವುದರಲ್ಲಿ ಮಹಾಘಟ್ಬಂಧನ್ ಕೆಡವಿದ್ದಾರೆ ಎಂಬುದಕ್ಕೆ ಹೆಚ್ಚಿನ ಉದಾಹರಣೆಗಳ ಅವಶ್ಯಕತೆ ಇಲ್ಲ. ಭಯೋತ್ಪಾದಕ ನಂಟಿರುವ ದುರ್ಗಾವಾಹಿನಿ ನಾಯಕನನ್ನ ಆರ್ ಜೆ ಡಿ ಶೇರ್ಗಟ್ಟಿನಲ್ಲಿ ನಿಲ್ಲಿಸಿ ಗಲ್ಲಿಸಿರುತ್ತಾರೆ. ಮೂಲಭೂತವಾದ ಮತಸೋರುವಿಕೆಯಂತ ವಿಚಾರಗಳನ್ನು ನಿರಂತರ ಚರ್ಚೆ ನಡೆಸಿ ಕೊನೆಗೆ ಓವೈಸಿ ಮೇಲೆ ಪಾಪದ ಹೊರೆ ಹೇರಿದಾದ ತಾತ್ಕಾಲಿಕ ಸಮಾಧಾನ ಲಬಿಸಿದ್ದರೂ ಸಹ ಸ್ಪಷ್ಟವಾದ ಲೆಕ್ಕಾಚಾರ ಕಾಂಗ್ರೆಸನ್ನು ಹಿಂಬಾಲಿಸಿ ಕಾಡುವುದರಲ್ಲಿ ಸಂಶಯವಿಲ್ಲ.

ಓವೈಸಿ ಪಕ್ಷ ಸ್ಪರ್ಧಿಸಿದ ಚಾಟ್ಟಪೂರ್, ಬರಾರಿ, ಪ್ರಾನ್ಪುರ್, ನರ್ಪಡ್ ಗಂಚ್, ಸಾಹೇಬ್ ಗಂಜ್, ರಾಣಿ ಗಂಜ್, ಎಂಬ ಸ್ಥಳಗಳಲ್ಲಿ ಎನ್ ಡಿ ಎ ಮೈತ್ರಿ ಗೆಲುವು ಸಾಧಿಸಿದರು. ಇದರಲ್ಲಿ ರಾಣಿ ಗಂಜ್ ಹೊರತು ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಎ ಐ ಎಂ ಐ ಎಂ ಪಡೆದ ಮತಗಳಿಗಿಂತ ಹೆಚ್ಚಿನ ಲೀಡ್ ಪಡೆದುಕೊಂಡು ಎನ್ ಡಿ ಎ ಗೆಲುವು ಪಡೆದಿದೆ. ರಾಣಿ ಗಂಜಿನಲ್ಲಿ ಮಾತ್ರ ಎ ಐ ಎಂ ಐ ಎಂ ಅಭ್ಯರ್ಥಿ ಇಲ್ಲದಿದ್ದರೆ ಮಹಾಘಟ್ಬಂಧನ್ ಮೈತ್ರಿಕೂಟ ಜಯಗಳಿಸುವ ಸಾಧ್ಯತೆ ಇತ್ತು. ಇಲ್ಲಿ ಎನ್ ಡಿ ಎ 2,304 ಮತಗಳ ಲೀಡ್ ಪಡೆದಾಗ ಎ ಐ ಎಂ ಐ ಎಂ ಪಕ್ಷ 2,412 ಮತಗಳನ್ನು ಪಡೆದುಕೊಂಡರು. ಈ ಮತಗಳು ಆರ್ ಜೆ ಡಿ ಅಭ್ಯರ್ಥಿ ಪಡೆಯುವುದಾದರೆ ಮಹಾಘಟ್ಬಂಧನ್ ಇನ್ನೊಂದು ಸೀಟು ಸಹ ಹೆಚ್ಚಿಸಬಹುದಿತ್ತು.

