Latest Posts

ಪವಾಡ ಪುರುಷರು ಅಂತ್ಯದಿನದ ತನಕ ಇರುತ್ತಾರೆ
ಗ್ರಂಥಗಳಿಂದ ಮತ್ತು ಅನುಭವದಿಂದ ತಿಳಿದದ್ದಕ್ಕಿಂತಲೂ ಇನ್ನೂ ಕಲಿಯ ಬೇಕಾದದ್ದು ಸಾವಿರ ಪಟ್ಟು ಇದೆ.

ಮುಲ್ಕಿ : ಅಲ್ಲಾಹನಲ್ಲಿ ಅಪಾರ ವಿಶ್ವಾಸವಿಟ್ಟು ಭಯಭಕ್ತಿಯಿಂದ ಬದುಕು ಸಾಗಿಸಿ ದೇವನ ವಿಶೇಷ ಕೃಪೆಗೆ ಪಾತ್ರರಾದ ಸಂತಪುರುಷರು ,ಪ್ರವಾದಿಗಳು ಬದುಕಿದ್ದ ಪೂರ್ವ ಕಾಲಕ್ಕೆ ಮಾತ್ರ ಸೀಮಿರಾಗಿದ್ದಾರೆಂದು ನಂಬುವುದು,ಮತ್ತು ಇಂದು ಅಂತವರು ಯಾರೂ ಇಲ್ಲ ಎಂಬ ವಾದ ಮಂಡಿಸುವುದು ಅಲ್ಲಾಹನ ಅಪಾರ ಶಕ್ತಿಯ ಬಗ್ಗೆಗಿನ ಅಜ್ಞಾನದಿಂದ ಉಂಟಾಗುವ ತಪ್ಪಾದ ತಿಳುವಳಿಕೆಯಾಗಿದೆ ಎಂದು ಮುಲ್ಕಿ ಶಾಫಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಅಭಿಪ್ರಾಯ ಪಟ್ಡಿದ್ದಾರೆ.

ಗ್ರಂಂಥಗಳಿಂದ ಮತ್ತು ಅನುಭವಗಳಿಂದ ತಿಳಿದು ಕೊಂಡದ್ದಕ್ಕಿಂತೂ ಸಾವಿರ ಸಾವಿರ ಪಟ್ಟು ಜಾಸ್ತಿ ನಮಗೆ ತಿಳಿದು ಕೊಳ್ಳಲು ಬಾಕಿ ಇದೆ.
ಧರ್ಮವನ್ನು ಪುಸ್ತಕದ ಬದನೆಕಾಯಿಯಾಗಿ ಕಾಣುವ ಬದಲು ಜಗತ್ತಿನ ಶಾಂತಿಯುತ ಜೀವನಕ್ಕೆ ಬೇಕಾದಂತೆ ಪ್ರಾಯೋಗಿಕವಾಗಿ ವ್ಯಾಖ್ಯಾನಿಸಿ ಜನರನ್ನು ಧಾರ್ಮಿಕ ನಂಬಿಕೆಯ ಮೂಲಕ ಪರಸ್ಪರ ಗೌರವಯುತವಾಗಿ ನಡೆದು ಕೊಳ್ಳುವಂತೆ ಮಾಡಿ ಸನ್ಮಾರ್ಗಕ್ಕೆ ಕೊಂಡೊಯ್ಯುವುದೇ ಕಾಲದ ಬೇಡಿಕೆಯಾಗಿದೆ

