ತಥಾಕಥಿಕ,ಕಪೋಲ ಕಲ್ಪಿತ,ಆಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ಎಂಬ ಗುಮ್ಮನನ್ನು ಮತ್ತು ರಾಜಕೀಯವಾಗಿ ಬಿಜೆಪಿ ಗೆ ಸಾಕಷ್ಟು ಹಾಲು, ಗೊಬ್ಬರ ನೀಡಿದ ಗೋವುಗಳನ್ನು ಮುಂದಿಟ್ಟು ಇನ್ನು ಎಷ್ಟು ಕಾಲ ನೀವು ರಾಜಕೀಯ ಮಾಡುತ್ತೀರಿ ಬಿ ಜೆ ಪಿ ಯವರೇ?ಈ ಪ್ರಶ್ನೆಯನ್ನು ದೇಶದ ನಾಗರಿಕರು ಈಗ ಬಿ ಜೆ ಪಿ ಯವರ ಮುಂದಿಡುತ್ತಿದ್ದಾರೆ.
ದೇಶದ ನಾಗರಿಕರಿಗೆ ಇಂತಹ ಕೆಲವು ಪದಪುಂಜಗಳ ಜಪವನ್ನು ಕೇಳಿ ಕೇಳಿ ಸಾಕಾಗಿ ,ಸುಸ್ತಾಗಿ ಹೋಗಿದೆ.
ಬಾಬ್ರಿ ಯಿಂದ ಇನ್ನು ಯಾವುದೇ ಲಾಭ ಇಲ್ಲ ಎಂದು ಖಾತರಿಯಾದ ಬಳಿಕ ಇನ್ನು ಜನರ ಭಾವನೆಯನ್ನು ಕೆರಳಿಸುವ ಇಷ್ಯುವನ್ನು ಮುನ್ನಲೆಗೆ ತರದೇ ಇದ್ದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಬಿ ಜೆ ಪಿ ಯವರಿಗೆ ಗೊತ್ತಿರುವಂತೆ ದೇಶದ ಪ್ರಜೆಗಳಿಗೂ ಚೆನ್ನಾಗಿ ಗೊತ್ತು.
ಯುಪಿಎ ಸರಕಾರದ ಟೈಮಲ್ಲಿ ಪ್ರದಾನಿಯಾಗಿದ್ದ,ಬಿಜೆಪಿಯವರು
ರಬ್ಬರ್ ಸ್ಟಾಂಪ್ ,ಮೌನಿ ಎಂದೆಲ್ಲಾ ಗೇಲಿ ಮಾಡುತ್ತಿದ್ದ ಮನಮೋಹನ್ ಸಿಂಗ್ ಕಾಲದಲ್ಲಿ ದೇಶದ ಉದ್ದಗಲಕ್ಕೂ ವಾರಕ್ಕೊಂದರಂತೆ ಬೃಹತ್ ಪ್ರಾಜೆಕ್ಟ್ ಗಳು ಉದ್ಘಾಟನೆ ಗೊಂಡು ದೇಶಕ್ಕೆ ಸಮರ್ಪಿಸುತ್ತಿದ್ದದ್ದನ್ನು ದೇಶವಾಸಿಗಳು ಕಣ್ಣು ತುಂಬಾ ನೋಡಿದ್ದು ಈಗ ಇತಿಹಾಸ.
ಅದೇ ವೇಳೆ ಮೋದಿ ಯವರು ತ್ರಿವಳಿ ತಲಾಕ್,ಕಾಶ್ಮೀರದ 371 ಕಾನೂನು,ರಾಮಮಂದಿರ ಮೊದಲಾದ ಭಾವನಾತ್ಮಕ ವಿಷಯಗಳನ್ನು ವಿಲೇವಾರಿ ಮಾಡಿದ್ದು ಬಿಟ್ಟರೆ ದೇಶವನ್ನು ಬೇರೆ ಯಾವುದೇ ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಲು ಅವರಿಗೆ ಈ ತನಕ ಸಾದ್ಯವಾಗಿಲ್ಲ ಎಂಬುದು ಬಿ ಜೆ ಪಿ ಯವರಿಗೆ ಖಂಡಿತ ಗೊತ್ತು.