ಎ ಐ ಎಂ ಐ ಎಂ ಬಿಹಾರ ರಾಜ್ಯ ನಾಯಕರು ಚುನಾವಣೆ ಸಿದ್ಧತೆಗೆ ಮುಂಚಿತವಾಗಿ ಕಾಂಗ್ರೆಸ್, ಆರ್ ಜೆ ಡಿ, ಎಡಪಕ್ಷಗಳನ್ನೊಳಗೊಂಡ ಮಹಾಮೈತ್ರಿಯೊಂದಿಗೆ ಸಮಾಲೋಚನೆಗೆ ತಯ್ಯಾರಾದರೂ ಸಹ ಯಾರೂ ಸಹ ಓವೈಸಿ ಪಕ್ಷವನ್ನು ಜೊತೆ ಸೇರಿಸಲು ಸಮ್ಮತಿಸಲಿಲ್ಲ. ಹಾಗಾಗಿ ಮಾಯಾವತಿಯ ಬಿ ಎಸ್ ಪಿಯಂತಹ ಸಣ್ಣ ಪಕ್ಷಗಳೊಂದಿಗೆ ಕೈ ಜೋಡಿಸಿ ಎ ಐ ಎಂ ಐ ಎಂ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾದರು ಎಂದು ಓವೈಸಿ ಈ ಹಿಂದೆ ವ್ಯಕ್ತಪಡಿಸಿದ್ದಾರೆ. ಆದರೂ ಕಾಂಗ್ರೆಸ್ ನೇತೃತ್ವ ವಿಶಯಗಳ ವಾಸ್ತವ ಅರಿತುಕೊಂಡು ವಿಶ್ಲೇಷಣೆ ನಡೆಸಲು ತಯ್ಯಾರಗುತ್ತಿಲ್ಲ. ಬಹಳ ತಡವಾಗಿಯಾದರೂ ಎ ಐ ಸಿ ಸಿ ಕಾರ್ಯದರ್ಶಿ ತಾರಿಖ್ ಅನ್ವರ್ ನಡೆಸಿದ ಹೇಳಿಕೆ ಕಾಂಗ್ರೆಸ್ ನೇತೃತ್ವದ ಕಣ್ಣು ತೆರೆಯಲು ಕಾರಣವಾಗುತ್ತದೆ ಎಂಬುದೇ ದೇಶದ ಜನತೆಯ ನಿರೀಕ್ಷೆ.