ಎಂದ ಅವರು ಈ ಜಗತ್ತಿನಲ್ಲಿ ಅಡಕ ಗೊಂಡ ಅನೇಕ ನಿಗೂಡ ರಹಸ್ಯಗಳನ್ನು ಇನ್ನೂ ಭೇದಿಸಲು ಜನರಿಗೆ ಸಾದ್ಯವಾಗಿಲ್ಲ ಎಂದರು.
ವ್ಯಕ್ತಿಗಳಿಗೆ ಹಲವು ರೀತಿಯ ಸಾಧನೆಯನ್ನು ಮಾಡಲು ಈ ಜಗತ್ತು ವ್ಯವಸ್ಥೆ ಕಲ್ಪಿಸಿದೆ.
ಅದರಲ್ಲಿ ಧಾರ್ಮಿಕ ಸಾಧನೆ ಎಂಬುವುದು ಆಸ್ತಿಕರ ಮಟ್ಟಿಗೆ ಬಹಳ ಮುಖ್ಯವಾಗುತ್ತದೆ.
ಮುಸ್ಲಿಮರಿಗೆ ಸಂಭಂದಿಸಂತೆ ಹೇಳುವುದಾದರೆ ಧಾರ್ಮಿಕ ಸಾಧನೆಯ ಮೂಲಕ
ಕರಾಮತ್ ಎಂಬ ಅದ್ಭುತ ಪವಾಡಗಳನ್ನು ತೋರಿಸುವ ಅಲ್ಲಾಹನ‌ ಇಷ್ಟದಾಸರು ಇತಿಹಾಸದುದ್ದಕ್ಕೂ ಬಂದು ಹೋಗಿದ್ದಾರೆ.
ಮರಣದ ನಂತರವೂ ಅವರಿಂದ ಪವಾಡಗಳು ಜರಗುತ್ತಿರುವುದಕ್ಕೆ ಈ ಜಗತ್ತಿನಲ್ಲಿ ವಾಸಿಸುತ್ತಿರುವ ಕೋಟ್ಯಾಂತರ ಮನುಷ್ಯರೇ ಸಾಕ್ಷಿ.
ಧಾರ್ಮಿಕ ನಂಬಿಕೆ ಜನರಲ್ಲಿ ರೂಡಮೂಲಗೊಳ್ಳಲು ಅಲ್ಲಾಹನು ಇದನ್ನು ವ್ಯವಸ್ಥೆಗೊಳಿಸಿದ್ದಾನೆ.
ಇದರಲ್ಲಿ ಅಸಂಗತ್ಯವೇನೂ ಇಲ್ಲ.
ಅಲ್ಲಾಹನಿಗೆ ಸಾದ್ಯವಿಲ್ಲದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ.
ಆರಾಧನೆ ,ಭಯ ಭಕ್ತಿ ,ಜ್ಞಾನ ಪ್ರಸರಣೆ ಮೂಲಕ ಅವನಿಗೆ ಹತ್ತಿರವಾದವರಿಗೆ ಅವನು ದುನಿಯಾ ಮತ್ತು ಪರಲೋಕದಲ್ಲಿ ವಿಶೇಷ ಸ್ಥಾನಮಾನಗಳನ್ನೂ ನೀಡಿ ಗೌರವಿಸಿದ್ದಾಗಿಯೂ ,ಅಲ್ಲಾಹನ ಈ ತೀರ್ಮಾನಕ್ಕೆ ಯಾರೇ ವಿರೋಧ ವ್ಯಕ್ತಪಡಿಸಿದರೂ ಅದರಲ್ಲಿ ಬದಲಾವಣೆ ಮಾಡುವ ಪ್ರಮೇಯವೇ ಇಲ್ಲವೆಂದೂ ಪವಿತ್ರ ಕುರಾನಿನ ಸೂರ ಯೂನುಸ್ ಅಧ್ಯಾಯ ದಲ್ಲಿ ಸ್ಪಷ್ಟ ಪಡಿಸಲಾಗಿದೆ ಎಂದ ಖತೀಬರು
