Latest Posts

ಟ್ರಾಕ್ಟರ್ ಗಳನ್ನು ಯುಧ್ಧ ಟ್ಯಾಂಕರ್ ಗಳಂತೆ ಬಳಸಿ ಕೆಂಪುಕೋಟೆಗೆ ನುಗ್ಗಲು ಹೇಗೆ ಸಾಧ್ಯವಾಯಿತು?

ಜುಮಾ ಭಾಷಣ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಇತ್ತೀಚೆಗಷ್ಟೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಯ 2020ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾದಾಗ ಇಡೀ ದೇಶ ಅಚ್ಚರಿ ಪಟ್ಟಿತು. ಪರೀಕ್ಷೆಯಲ್ಲಿ ಒಡಿಶಾದ ಸೋಯೆಬ್‌ ಅಫ್ತಾಬ್‌ ಅವರು 720ಕ್ಕೆ 720 ಅಂಕ ಗಳಿಸಿ ಮೊದಲ ಸ್ಥಾನ ದಾಖಲಿಸಿದ್ದರು.ಇದು ಐತಿಹಾಸಿಕ ದಾಖಲೆಯೂ ಹೌದು.

ಬೆಂಗಳೂರಿನ ನಾಗಾವರ ದ ಬದುರುನ್ನೀಶಾ ಬಿ ಕಾಮ್ ನಲ್ಲಿ ಬರೋಬ್ಬರಿ ಎಂಟು ಮೆಡಲ್ ಗಳೊಂದಿಗೆ ಸಾಧನೆಯನ್ನು ಮಾಡಿದ್ದಾಳೆ. ಕುಟುಂಬ ದಲ್ಲೇ ಪ್ರಥಮವಾಗಿ ಕಾಲೇಜು ಹತ್ತಿದ ಮಗಳು ಮಾಡಿದ ಅದ್ಬುತ ಸಾಧನೆ ಸಣ್ಣದಲ್ಲ. ಅನಾಥಳಾಗಿದ್ದರೂ ಕೂಡಾ ಕುಟುಂಬದ ಸಹಕಾರದಿಂದ ಹೆಣ್ಣು ಮಗಳು ಮುಂದೆ ಬಂದಿದ್ದಾಳೆ.ಮಾತಾಡಿಸಿದರೆ ಅವಳು ಕಾಂಪಿಟೇಟಿವ್ ಎಕ್ಝಾಮ್ ಬಗ್ಗೆ
ಸರಳವಾಗಿ ಮಾತಾಡುತ್ತಾಳೆ.

ಇಂದು ಸಮುದಾಯದ ಸಾಧಕ ಸಾಧಕಿಯರು ಅಭಿಮಾನ ಪಡುವಂತೆ ಮುನ್ನುಗ್ಗುತ್ತಿರುವುದು ಆಶಾದಾಯಕ ಬೆಳೆವಣಿಗೆ ಆಗಿದೆ.ನಮ್ಮ ಊರಿನವರೇ ಆದ ಅಶ್ರೀನಾ ಸಿವಿಲ್ ಜಡ್ಜ್ ಆಗಿ ನೇಮಕ ಗೊಂಡಿರುತ್ತಾರೆ.ಅದೇ ರೀತಿ ಮುಹಮ್ಮದ್ ಅಲಿ ರೂಮಿ ಯುಪಿಎಸ್ಸಿ ಯಲ್ಲಿ ತೇರ್ಗಡೆ ಯಾಗಿ ದೆಹಲಿಯಲ್ಲಿ ಐ ಎ ಎಸ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ಮುಂದೆ ಡಿ ಸಿ ಆಗುವತ್ತಾ ಪ್ರಯತ್ನ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ನಮ್ಮ ಸಮುದಾಯದ ಇಂಟಲೆಕ್ಚುವಲ್ ವಿದ್ಯಾರ್ಥಿಗಳಿಗೆ ಬೇಕಾದ ಪ್ರೋತ್ಸಾಹ ನೀಡುವುದು ಅತ್ಯಗತ್ಯ.

