Latest Posts

ಶಾಲಾ ಕಾಲೇಜುಗಳಲ್ಲಿ ಕಲಿತು ಉನ್ನತ ಸ್ಥಾನಮಾನಗಳನ್ನು ಪಡೆಯಬೇಕಾದ ವಿಧ್ಯಾರ್ಥಿಗಳು ಕೋಮುವಾದಿಗಳಾಗಲು ಕಾರಣವೇನು ?✍️P.M.ರಾಫಿಹ್ ಕಣ್ಣೂರು

ಹೌದು ಗೆಳೆಯರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಾವು ದಿನದಿಂದ ದಿನಕ್ಕೆ ಕೇಳುವಂತಹ ನೋಡುವಂತಹ ವಿಚಾರವಾಗಿದೆ ” ವಿಧ್ಯಾರ್ಥಿಗಳ ಮಧ್ಯೆ ಗಲಾಟೆಗಳು,ಚೂರಿ ಇರಿತ,ಹತ್ಯೆಗೆ ಯತ್ನ,ಲವ್ ಜಿಹಾದ್,ಅನೈತಿಕತೆ,ಅತ್ಯಾಚಾರ,ಗೂಂಡಾಗಿರಿ,, ಹೀಗೆ ಕಾನೂನು ಬಾಹಿರ ಚಟುವಟಿಕೆಗಳು.

ಒಂದು ಕಾಲದಲ್ಲಿ ಇದೆಲ್ಲವೂ ಎಲ್ಲೋ ಒಂದೆರೆಡು ಕಡೆ ಯಾರೋ ಅವಿಧ್ಯಾವಂತ ಕಿಡಿಗೇಡಿಗಳು ಮಾಡುತ್ತಿದ್ದಂತ ಕೃತ್ಯಗಳಾಗಿತ್ತು.ಅದರಂತೆ ಪೋಲೀಸ್ ಠಾಣೆಯ ಗೋಡೆಯಲ್ಲೂ ಅವರ ಹೆಸರು ಕೈದಿಗಳ ಪಟ್ಟಿಗೆಯಲ್ಲಿ ನೋಡಲು ಸಿಗುತ್ತಿತ್ತು. ಇಂದು ಅದೇ ಗೋಡೆಯ ಪಟ್ಟಿಯಲ್ಲಿ ವಿಧ್ಯಾರ್ಥಿಗಳ ಹೆಸರುಗಳು ಸೇರುತ್ತಿದೆ.
ಇದಕ್ಕೆ ಕಾರಣಗಳೇನು ?
ಯಾಕೆ ವಿಧ್ಯಾರ್ಥಿಗಳು ಈ ರೀತಿ ಕಮ್ಯುನಲ್ ಚಿಂತೆಗೊಳಗಾಗುತ್ತಿದ್ದಾರೆ ?
ವಿಧ್ಯೆ ಕಲಿತು ಜೀವನ ಮಾರ್ಗ ಕಂಡುಕೊಳ್ಳಬೇಕಾದ ಯುವಕರು ಈ ಮಟ್ಟಕ್ಕೆ ಕ್ರೂರಿಯಾಗಲು ಪ್ರೇರೇಪಿಸಿದವರ್ಯಾರು?

ಹೀಗೆ ಹಲವಾರು ಪ್ರಶ್ನೆಗಳು.
ಇದು ಕೇವಲ ಪ್ರಶ್ನೆಗಳಲ್ಲ.ಚಿಂತಿಸಿ ಬದಲಾಯಿಸಬೇಕಾದಂತಹ ವಿಚಾರವಾಗಿದೆ.
ಇಂದು ಯಾವುದೇ ಶಾಲಾ ಕಾಲೇಜಿಗೆ ಹೋದರೂ ಕೂಡ ಅಲ್ಲಿ ರಾಜಕೀಯ ಪ್ರೇರಿತ ಸಂಘಟನೆಗಳು ಕಾಣಲು ಸಾಧ್ಯವಿದೆ.ಒಂದೇ ತಾಯಿಯ ಮಕ್ಕಳಂತೆ ಜೀವಿಸಲು ಕಲಿಸುವ ಜಾಗದಲ್ಲಿ ಜಾತಿ ಧರ್ಮದ ಪಾಠಗಳನ್ನ ಮಾಡುವ ಕೆಲವು ಗುರುಗಳು.ಜಾತಿ,ಧರ್ಮಗಳ ಮಧ್ಯೆ ಕಚ್ಚಾಡಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ರಾಜಕೀಯ ಹುನ್ನಾರಗಳು.ತನ್ನ ಜೀವನದ ಪಯನ ಹೀಗಿರಬೇಕೆಂದು ಕಾಲೇಜುಗಳಿಗೆ ಸೇರಿದ ಮೇಲೆ ಆತನಲ್ಲಿ ಹುಟ್ಟುವುದು ಕೋಮು ಭಾವನೆಗಳು.ಇದು ವಿಧ್ಯಾರ್ಥಿಗಳಲ್ಲಿ ನಾವುಗಳು ಕಾಣುವಂತಹ ಗುಣಗಳು.

