Latest Posts

ಸ್ವಾತಂತ್ರ್ಯ ಸಂಗ್ರಮದಲ್ಲಿ ಮುಸ್ಲಿಮರ ಪಾತ್ರ

✍️ ಬಹರನ್ನೂರಿ
(ವಿದ್ಯಾರ್ಥಿ ಹಯಾತುಲ್ ಇಸ್ಲಾಂ ಮದ್ರಸ ಗೂಡಿನಬಳಿ)

ನಮ್ಮ ದೇಶ ಈ ದಿನವನ್ನು ಆಚರಿಸಲು ಸಾವಿರಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ.ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು.ಅವರೆಲ್ಲರನ್ನೂ ಸ್ಮರಿಸುತ್ತಾ ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ.
೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು.ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ.ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ.ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ ”ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ,ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ,ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚರಿತ್ರೆಯಲ್ಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತು ಬಡಿದಾಡಿದ ವೀರಕಲಿಗಳ ಬಗ್ಗೆ ನಾವೆಲ್ಲರೂ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ.ಗಾಂಧಿ ,ನೆಹರೂ ,ನೇತಾಜಿ ಇನ್ನಿತ್ಯಾದಿ ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ಬ್ರಿಟಿಷರ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿಯೂ ನೇಪಥ್ಯಕ್ಕೆ ಸರಿಸಲ್ಪಟ್ಟ ಇದೇ ನೆಲದ ಮುಸ್ಲಿಂ ಹೋರಾಟಗಾರರ ಬಗ್ಗೆ ಭಾರತದ ಚರಿತ್ರೆಕಾರರು ಹೆಚ್ಚಾಹೆಚ್ಚು ಬರೆದಿರುವುದು ದಾಖಲಿಸಿರುವುದು ತೀರಾ ಕಡಿಮೆ.
ಈ ಭಾರತ ದೇಶಕ್ಕೆ ಬೇಕಾಗಿ ತ್ಯಾಗಗಳನ್ನು ಸಹಿಸಿದ ಎಷ್ಟೋ ಮುಸ್ಲಿಂ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ವಿಶೇಷವೇನೆಂದರೆ ಅವರಲ್ಲಿರುವವರೆಲ್ಲರೂ ಮುಸ್ಲಿಂ ವಿದ್ವಾಂಸರಾಗಿದ್ದರು.

ಅವರಲ್ಲಿ ಪ್ರಮುಖರು:
1.ಟಿಪ್ಪು ಸುಲ್ತಾನ್
2.ನವಾಬ್ ಸಿರಾಜುದ್ದೌಲ
3.ಸಯ್ಯದ್ ಅಹಮ್ಮದ್ ಶಹೀದ್
4.ಅಬು ಝಫಾರ್ ಸಿರಾಜುದ್ದೀನ್ ಮುಹಮ್ಮದ್ ಬದಹದ್ದೂರ್ ಷಾ
5.ಮೌಲಾನ ವಿಲಾಯತ್ ಅಲಿ ಸಾದಿಕ್ ಪುರಿ.
6.ಅಲ್ಲಾಮಾ ಫಝಲ್ ಹೈಕ್ ಖೈರಾಬಾದಿ.
7.ಬೇಗಂ ಹಜ್ರತ್ ಮಹಲ್