ಅಭಿವೃದ್ದಿ ಸಾಧಿಸುವುದು ಬಿಡಿ ಇದ್ದ ಅಭಿವೃದ್ದಿಯನ್ನೇ ನಿರ್ನಾಮ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿಸಿದ್ದು ಮೋದಿಯವರ ಸಾಧನೆ.
ಇದರ ದುಷ್ಪರಿಣಾಮ ದೇಶಕ್ಕೆ ದೇಶವೇ ಇಂದು ಅನುಭವಿಸುತ್ತಿದೆ.
ಒಂದು ಮಾತಂತೂ ನಿಜ..
ಇವತ್ತು ಬಿ ಜೆ ಪಿ ಪಕ್ಷ ಉಳಿದಿದ್ದರೆ ಅದು ಕಾಂಗ್ರೆಸ್ ಪಕ್ಷದ ನಿಷ್ಕ್ರಿಯ ತೆಯಿಂದ ಮಾತ್ರವಾಗಿದೆ.
ಹೌದು!
ಕಾಂಗ್ರೆಸ್ ನ ಅಪಕ್ವ ನಡೆಗಳು ಇಂದು ದೇಶವನ್ನೇ ದುರಂತಕ್ಕೆ ತಳ್ಳಿ ಬಿಟ್ಟಿದೆ ಎಂದು ಹೇಳಲೇ ಬೇಕಾಗುತ್ತದೆ.
ಈಗ ದೇಶದ ಪರಿಸ್ಥಿತಿ ಹೇಗಿದೆ ಎಂದರೆ, ಬಿ ಜೆ ಪಿ ಯವರು ಮತೀಯ ಭಾವನೆಗಳಿಗೆ ಸಂಂಭಂದಿಸಿದಂತೆ ಏನೇ ಕಾನೂನು ತಂದರೂ ಆ ಬಗ್ಗೆ ತುಟಿಪಿಟಿಕ್ ಎನ್ನುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ .
ಆದ್ದರಿಂದ ನೀವುಗಳು ಏನೇ ಕಾನೂನು ತರುವುದಾದರು ಆ ಬಗ್ಗೆ ಹೆಚ್ಚು ಡಂಗುರ ಸಾರದೇ ಶೀಘ್ರದಲ್ಲೇ ತಂದು ಬಿಡುವ ಅನುಕೂಲಕರ ಪರಿಸ್ಥಿತಿ ದೇಶದಲ್ಲಿದೆ.
ಅದೇ ವೇಳೆ ಗೋವು ಹತ್ಯೆ ಮತ್ತು ಲವ್ ಜಿಹಾದ್ ವಿರುದ್ದ ನಿಷೇಧವನ್ನು ಜಾರಿಗೆ ತಂದರೆ ಅದರಿಂದ ಇಲ್ಲಿನ ಮುಸ್ಲಿಮರಂತೂ ತಲೆ ಕೆಡಿಸಿ ಕೊಂಡಿಲ್ಲ ಎಂಬುದನ್ನು ಬಿಜೆಪಿಯವರು ತಿಳಿದು ಕೊಳ್ಳಬೇಕು.
ಮುಸ್ಲಿಮರಿಗೆ ಇದರಿಂದ ಅಂತಹ ಯಾವುದೇ ತೊಂದರೆಯೂ ಇಲ್ಲ.
ಮುಸ್ಲಿಮರು ಅನ್ಯ ಧರ್ಮೀಯ ಮಹಿಳೆಯರನ್ನ ಲವ್ ಮಾಡುವುದು ಒತ್ತಟ್ಟಿಗಿರಲಿ,ಮುದುವೆಗೆ ಮುಂಚೆ ಸ್ವಂತ ಧರ್ಮೀಯರನ್ನೇ ಲವ್ ಮಾಡುವುದನ್ನು ಇಸ್ಲಾಂ ವಿರೋಧಿಸಿದೆ.
ಅದರಂತೆ ಹಿಂದೂ ಯುವಕರು ಇತರ ಧರ್ಮೀಯ ಮಹಿಳೆಯರನ್ನೂ ಲವ್ ಮಾಡುವುದು ಈಗ ಮಾಮೂಲಿಯಾಗಿ ಬಿಟ್ಟಿದೆ.