ಮಕ್ಕಳ ಭವಿಷ್ಯ ಹಾಳಾಗಬಾರದೆಂಬ ನಿಟ್ಟಿನಲ್ಲಿ ತನ್ನ ವರಮಾನ ಸಾಲದಿದ್ದರೂ ಸಾಲ ಮಾಡಿಯಾದರೂ ಸರಿ,ತನ್ನ ಜಾಗವನ್ನ ಅಡವಿಟ್ಟರೂ ಸರಿ,ಊರಿನ ಘಣ್ಯರ ಕಾಲಬುಡದಲ್ಲಿ ನಿಂತು ಬೇಡಿದರೂ ಸರಿ ಚಿಂತೆಯಿಲ್ಲ ತನ್ನ ಮಕ್ಕಳಿಗಾಗಿ ಪೋಷಕರು ದುಬಾರಿ ಬೆಲೆಯ ಶಾಲಾಕಾಲೇಜುಗಳನ್ನ ಆಯ್ಕೆ ಮಾಡಿ ಮಕ್ಕಳನ್ನ ಸೇರಿಸುತ್ತಾರೆ. ತನ್ನ ಮಕ್ಕಳು ನಾಳೆ ಈ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು.ಅವರನ್ನ ನೋಡಿ ಜನ ಮೆಚ್ಚುಗೆ ಹೇಳಬೇಕು.ತನ್ನ ಎಲ್ಲ ಆಕಾಂಕ್ಷೆಗಳನ್ನ ತನ್ನ ಮಕ್ಕಳಲ್ಲಿ ಕಾಣುವಾಗ ಉಳಿದ ನಷ್ಟಗಳ ಕುಂದುಕೊರತೆಗಳ ಕುರಿತು ಪೋಷಕರಿಗೆ ಬೇಸರವಿಲ್ಲ.

ತನ್ನ ಮಗುವನ್ನ ಹೊತ್ತು ಹೆತ್ತು ಸಾಕಿ ಸಲಹಿ ಆತನನ್ನ ಒಬ್ಬ ವಿಧ್ಯಾವಂತನನ್ನಾಗಿಸಲು ಪೋಷಕರು ಬರುವ ಕಷ್ಟಗಳು ತ್ಯಾಗಗಳು ಅಷ್ಟಿಷ್ಟಲ್ಲ.
ಇದೆಲ್ಲವನ್ನೂ ಅರಿತು ಅರಿಯದಂತೆ ನಟಿಸಿ”ಆ ಯುವಕರನ್ನ ರಾಜಕೀಯ ಲಾಭಕ್ಕಾಗಿ ಬಳಸಿ ಧರ್ಮಾಂದತೆಯ ಹೆಸರಲ್ಲಿ ಕಚ್ಚಾಡಿಸುವ ಸಂಘ ಸಂಸ್ಥೆಗಳಿಗೆ ನಾಚಿಕೆಯಾಗಬೇಕು.ಎಲ್ಲಾದರು ಯಾವನಾದರು ಒಬ್ಬ ಮೈಕ್ ಹಿಡಿದು ಧರ್ಮದ ಬಗ್ಗೆ ಬೊಬ್ಬಿಡುವ ನಾಯಕನ ಮಗ ಇಂತಹ ಕೃತ್ಯಗಳಿಗಿಳಿದಿರುವುದು ತೋರಿಸಲು ಸಾಧ್ಯವೇ ? “ಇಲ್ಲ” ಅವರ ಮಕ್ಕಳು ಉನ್ನತ ವಿಧ್ಯಾಭ್ಯಾಸಕ್ಕಾಗಿ ಉನ್ನತ ಸಂಸ್ಥೆಗಳಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದು ಸುಖ ಜೀವನ ನಡೆಸುತ್ತಿದ್ದಾರೆ.