ಕುರ್ಆನ್ ಸಮೇತ ಹತ್ತು ಹಲವು ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ನೂರಾರು ಪವಾಡದ ಘಟನೆಗಳೂ ಗ್ರಂಥಗಳಲ್ಲಿ ದಾಖಲಿಸಲ್ಪಡದ ಸಾವಿರಾರು ಅದ್ಬುತ ಕಥೆಗಳೂ ಜನರನ್ನು ಧಾರ್ಮಿಕ ನಂಬಿಕೆಗೆ ಹತ್ತಿರವಾಗಿಸುತ್ತದೆ ಎಂದು ವ್ಯಾಖ್ಯಾನಿದರು.
ನಮಗೆ ಎದುರಾಗುವ ಯಾವುದಾದರೊಂದು ಪ್ರಯಾಸದ ಸಂಧರ್ಭದಲ್ಲಿ ಮರಣ ಹೊಂದಿದ ನಮ್ಮ ತಂದೆ ತಾಯಿಗಳ ಸ್ಮರಣೆಯನ್ನು ಮುಂದಿಟ್ಟು ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿದರೆ ನಮಗೆ ಯಾವರೀತಿ ಆತ್ಮಬಲ ದೊರಕುತ್ತದೆಯೋ ಅದೇ ರೀತಿ ನಮಗೆ ವಿದ್ಯೆ ಕಲಿಸಿದ ಗುರುಗಳನ್ನೂ ನಾವು ಮನಸ್ಸಿಗೆ ಹೆಚ್ಚಾಗಿ ಹಚ್ಚಿಕೊಂಡ ಅಲ್ಲಾಹನ ಇಷ್ಟ ದಾಸರನ್ನು ಸ್ಮರಿಸಿದರೆ ನಮಗೆ ಅದ್ಭುತವಾದ ಆತ್ಮಬಲ ದೊರಕುತ್ತಿರುವುದು ಅನುಭವ ಸತ್ಯ ಎಂದು ಹೇಳಿದ ಅವರು ತಮ್ಮ ಗುರುಗಳೂ ಮಾರ್ಗದರ್ಶಿಯೂ ಆಗಿದ್ದ ಶೈಖುನಾ ಶಂಸುಲ್ ಉಲಮಾರವರ ಹೆಸರಲ್ಲಿ ಕೆಲ ಸಂದಿಗ್ಧ ಪರಿಸ್ಥಿಯಲ್ಲಿ ಸೂರ ಫಾತಿಹಾ ಪಠಿಸಿ ತೊಂದರೆ ನಿವಾರಣೆಯಾದ ಅನುಭವವನ್ನು ಹಂಚಿಕೊಂಡರು.
ಮುಂದುವರೆದು ಮಾತನಾಡಿದ ಅವರು ಇಂದು ಹೆಚ್ಚಾಗಿ ಧರ್ಮವನ್ನು ಸಂಕುಚಿತ ಗೊಳಿಸಿ ಪ್ರಚಾರ ಮಾಡುತ್ತಿರುವುದು ಕಂಡುಬರುತ್ತಿದೆ.ಪ್ರತಿಯೊಂದು ಜನರೂ ತಾವು ಪ್ರತಿನಿಧೀಕರಿಸುವ ಪಾರ್ಟಿಯ ಆಶಯಕ್ಕೆ ಪೂರಕವಾದದ್ದನ್ನು ಮಾತ್ರ ಇತರರಿಗೆ ಹಂಚಿಕೊಳ್ಳುತ್ತಾರೆ.ಇಷ್ಟವಾಗದ್ದು ಅದು ಕುರಾನಿನ ಆಶಯವಾದರೂ ಅದನ್ನು ತಿರಸ್ಕರಿಸುವ ಮನೋಭಾವ ಬೆಳೆಯುತ್ತಿದೆ.ನಿಜವಾಗಿಯೂ ಇದು ಅತ್ಯಂತ ಕೆಟ್ಟ ವರ್ತನೆಯಾಗಿದೆ. ಪರಿಪೂರ್ಣ ಸತ್ಯ ವಿಶ್ವಾಸಿಗೆ ಇದು ತಕ್ಕುದ್ದಲ್ಲ ಎಂದು ಅವರು ವಿವರಿಸಿದರು.

*ರಿಪೋರ್ಟರ್*

Share this on:
error: Content is protected !!