ಚುನಾವಣೆ ಪತನದ ಕುರಿತಾಗಿ ಕಾಂಗ್ರೆಸ್ ಸ್ವವಿಮರ್ಶೆ ನಡೆಸಬೇಕೆಂದು ತಾರಿಖ್ ಅನ್ವರ್ ಹೇಳಿದರು. ಓವೈಸಿ ಸಾನಿಧ್ಯಕ್ಕೆ ಬೆಲೆ ಕಲ್ಪಿಸದೆ ಕಡೆಗಣಿಸಿದ್ದು ಕಾಂಗ್ರೆಸ್ ಸೋಲಿಗೆ ಕಾರಣ ಎಂಬ ಸತ್ಯ ಅಂಗೀಕರಿಸಬೇಕೆಂದು ತಾರಿಖ್ ಅನ್ವರ್ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಮುನ್ನಡೆ ಸಾಧಿಸಿರುವುದರೊಂದಿಗೆ ಅಸಾದುದ್ಧೀನ್ ಓವೈಸಿ ಪಕ್ಷ ಪಕ್ಷಿಮ ಬಂಗಾಳ, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದರ ಸುದ್ದಿ ಹೊರಬಂದ ಬೆನ್ನಲ್ಲೇ ಅನ್ವರ್ ರವರ ಹೇಳಿಕೆ ಹೊರಬಂದಿರುವುದು ಗಮನಾರ್ಹ. ಮುಂಬರುವ ಇದೇ ಪರಿಸ್ಥಿತಿಯನ್ನು ಮುಂಚಿತವಾಗಿ ಕಂಡುಕೊಂಡಾಗಿದೆ ಈ ರೀತಿಯ ಹೇಳೀಕೆ ತಾರಿಖ್ ಅನ್ವರ್ ನೀಡಿರುವುದು.
ಆದರೆ ಮಹಾಘಟ್ಬಂಧನ್ ಮತಗಳನ್ನು ವಿಭಜನೆಗೊಳಿಸುವ ಮೂಲಕ ಬಿಜೆಪಿ ಮೈತ್ರಿಯಂತೆಯಾಗಿದೆ ಓವೈಸಿ ಪಕ್ಷ ಎಂಬ ಕಾಂಗ್ರೆಸ್ ನಾಯಕ ಆಧಿರ್ ರಂಜನ್ ಚೌಧರಿ ತನ್ನ ನಿಲುವಿನಿಂದ ಹಿಂದೇಟು ಹಾಕಲಿಲ್ಲ. ಕಾಂಗ್ರೆಸ್ ನಾಯಕರು ಬಿಹಾರ ಫಲಿತಾಂಶ ವಿಶ್ಲೇಷಣೆ ಈಗಲೂ ಕತ್ತಲೆಕೋನೆಯಲ್ಲಾಗಿದೆ.

ಜಾತ್ಯತೀತ ಪಕ್ಷಗಳೊಂದಿಗೆ ಓವೈಸಿ ಪಕ್ಷವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಪ್ರಬಲ ಪಕ್ಷಗಳ ಹಿರಿಯ ನಾಯಕರ ನಿಲುವು. ಇದಕ್ಕೆ ಕಾರಣವಾಗಿ ಹೇಳುತ್ತಿರುವುದು ಓವೈಸಿ ಧರ್ಮಾಧಾರಿತವಾಗಿ ಮಾತಾನಾಡುತ್ತಿದ್ದಾರೆ ಎಂಬುದು. ಮರಾಠಿ ವಾದದೊಂದಿಗೆ ತಮ್ಮ ಎದುರಾಳಿಗಳನ್ನು ಬಂದೂಕು, ತಲವಾರುಗಳನ್ನು ಉಪಯೋಗಿಸಿ ತುಳಿದು ಬೆಳೆದುಬಂದ ಶಿವಸೇನೆಯೊಂದಿಗೆ ಕೈಜೋಡಿಸಿ ಅಧಿಕಾರದ ಪಾಲು ವಹಿಸಿದ ಕಾಂಗ್ರೆಸಿಗೆ ಉವೈಸಿಯನ್ನು ದೂರಲು ಯಾವುದೇ ಅರ್ಹತೆ ಇಲ್ಲ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಿಂಪಡೆಯಲು ಅಲ್ಪಸಂಖ್ಯಾತ ಹಿಂದುಳಿದ ವಿಭಾಗಗಳು ಈಗಲೂ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಯಲ್ಲಿ ನಿರೀಕ್ಷೆ ಇಟ್ಟುಕೊಂಡಿದೆ. ಆ ನಿರೀಕ್ಷೆಯ ಮೇಲೆ ಕಣ್ಣು ಮುಚ್ಚಿ ಇರುಳು ಮಾಡುವ ಪ್ರಯತ್ನ ಕಾಂಗ್ರೆಸ್ ಮೂಲದಿಂದ ಬರುತ್ತಿರುವುದು ಅಪಾಯಕಾರಿ ವಿಚಾರ. ಓವೈಸಿ ವಿಚಾರದಲ್ಲಿ ನಿಷ್ಪಕ್ಷಪಾತ ಅಭಿಪ್ರಾಯ ಪ್ರಕಟಿಸಿರುವುದು ತಾರಿಖ್ ಅನ್ವರ್ ಆದ್ದರಿಂದ ಸಮೂಹಕ್ಕೆ ಹೆಚ್ಚಿನ ನಿರೀಕ್ಷೆ ಏನೂ ಇರುವುದಿಲ್ಲ. ಕಾರಣ ಕಾಂಗ್ರೆಸ್ ನೇತೃತ್ವದ ಇತರೆ ಗೋಪುರಗಳು ಅದು ಅನ್ವರನ ರೋಧನ ಮಾತ್ರವಾಗಿ ಕಾಣುತ್ತಾರೆ. ಕಾಲಿನಡಿಯ ಮಣ್ಣು ಕೊಚ್ಚಿಹೋಗುವುದನ್ನು ಮನಗಂಡು ಇನ್ನಾದರೂ ಅದನ್ನು ತಡೆಯಲು ಸಾಧ್ಯವಾಗದಿದ್ದರೆ ಇನ್ನೊಂದು ಅವಕಾಶ ಕಾಂಗ್ರೆಸಿಗೆ ಒದಗಿಬರಬೇಕೆಂದಿಲ್ಲ.

