Latest Posts

ಕೊರೋಣ ಕಲಿಸಿದ ವಿದ್ಯೆ

ಕೊರೋಣ ವೈರಸ್ ಮಹಾ ಮಾರಿಯಾದರೂ, ಬಹಳಷ್ಟು ವಿದ್ಯೆಗಳನ್ನು ಕಲಿಸುವ ಮೂಲಕ ಅನುಗ್ರಹವಾಗಿಯೂ ಪರಿಣಾಮಿಸಿದೆ. ಧರ್ಮ ದೇವನನ್ನು ಮರೆತು ಸದಾ ಮೆರೆಯುತ್ತಿದ್ದ ಜನರಿಗೆ ದೇವನನ್ನು ಸ್ಮರಿಸುವಂತೆ ಮಾಡಿದೆ. ಸರಳಜೀವನವನ್ನು ಕಲಿಸಿದೆ. ಮರಣದ ಭಯವನ್ನು ಹುಟ್ಟಿಸಿದೆ.

ಸ್ವಚ್ಛತೆಯ ಮಹತ್ವವನ್ನು ಕೊರೋಣ ಬೋಧಿಸಿದೆ. ಉಸಿರಿನ ಬೆಲೆಯನ್ನು ತಿಳಿಸಿದೆ ಆಡಂಬರದ ಮದುವೆ ದುಂದುವೆಚ್ಚ ಇತ್ಯಾದಿಗಳಿಗೆ ಕಡಿವಾಣ ಹಾಕಿ ಸರಳತೆಯ ಹಾದಿಯನ್ನು ತೋರಿಸಿದೆ. ತನಗೂ ಒಂದು ದಿನ ಸಾವಿದೆ ಅನ್ನುವುದನ್ನು ಮರೆತು ಬರೀ ಹಣ,ಆಸ್ತಿ,ಅಂತಸ್ತು ಅಧಿಕಾರದಿಂದ ಮೆರೆಯುತಿದ್ದ ಮಾನವನನ್ನು ಈ ಮಹಾಮರಿ ಕೊರೋಣ ಬಡಿದೇಚ್ಚರಿಸಿದೆ. ನೋಡು ಮನುಜ! ಸಾವು ನಿನ್ನ ಬೆನ್ನ ಹಿಂದೆಯೇ ಇರುವಾಗಹಣದ ಬೆನ್ನು ಹೆತ್ತದೆ ಮನುಷ್ಯ ಸಂಬಂಧಗಳನ್ನು ಮರೆಯಬೇಡ. ನಿನ್ನನ್ನು ನೀನು ಸುಧಾರಿಸಿಕೋ. ಉತ್ತಮನಾಗಿ ಬಾಳ್ವೆ ನಡೆಸು ಎಂಬ ಎಚ್ಚರಿಕೆಯನ್ನು ನೀಡಿದೆ. “ಸಕಲ ಜೀವಾತ್ಮರಿಗೆ ಲೇಸಾಗಲಿ” ಎಂಬ ಪಡಿತರ ಪ್ರಾರ್ಥನೆಯಂತೆ ಇದರಲ್ಲೇ ನಮ್ಮ ಒಳಿತು ಹಾಗೂ ರಕ್ಷೆ ಅಡಗಿದೆ ಎನ್ನುವ ಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿ ಕೊಳ್ಳಬೇಕು ಎಂಬ ಮಹಾಮಂತ್ರವನ್ನು ಈ ಮಹಾಮಾರಿ ಕೋರೋಣವು ನೆನಪಿಸಿದೆ. ನಾನು ನನಗೆ ನನ್ನಿಂದಲೇ ಎಂಬ ಸ್ವಾರ್ಥ ಮನೋಭಾವನೆ ಬೆಳೆಸಿಕೊಂಡಿರುವ ಮಾನವನಿಗೆ ನಿಸ್ವಾರ್ಥ ಮನೋಭಾವನೆಯನ್ನು ಮೂಡಿಸಿದೆ.

ವಿಶ್ವದ ಎಂತೆಂಥ ಪ್ರಚಂಡ ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ಬಲಿಯನಾಧಿಪತಿಗಳು, ಐರಾಣರಂಥವರನ್ನೂ ಎಡಮುರಿಗಟ್ಟಿ ಮನೆಯಲ್ಲಿಯೇ ಕಾಲು ಮುರಿದು ಕೂರುವಂತೆ ಮಾಡಿದೆ. ಹತ್ತು ಹಲವಾರು ಸಾಧನೆ ಮಾಡಿದ ವಿಜ್ಞಾನಿಗಳನ್ನು ಸಹ ಗಡಗಡ ನಡುಗಿಸಿದ ಎಂದು ಹೇಳಬಹುದು. ನಾ ಮೇಲು,ನೀ ಕೀಳು ಎಂಬ ಭೇದ-ಭಾವ ತೊಡೆದುಹಾಕಿ ಅರಸ -ಅಳು ಎಲ್ಲರಿಗೂ ಸಮಾನತೆಯ ಪಾಠ ಕಲಿಸಿದೆ. ಇಲ್ಲಿ ಪರಸ್ಪರ ಎಲ್ಲರೂ ಅಸ್ಪರ್ಶ್ಯ ರಾಗಿಯೇ ಉಳಿಯುವಂತಾಗಿದೆ. ಯಾರು ಪರಸ್ಪರ ಮುಟ್ಟದೆ, ತಟ್ಟದೇ,ಹಸ್ತಲಾಗವ ಮಾಡದೆ ದೂರದಿಂದಲೇ ಹಾರೈಸುವಂತೆ ಮಾಡಿ ಇವ ನಮ್ಮವ ಇವ ನಮ್ಮವ ಎಂಬ ವಿನೀತಭಾವವನ್ನು ಕಲಿಸಿದೆ.
ಮನುಷ್ಯನ ದುರಾಸೆಯ ಓಟಕ್ಕೆ ಬ್ರೇಕ್ ಇಲ್ಲದಿದ್ದಲ್ಲಿ ಆಗಾಗ ಕೋರೋಣ ದಂತಹ ಹತ್ತು ಹಲವು ವೈರಸ್ಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ನಾವೆಲ್ಲ ಪ್ರಕೃತಿಯ ಕೂಸುಗಳಾಗಿರುವುದರಿಂದ ಪ್ರಕೃತಿಗೆ ಹೊಂದಿಕೊಂಡು ಬದುಕಬೇಕು. ಎಂಬುದನ್ನು ಕಲಿಸಿಕೊಟ್ಟಿದೆ ಹಾದಿ ತಪ್ಪುತ್ತಿರುವ ಜನಾಂಗಕ್ಕೆ ಕೋರೋಣ ವೈರಸ್ ಮೂಲಕ ದೇವನು ವಿದ್ಯೆಯನ್ನು ಕಲಿಸುತ್ತಿದ್ದಾನೆ. ಅದೇನಿದ್ದರೂ ಈಗ ರೋನಾ ಮಹಾಮಾರಿಯು ಈ ಲೋ ಮೂಲೋತ್ಪಾಟನ ಗೊಲ್ಲಳ್ಳಿ ಎಂಬುದು ಅಲ್ಲಾಹನು ನಮ್ಮ ಪ್ರಾರ್ಥನೆ.

✍️ಬಾಸಿಮ ಗೂಡಿನಬಲಿ
(ವಿದ್ಯಾರ್ಥಿ ಹಯಾತುಲ್ ಇಸ್ಲಾಂ ಮದ್ರಸ ಗೂಡಿನಬಲಿ)

Share this on:
error: Content is protected !!