 1. ನವಾಬ್ ಬಹಾದ್ದೂರ್ ಖಾನ್ .
  9.ಡಾ.ಮುಕ್ತಾರ್ ಅಹ್ಮದ್ ಅನ್ಸಾರಿ.
 2. ಡಾ. ಸಯ್ಯಿದ್ ಮಹಮದ್.
  11.ಮೌಲಾನಾ ಮುಹಮ್ಮದಲೀ
  12 .ಮೌಲಾನಾ ಶೌಕತ್ ಅಲೀ
  13.ಮಾಲಾನ ಅಬ್ದುಲ್ ಕಲಾಂ ಆಜ್ಹಾದ್
  ಮೇಲೆ ತಿಳಿಸಿದವರೆಲ್ಲಾ ಮಹಾತ್ಮಾ ಗಾಂಧೀಜಿಯವರಿಗಿಂತಲೂ ಮುಂಚೆ ಭಾರತದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮದ ಅನುಯಾಯಿಗಳನ್ನು ಒಟ್ಟುಗೂಡಿಸಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿದವರಾಗಿದ್ದರು.
  ಅದೇ ಸಮಯದಲ್ಲಿ ಕೇರಳದಲ್ಲಿಯೂ ಮಂಪುರ0 ಸಯ್ಯಿದ್ ಅಲವಿಯವರ ನೇತೃತ್ವದಲ್ಲಿ ಕುಂಜಾಲಿ ಮರಕ್ಕಾರ್ ,ಅಲಿ ಮುಸ್ಲಿಯಾರ್,ಅಬ್ದುಲ್ ಕಾದಿರ್ ಚೆಬನ್ ಪೋಕರ್ ಮುಂತಾದವರ ಜೊತೆ ದಲಿತರು ಸೇರಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ತೆಗೆದುಕೊಂಡರು.ಜೀವದ ಹಂಗು ತೊರೆದು ಹೋರಾಡಿದ ಮುಸ್ಲಿಮರನ್ನು ಭಯೋತ್ಪಾದಕರನಾಗಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದಾರೆ.ಎಲ್ಲಿಯವರೆಗೆಂದರೆ ಶಾಲಾ ಪಠ್ಯ ಪುಸ್ತಕಗಳನ್ನು ತಿದ್ದುಪಡಿ ಮಾಡಿ ಮುಸ್ಲಿಂ ಹೋರಾಟಗಾರರ ಹೆಸರನ್ನೇ ತೆಗೆದಿದ್ದಾರೆ.

ಬ್ರಿಟಿಷರೊಡನೆ ಹೋರಾಡಿ ಮರಣ ವೀರ ಮರಣ ಹೊಂದಿದವರ ಬಗ್ಗೆ ಮಾತೆತ್ತದ ಪ್ಯಾಶಿಸ್ಟ್ ಶಕ್ತಿಗಳು ಕೋಮುಗಲಭೆಗಳಲ್ಲಿ ತೀರಿ ಹೋದವರ ಹೆಸರಿನಲ್ಲಿ ತಮ್ಮ ಸಮುದಾಯಕ್ಕೆ ಸೇರಿದವ ಎಂಬ ಕಾರಣಕ್ಕೆ ಊರಿಡೀ ಅಶಾಂತಿ ಸರ್ಷ್ಟಿಸುತ್ತಾರೆ.ಹೀಗೆ ಮಾಡಿದವರೆಲ್ಲರೂ
ದೇಶಪ್ರೇಮಿಗಳೆಂದು ಹೇಳುತ್ತಾರೆ. ಆದರೆ ಮುಸ್ಲಿಮರಿಗೆ ದೇಶಪ್ರೇಮವಿದೆ ಎಂದು ಸಾಬೀತುಪಡಿಸಲು ಎದೆಯನ್ನು ಸೀಳಿ ತೋರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ನಾನು ಎಲ್ಲಿದ್ದರೂ ಯಾವಾಗಲೂ ಹೆಮ್ಮೆಯಿಂದ ಇರುತ್ತೇನೆ.ನಾನು ಮುಕ್ತ ದೇಶದಲ್ಲಿ ವಾಸಿಸುತಿದ್ದೇನೆ ಎಂದು ನನಗೆ ತಿಳಿದಿದೆ.ಅದಕ್ಕಾಗಿಯೇ ತಲೆ ಎತ್ತಿಕೊಂಡು ನಡೆಯುತ್ತೇನೆ.ನಮ್ಮ ದೇಶದ ಸ್ವಾತಂತ್ರ್ಯವನ್ನು ಹುತಾತ್ಮರ ರಕ್ತದಿಂದ ಖರೀದಿಸಿದ್ದು ,ಅದನ್ನು ಅಷ್ಟು ಲಘುವಾಗಿ ನಾನು ಸ್ವೀಕರಿಸುವುದಿಲ್ಲ.

ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು

Share this on:
error: Content is protected !!