ಅಲ್ಪಸಂಖ್ಯಾತ ಹಿಂದುಳಿದ ವಿಭಾಗಗಳು ಸಂಘಟಿತರಾಗುವುದರಲ್ಲಿ ವ್ಯಾಘ್ರತೆಪಡುವ ಎಡಪಕ್ಷಗಳು. ಅಲ್ಪಸಂಖ್ಯಾತರು ಸಂಘಟಿಸಿ ಧ್ವನಿಯೆತ್ತುವುದು ಸರಿಯಲ್ಲ, ಅಲ್ಪಸಂಖ್ಯಾತರು ಜಾತ್ಯತೀತ ಪಕ್ಷಗಳೊಂದಿಗೆ ನಿಂತುಕೊಳ್ಳಬೇಕು ಎಂದು ಐಡೆಂಡಿಟಿ ಪಾಲಿಟಿಕ್ಸನ್ನು ವಿರೋಧಿಸುವ ಎಡಪಕ್ಷಗಳು 34 ವರ್ಷಗಳ ಕಾಲ ಆಡಳಿತ ನಡೆಸಿದ ಪಶ್ಚಿಮ ಬಂಗಾಳದದಲ್ಲಿ ಅಲ್ಪಸಂಖ್ಯಾತರ ಹೇಳಿಗೆಗಾಗಿ ನಡೆಸಿದ ಪ್ರಾಯೋಗಿಕ ಯೋಜಯಾದರು ಏನು ಎಂಬುದು ಪರಿಶೀಲಿಸಿದರೆ ಎಡಪಕ್ಷಗಳ ನಕಲಿ ಅಲ್ಪಸಂಖ್ಯಾತ ಪ್ರೇಮ ಬಯಲಾಗುತ್ತದೆ. ಕೇವಲ ಬೀಫ್ ಫೆಸ್ಟ್ ಒಂದು ನಡೆಸಿ ಅದು ಅಲ್ಪಸಂಖ್ಯಾತ ಸಂರಕ್ಷಣೆ ಎಂದು ಭಾವಿಸಿದ್ದರೆ ಎಡಪಕ್ಷಗಳ ಈ ಮೌಢ್ಯವರ್ತನೆ ಮನವರಿಕೆ ಮಾಡಿಕೊಳ್ಳುವುದರಲ್ಲಿ ಇಂದಿನ ಸಮೂಹ ರಾಜಕೀಯ ಪ್ರಭುತ್ವತೆ ಹೊಂದಿಕೊಳ್ಳುತ್ತಿರುವುದು ಆಶ್ವಾಸನೀಯ.

ಉನೈಸ್ ಕೊಡಗು
ಸಾಮಾಜಿಕ ಬರಹಗಾರರು

Share this on:
error: Content is protected !!