ಈ ಅಂಶ ಕಾನೂನು ತರುವಾಗ ನೆನಪಲ್ಲಿಡುವುದು ಒಳಿತು.
ನೀವು ರೂಪಿಸುವ ಕಾನೂನು ಇದಕ್ಕೂ ಅನ್ವಯ ಆದರೆ ಆಗ ಆ ಕಾನೂನಿಗೆ ಒಂದು ನ್ಯಾಯ ಇರುತ್ತೆ. ಇನ್ನು ದೇಶದ ಸಂವಿಧಾನದ ಆಧಾರದಲ್ಲಿ ಈ ತರುವ ಕಾನೂನಿಗೆ ಕೋರ್ಟಿನಲ್ಲಿ ಮಾನ್ಯತೆ ಸಿಗಬಹುದಾ ಎಂಬುದು ಕೂಡಾ ಸಂಶಯಾಸ್ಪದ.
ಅದೇ ರೀತಿ ಗೋಹತ್ಯಾ ನಿಷೇಧದ ಬಗ್ಗೆ ಹೇಳುವುದಾದರೆ ಅದು ಕೂಡಾ ಮುಸ್ಲಿಮರನ್ನು ಅಷ್ಟು ಭಾದಿಸುವಂತದ್ದಲ್ಲ.
ಇಲ್ಲಿನ ರೈತಾಪಿ ವರ್ಗವನ್ನೇ ಅದು ಹೆಚ್ಚಾಗಿ ಭಾದಿಸುತ್ತದೆ ಎಂಬುದು ಈಗಾಗಲೇ ದಿಟ ಗೊಂಡಿದೆ.
ಮುಸ್ಲಿಮರು ಬೀಪ್ ಮಾತ್ರ ಸೇವಿಸಿ ಬದುಕುವ ಹುಲಿ ಜಾತಿಗೆ ಸೇರಿದವರೇನೂ ಅಲ್ಲ.
ಬ್ರಾಹ್ಮಣರ,ಜೈನರ ಬೃಹತ್ ಕಂಪಣಿಗಳು ವಿದೇಶಕ್ಕೆ ರಪ್ತು ಮಾಡುತ್ತಿರುವ ಬೀಪ್ ಮೂಲಕ ಸಿಗುವ ಆದಾಯ ನಷ್ಟ ಆದರೆ ಅದು ಅವರಿಗೂ ದೇಶದ ಬೊಕ್ಕಸಕ್ಕೂ ನಷ್ಟ ಆಗುತ್ತದೆಯೇ ಹೊರತು ಮುಸ್ಲಿಮರಿಗೆ ಅದರಿಂದ ಯಾವುದೇ ನಷ್ಟ ಆಗಲ್ಲ.
ಆದ್ದರಿಂದ
ದೇಶದ ಮತ್ತು ಮಾನವರ ಅಭಿವೃದ್ದಿಗೆ ಪೂರಕವಾಗುವ ಯಾವುದೇ ಕಾನೂನು ತಂದರೂ ಅದನ್ನು ದೇಶದ ಪ್ರಜೆಗಳು ಸ್ವಾಗತಿಸುತ್ತಾರೆ.
ಅದೇ ವೇಳೆ ಒಂದು ಧಾರ್ಮಿಕ ವಿಭಾಗವನ್ನು ಮಾತ್ರ ಗುರಿಯಾಗಿಟ್ಟು ಕರಾಳ ಕಾನೂನು ತರುವುದು ದೇಶದ ಭದ್ರತೆಗೆ ಅಪಾಯಕಾರಿ ಎಂಬುದನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ.
ಒಟ್ಟಿನಲ್ಲಿ ಯಾವುದೇ ಅನಗತ್ಯ ಕಾನೂನು ತರುವಾಗ ಅದು ದೇಶವನ್ನು ಮತ್ತೊಂದು ವಿಭಜನೆಯತ್ತ ತಳ್ಳುವಂತಹದ್ದು ಆಗದರಿರಲಿ ಎಂಬುದೇ ದೇಶ ಪ್ರೇಮಿಗಳ ಹಾರೈಕೆ.
– ಎಸ್ ಬಿ ದಾರಿಮಿ