Latest Posts

ಕೂಲಿ ಕಾರ್ಮಿಕರಿಗಾಗಿ ಸರ್ಕಾರ ನೀಡುವ “ಕಾರ್ಮಿಕ ಕಾರ್ಡ್” ಇದರ ಉಪಯೋಗಗಳೇನು ಗೊತ್ತೇ??

ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಂಬರ್ ಕೆಲಸ, ಬಾರ್ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವೈರಿಂಗ್ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಬಾರಿಕರಣ ಕಾರ್ಮಿಕರು ಮುಂತಾದ ಕೆಲಸದ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

#ಉಪಯೋಗಗಳು
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/-

ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..

ನಿಮ್ಮ ಹತ್ತಿರದ ಆಥವಾ ತಾಲ್ಲೂಕು ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ……

ವಯಸ್ಸಿನ ಮಿತಿ 18 ರಿಂದ 55 ವರ್ಷ.

ದಯವಿಟ್ಟು ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿ..

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು ಮಕ್ಕಳಿಗೆ ದೊರೆಯುವ ವಿಧ್ಯಾರ್ಥಿ ವೇತನ

• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ

  1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
  2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
  3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
  4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-

🔎 ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗೆ ಭೇಟಿ ನೀಡಿ.

ಅಥವಾ

ನಿಮ್ಮ ಹತ್ತಿರದ ‘ಸಾಮಾನ್ಯ ಸೇವಾ ಕೇಂದ್ರ’/ ಸಿ.ಎಸ್.ಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್ (ಇದ್ದರೆ)
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ

ಅರ್ಜಿ ನಮೂನೆಯನ್ನು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿ
ಅಥವಾ
‘ಸಾಮಾನ್ಯ ಸೇವಾ ಕೇಂದ್ರ’/ ಸಿ.ಎಸ್.ಸಿ ಕೇಂದ್ರಗಳಲ್ಲಿ ಪಡೆಯಬಹುದು

ಇದನ್ನು ನಿರ್ಲಕ್ಷ್ಯ ಮಾಡಬೇಡಿರಿ

ನಮ್ಮ ಸಮುದಾಯದ ಈ ತರದ ಕಟ್ಟಡ ನಿರ್ಮಾಣ ಸಂಬಂಧಿತ ಉಪ ಕಸಬುಗಳಲ್ಲಿ ತೊಡಗಿಸಿಕೊಳ್ಳಿ.. ಇವುಗಳು ಹೆಚ್ಚು ಆದಾಯ ತಂದು ಕೊಡುವ ಮತ್ತು ಗೌರವ ಇರುವ ವೃತ್ತಿಗಳು..

ಇಂತಹ ವೃತ್ತಿಗಳ ತರಬೇತಿಯನ್ನು ಆಯಾ ಜಿಲ್ಲೆಯ DC ಆಫೀಸ್ ನ ಆವರಣದಲ್ಲಿರುವ ಕಾರ್ಮಿಕ ಸೇವಾ ಕೇಂದ್ರಗಳಲ್ಲಿ ನೀಡಲಾಗುತ್ತದೆ.ಮತ್ತು ತರಬೇತಿ ಅವಧಿಯಲ್ಲಿ ಭತ್ಯೆ ಇರುತ್ತದೆ.ನಂತರ ಸರ್ಟಿಫಿಕೇಟ್ ನೀಡಲಾಗುತ್ತದೆ..
ಈ ತರಬೇತಿಗಳನ್ನು ರುಡ್ ಸೆಟಿ RUDSHET.. ವಿಬ್ಸೆಟಿಯಂತಹ ಸಂಸ್ಥೆಗಳಿಂದಲೂ ಉಚಿತವಾಗಿ ಪಡೆಯಬಹುದಾಗಿದೆ..

ಪ್ರತಿಯೊಬ್ಬರೂ ಇದನ್ನು ಶೇರ್ ಮಾಡಿ ನಾವು ಯಾವ್ಯಾವುದನ್ನು ಶೇರ್ ಮಾಡುವ ಬದಲು ಇಂತಹ ಒಳ್ಳೆಯ ವಿಚಾರವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಕೆಲಸ ಮಾಡೋಣ.

ಎಮ್. ಕೆ. ಅಬ್ದುಲ್ ಸಮದ್ ಕುಂಡಡ್ಕ

Share this on:
error: Content is protected !!