ನಮ್ಮಲ್ಲಿ ಸಂಪಾದನೆ ಮಾಡಲು ಪೈಪೋಟಿ ಇದೆ.ಮನೆ, ಮದುವೆ, ಕಾರು, ಬಂಗಲೆ ಮುಂತಾದವುಗಳಲ್ಲಿ ಮೈ ಬಗ್ಗಿಸಿ ಪೈಪೋಟಿಗೆ ಇಳಿಯುತ್ತಾರೆ.ಆದರೆ ಪ್ರತಿ ಮನೆಯಲ್ಲಿ ಸರಕಾರಿ ನೌಕರ,ಸಿವಿಲ್ ಸರ್ವೀಸುಗಳಲ್ಲಿ ಸಾನಿಧ್ಯ ಖಾತರಿ ಪಡಸುವ ಆವಶ್ಯಕತೆ ಜರೂರಾಗಿದೆ.ಕಾರಣ ಅದು ಸಬಲೀಕರಣದ ದೊಡ್ಡ ಅಸ್ತ್ರ.ಈ ಕಾರಣದಿಂದ ಸಮಸ್ತ ವಿದ್ವಾಂಸ ಸಭೆಯು ವಿದ್ಯಾರ್ಥಿ ಸಂಘಟನೆ ಯನ್ನು ರಂಗಕ್ಕಿಳಿಸಿದೆ.

ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆಯ ನಿಮಿತ್ತ ಉಸಿರುಗಟ್ಟುವ ವಾತಾವರಣ ನಿರ್ಮಾಣ ವಾಗಿದೆ.ಕೆಂಪು ಕೋಟೆ ಯಲ್ಲಿ ಎಲ್ಲಾ ಸುರಕ್ಷಾ ವ್ಯವಸ್ಥೆಯನ್ನು ಭೇದಿಸಿ ಒಳನುಗ್ಗಿ ಬಾವುಟವನ್ನು ಹಾರಿಸಲು ಸಿಕ್ಕರಿಗೆ ಸಾಧ್ಯವಾಗಿದೆ.ಸರಿಯೋ ತಪ್ಪೋ ಎಂಬುದು ಕಾನೂನಿನಡಿ ನಿರ್ಧಾರವಾಗಲಿ.ಆದರೆ ಇಂತಹ ಕಂಡುಕೇಳರಿಯದ ರೀತಿಯಲ್ಲಿ ಸಂಘರ್ಷ ಏರ್ಪಟ್ಟಾಗ ಪೋಲಿಸ್ ಇಲಾಖೆ ಏನೂ ಮಾಡಲಾಗಲಿಲ್ಲ.ಲಾಠಿ ಕೆಲಸಕ್ಕೆ ಬರಲಿಲ್ಲ.ಬಂದೂಕು ಶಬ್ದ ಮಾಡಲಿಲ್ಲ.ಕಾರಣ ಅಸಂಖ್ಯಾತ ಸಿಕ್ ಸಮುದಾಯದ ಮಂದಿ ಸರಕಾರದ ಸರ್ವೀಸುಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸ್ಥಾನ ಪಡೆದಿದ್ದಾರೆ.ಆ ಮೂಲಕ ಸರಕಾರವನ್ನು ನಿಯಂತ್ರಿಸುವ ತಾಕತ್ತು ಅವರಲ್ಲಿದೆ.
ಆದುದರಿಂದ ಉನ್ನತ ಶಿಕ್ಷಣ ಉತ್ತಮ ಹುದ್ದೆ ಎಂಬ ಘೋಷಣೆ ಮೊಳಗಬೇಕಿದೆ.
ಆದರೆ ದುಃಖದ ಸಂಗತಿಯೇನೆಂದರೆ ಜಿಲ್ಲಾ ವಿದ್ಯಾಂಗ ನಿರ್ದೇಶಕ ರ ಮಾಹಿತಿಯಂತೆ ದ.ಕ.ಜಿಲ್ಲೆಯಲ್ಲಿ ವಿದ್ಯಾಗಮ ತರಗತಿಗಳು ಪ್ರಾರಂಭವಾದಾಗಿನಿಂದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸುಮಾರು ಮೂರು ಸಾವಿರ 3000 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ.ಅದರಲ್ಲಿ ಹೆಚ್ಚಿನವರು SSLC ಕಲಿಯುವವರು. ಫೆಬ್ರವರಿ 15 ರ ಒಳಗೆ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳದಿದ್ದರೆ ಅವರು ಪರೀಕ್ಷೆಯಿಂದ ವಂಚಿತರಾಗುತ್ತಾರೆ.ಅದೂ ಅಲ್ಲದೆ Pre-Matric scholarship ಗೆ ಮುಸ್ಲಿಂ ಸಮುದಾಯದ ಸುಮಾರು 8000 ವಿದ್ಯಾರ್ಥಿಗಳ ಹೊಸ ಅರ್ಜಿಗಳು ಹಾಗೂ 3600 ರಿನೀವಲ್ ಅರ್ಜಿಗಳು ಸಲ್ಲಿಸಲು ಬಾಕಿ ಇದೆ ಎಂದು ಡಿ.ಡಿ.ಪಿ.ಐ.ಯವರು ಕಳವಳ ವ್ಯಕ್ತಪಡಿಸಿದ್ದಾರೆ.

Share this on:
error: Content is protected !!