Latest Posts

ಆ ಮಾತಿಗೆ ನ್ಯಾಯಾಲಯವೇ ನಿಬ್ಬೆರಗಾಯಿತು ……
ಶಂಸುಲ್ ಉಲಮಾರ ಜೀವನ ಚರಿತ್ರೆ…..

ನ್ಯಾಯಾಲಯದಿ ಜನಸ್ತೋಮವೇ ನೆರೆದಿತ್ತು.ಸುನ್ನೀ ಹಾಗೂ ಖಾದಿಯಾನಿಗಳ ಸಂಗಮ.ಖಾದಿಯಾನಿಗಳು ಅವಿಶ್ವಾಸಿಗಳೆಂಬ ಸುನ್ನೀ ಪಂಡಿತರ ವಾದವನ್ನು ಹಿಂಪಡೆಯಲು ಖಾದಿಯಾನಿಗಳು ಕೇಸು ದಾಖಲಿಸಿದ್ದರು.ಕೋರ್ಟಿನಲ್ಲಿ ಅದು ಅಂತಿಮ ತೀರ್ಮಾನದ ದಿನವಾಗಿತ್ತು.ಖಾದಿಯಾನಿಗಳು ವಾದಕ್ಕೆ ಓರ್ವ ಖಾದಿಯಾನಿ ಪಂಡಿತನನ್ನು ನಿಯಮಿಸಿದ್ದರು..ಸುನ್ನಿಗಳು ಆ ನಾಯಕನ ವಾದವ ಮಣಿಸಲು ಓರ್ವ ಸುನ್ನೀ ಪಂಡಿತನ ಕಾಯುವಿಕೆಯಲ್ಲಿದ್ದರು..ಆ ಸಮಯದಲ್ಲಿ ಅಲ್ಲಾಹನ ತೀರ್ಮಾನವೇ ಸರಿ

ಅದೋ…….ಸುನ್ನೀ ಜಗತ್ತಿನ ಸಾಮ್ರಾಟ,ಸರಿಸಾಟಿಯಿಲ್ಲದ ಪಂಡಿತ ನೇತಾರ, ನವೀನವಾದಿಗಳ ಸಿಂಹಸ್ವಪ್ನ,ಸಾವಿರಾರು ಪಂಡಿತರನ್ನು ಸಮುದಾಯಕ್ಕೆ ಸಮರ್ಪಿಸಿದ, ಸಮಸ್ತ ನಾಯಕರಾದ ಶೈಖುನಾ ಶಂಸುಲ್ ಉಲಮಾ ಆಗಮಿಸಿದರು.ನೆರೆದವರಿಗೆಲ್ಲರಿಗೂ ಕುತೂಹಲ.ಸೋಲುವ ಭಯವೂ ಮನಸ್ಸಿನಿಂದ ಮಾಸಿ ಹೋಯಿತು.

ಸುನ್ನಿಗಳ ಕಡೆಯಿಂದ ಶೈಖುನಾ ಶಂಸುಲ್ ಉಲಮಾ,ಖಾದಿಯಾನಿಗಳ ಕಡೆಯಿಂದ ಮತ್ತೋರ್ವನನ್ನು ಕರೆತರಲಾಯಿತು..ನ್ಯಾಯವಾದಿ ಖಾದಿಯಾನಿಗಳ ಅಳಲನ್ನು ಕೇಳಿದ ‘ಸುನ್ನೀಗಳು ಖಾದಿಯಾನಿಗಳನ್ನು ಖಾಫಿರ್ ಎಂಬ ಪರಿಗಣನಾ ಫತ್ವಾವನ್ನು ಹಿಂಪಡೆಯಬೇಕೆಂದು’ ಕೇಳಿಕೊಂಡರು.ಅವಿಶ್ವಾಸಿಯಾದ ವಕೀಲನು ಶಂಸುಲ್ ಉಲಮಾರೊಂದಿಗೆ ಕೇಳಿದನು.ಯಾಕಾಗಿ ಆ ಫತ್ವಾವನ್ನು ನೀಡಿದ್ದೀರಿ, ಅವರು ನಿಮ್ಮಂತೆಯೇ ಅಶ್ಹದು ಅಲ್ಲಾಹಿಲಾಹ ಇಲ್ಲಲ್ಲಾ ವ’ಅಶ್ಹದು ಅನ್ನ ಮುಹಮ್ಮದರ್ರ ಸೂಲುಲ್ಲಾ ಎಂದು ಹೇಳುತ್ತಾರಲ್ಲವೇ ಎಂದರು.ಶೈಖುನಾ ಪುನಃ ಕೇಳಿದರು ಏನು ಮತ್ತೊಮ್ಮೆ ಹೇಳಿ.ಪುನಃ ವಕೀಲನು ಅದೇ ರೀತಿ ಹೇಳಿದನು.ಹೀಗೆ ಶೈಖುನಾ ಮೂರು ಸಲ ಆವರ್ತಿಸಿ ಕೇಳಿದರು .ವಕೀಲನು ಪ್ರಶ್ನೆಯನ್ನು ಇದೇ ರೀತಿ ಮರುಕಳಿಸುತ್ತಿದ್ದ..

ಆಗ ಶಂಸುಲ್ ಉಲಮಾ ಹೇಳಿದರು ಮೂರು ಸಲ ಅಶ್ಹದು ಅಲ್ಲಾಹಿಲಾಹ ಇಲ್ಲಲ್ಲಾ ವ’ಅಶ್ಹದು ಅನ್ನ ಮುಹಮ್ಮದರ್ರ ಸೂಲುಲ್ಲಾ ಹೇಳಿದಿರಲ್ಲವೇ ತಾವೀಗ ಮುಸ್ಲಿಮರೇ ಎಂದು ಮರುತ್ತರಿಸಿದರು..ವಕೀಲನು ಕಕ್ಕಾಬಿಕ್ಕಿಯಾದ .

ಅವಿಶ್ವಾಸಿಯಾದ ವಕೀಲನ ಅಷ್ಟು ಮಾತಿಗೆ ಶೈಖುನಾರ ಒಂದು ಗೆರೆಯ ಉತ್ತರವೇ ಸಾಕಾಯಿತು. ಖಾದಿಯಾನಿಗಳು ಸೋತರು..ವಾದವು ಸುನ್ನೀಗಳೊಂದಿಗೆ ಮುಖ ಮಾಡಿತು.ಶೈಖುನಾರ ಆ ಉತ್ತರವೂ ಸರ್ವರನ್ನೂ ಮೂಕವಿಸ್ಮಿತನನ್ನಾಗಿಸಿತು.ಅಂತಹ ಮಹಾನುಭಾವರು ರಬೀವುಲ್ ಆಖರ್ ನಾಲ್ಕರ ಸುಬುಹಿ ಬಾಂಗಿನ ಲಾಹಿಲಾಹ ಇಲ್ಲಾಹ್ ಎಂಬ ವಾಕ್ಯ ಕ್ಕೆ ಮರುತ್ತರ ನೀಡಿ ಕಣ್ಮರೆಯಾದರು.‌

ಕೆ.ಎಚ್. ಇಕ್ಬಾಲ್ ಕಿತ್ತಲೆಗಂಡಿ
(ದರ್ಸ್ ವಿದ್ಯಾರ್ಥಿ ಚಾಪಲ್ಲ)

Share this on:
error: Content is protected !!