ವಿಪರ್ಯಾಸವೆಂದರೆಏನೂ ಅರಿಯದ ಕುಟುಂಬಗಳಿಂದು ಬೀದಿಪಾಲಾಗುತ್ತಿದೆ.ಕೋಮುವಾದಿಗಳ ಬಣ್ಣ ಬಣ್ಣದ ಮಾತುಗಳಿಗೆ ಬಲಿಯಾಗಿ ಕ್ರೂರಿಯಾಗಿ ಅದೆಷ್ಟು ಅಮಾಯಕ ಯುವಕರಿಂದು ತಮ್ಮ ಪ್ರಾಣವನ್ನ ತ್ಯಾಗ ಮಾಡಿರುತ್ತಾರೆ.
ಒಂದು ಭಾಗದಲ್ಲಿ ಅನ್ನ ನನ್ನ ಮದುವೆಗೆ ಬೇಕಾದ ವ್ಯವಸ್ಥೆ ಮಾಡುತ್ತಾನೆ ಎಂಬ ನಿರೀಕ್ಷೆಯಲ್ಲಿ ತಂಗಿ,ಮತ್ತೊಂದು ಭಾಗದಲ್ಲಿ ನನ್ನ ಮಗ ಮನೆಯ ಉತ್ತರಾಧಿಕಾರಿಯಾಗುತ್ತಾನೆಂಬ ನಿರೀಕ್ಷೆಯಲ್ಲಿ ತಾಯಿ,ಇನ್ನೊಂದೆಡೆ ನನ್ನ ಅಯಸ್ಸು ಮುಗಿಯಲು ಕೆಲವೇ ಸಮಯ ಇನ್ನೇನು ಮಗ ಎಲ್ಲ ಜವಾಬ್ದಾರಿಗಳನ್ನ ವಹಿಸಿಕೊಳ್ಳುತ್ತಾನೆಂಬ ನಿರೀಕ್ಷೆಯಲ್ಲಿ ತಂದೆ.
ಆದರೆರಾಜಕೀಯ ಪ್ರೇರಿತ ಕೋಮುವಾದಿಗಳ ಕಾರಣದಿಂದ ಕುಟುಂಬದ ಎಲ್ಲ ನಿರೀಕ್ಷಗಳನ್ನ ಹೊತ್ತು ಕುಟುಂಬದ ಎಲ್ಲ ಜವಾಬ್ದಾರಿಯನ್ನು ಹೊರಬೇಕಾದ ಯುವಕ ಮರಳಿ ಬಂದಿರುವುದು ಶವವಾಗಿ.
ಪ್ರತೀಯೊಬ್ಬ ಚಿಂತಿಸಬೇಕು.ಬದಲಾಗಬೇಕುಇನ್ನೂ ಬದಲಾಗದಿದ್ದಲ್ಲಿ ಪ್ರತೀಯೊಂದು ಕುಟುಂಬದ ಪರಿಸ್ಥಿತಿ ಇದೇ ಆಗಿರುತ್ತೆ.


ಶಾಲಾ ಕಾಲೇಜುಗಳಲ್ಲಿ ರಾಜಕೀಯ ಪ್ರೇರಿತ ಸಂಘ ಸಂಸ್ಥೆಗಳಿಗೆ ಅವಖಾಶ ನೀಡಬಾರದು.ಯಾವುದಾದರು ಶಾಲಾ ಕಾಲೇಜುಗಳಲ್ಲಿ ಇಂತಹ ವಿಚಾರಗಳು ಕಂಡು ಬಂದಲ್ಲಿ ಕಾಲೇಜುಗಳನ್ನೇ ಬಂದ್ ಮಾಡಿಸಬೇಕು.ನ್ಯಾಯಾಲಯವು ವಿಚಾರದಲ್ಲಿ ಕಠಿಣ ನಿಲುವನ್ನ ಹೊಂದಬೇಕು.ಸರಕಾರ ಇದಕ್ಕೊಂದು ಕಡಿವಾಣ ಹಾಕಬೇಕು.ರಾಜಕೀಯ ಪ್ರೇರಿತ ಕೋಮು ಸಂಘಟನೆಗಳಿಗೆ ಕಡಿವಾಣ ಹಾಕದಿದ್ದಲ್ಲಿ ಮುಂದೊಂದು ದಿನ ಶಾಲಾಕಲೇಜುಗಳು ಗೂಂಡಾಗಳ ಕೋಮುವಾದಿಗಳ ತಾಣಗಳಾಗುವುದರಲ್ಲಿ ಸಂಶಯವಿಲ್ಲ.

✍️ P.M.ರಾಫಿಹ್ ಕಣ್ಣೂರು

Share this on:
error: Content is protected !!