Latest Posts

ವಿದ್ಯಾರ್ಥಿಗಳಲ್ಲಿ ಕೋಮು ಬಣ್ಣ..!?ಜ್ಞಾನ ಮಂದಿರದಲ್ಲಿ ಅಜ್ಞಾನ, ಅಸಮಾನತೆಯ ಬೀಜ ಬಿತ್ತಿದ್ದು ಯಾರು…?ಜ್ಞಾನಕ್ಕೆ ಎಲ್ಲಿದೆ ಜಾತಿ ಧರ್ಮ..!!

ವಿದ್ಯಾರ್ಥಿಗಳಲ್ಲಿ ಕೋಮು ಬಣ್ಣ…!?

ಗೆಳೆತನದ ಫಸಲನ್ನು ಸವಿಯುವ ವಿದ್ಯಾರ್ಥಿಗಳಲ್ಲಿ ರಾಜಕೀಯದ ವಿಷ ಬೆರೆಸಿದ್ದು ಯಾರು…? ಜ್ಞಾನ ಮಂದಿರದಲ್ಲಿ ಅಜ್ಞಾನ,ಅಸಮಾನತೆಯ ಬೀಜ ಬಿತ್ತಿದ್ದು ಯಾರು…? ಒಟ್ಟಿನಲ್ಲಿ,ದೂರದಲ್ಲಿ ನಿಂತ ಆ ರಾಕ್ಷಸರ ಕಠಿಣ ತಂತ್ರ ನಮ್ಮ ದೇಶಕ್ಕೆ ಹೇಸಿಗೆ ತಂದಿಡುವಲ್ಲಿ ಯಶಸ್ವಿ ತಂದು ಕೊಟ್ಟಿದೆ.
‌‌‌‌‌‌
ಜ್ಞಾನಕ್ಕೆ ಯಾವ ಜಾತಿ…? ವಿದ್ಯೆ ಕಲಿತು ನಾಡಿಗೆ,ದೇಶಕ್ಕೆ ಕೀರ್ತಿಯಾಗಬೇಕಾದ ಯುವಕರು ಜ್ಞಾನ ಮಂದಿರದಲ್ಲಿ ತಲವಾರು ಹಿಡಿದು ವಿದ್ಯಾರ್ಥಿಗಳು ರಾಕ್ಷಸರಾಗುತ್ತಿರುವ ಚಿತ್ರಣ‌ ಸೌಹಾರ್ದ ಭಾರತವನ್ನೆ ತಲ್ಲಣಗೊಳಿಸದ್ದು ಸುಳ್ಳಲ್ಲ.ನಾವು ಅಂಗನವಾಡಿಯಿಂದ ಶಾಲಾ ಶಿಕ್ಷಣದಲ್ಲಿ ಇಂತಹದೊಂದು ನಿರ್ಲಜ್ಞ ಕೆಲಸ ನಾವು ಮಾಡಲಿಲ್ಲ.ಈವರೆಗೂ ಮಾಡಿದ್ದನ್ನೂ ನಾವು ಕೇಳಲೇ ಇಲ್ಲ.ನಮ್ಮ ಸನಿಹದಲ್ಲಿದ್ದ ತರಗತಿ ವಿದ್ಯಾರ್ಥಿಗಳ ಊಟದ ತಟ್ಟೆಗೆ ಕೈ ಹಾಕುವಾಗ ಈ ಅಸ್ಪರ್ಶ್ಯತೆ,ಜಾತಿ ಯಾವುದರ ಪರಿವೇ ಇರಲಿಲ್ಲ.ಮೈದಾನದಲ್ಲಿ ಆಡುವಾಗ ನನ್ನ ಗಾಯಕ್ಕೆ ಮುಲಾಮು ಹಚ್ಚಿದವನ ಜಾತಿ ಯಾವುದೆಂದು ನನಗೆ ಈಗಲೂ ನೆನಪಿಲ್ಲ.ಹೆಗಲಿಗೆ ಬ್ಯಾಗೇರಿಸಿ ನಡೆವಾಗ,ನನ್ನ ಭುಜ ಸವರುತ್ತಾ ಸ್ನೇಹ ಹಂಚಿದ ಶರತ್‌ನ ಜಾತಿ ಯಾವುದು ಎಂದು ನಿಜವಾಗಿಯೂ ನೆನಪಿಸಿಲ್ಲ .ನಾವು ಕಲಿಯುವಾಗ ಸುಜ್ಞಾನದ ನೆರಳಿತ್ತು,ಸ್ನೆಹದ ಮರವಿತ್ತು,ಶಿಕ್ಷಕರು ಜ್ಞಾನದ ಕೊಂಬೆಯಾಗಿದ್ದರು.ಈಗ ಜಾತಿಯ‌ ಗುರುತು,ರಾಜಕೀಯದ ವಿಷ ಅಲ್ಲಿ ಪಸರಿಯಾಗಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಪೆನ್ನು ಹಿಡಿಯುವ ಕೈಗಳು ಖಡ್ಗ ಹಿಡಿಯುವ ಹೇಯ‌ ಪರಿಸ್ಥಿತಿ ನಮ್ಮ‌ ದೇಶಕ್ಕೆ ಬರಬಹುದು ಎಂದು ಯಾರೂ ಊಹಿಸಿ ಇರಲಾರರು.ಪ್ರತಿಯೊಬ್ಬ ಪ್ರಜ್ಞಾವಂತ ಇದರ ಬಗ್ಗೆ‌ ಖಿನ್ನನಾಗುವುದಲ್ಲಿ ಎರಡು ಮಾತಿಲ್ಲ. ಪ್ರತಿರೋಧ ಪ್ರತಿಕಾರ ಆಗಬಾರದು ಮುಂದೆ ಎಂದು ನಡೆಯುವ ಅನಾಹುತಕ್ಕೆ‌‌ ನಾಂದಿಯಾಗಬೇಕು.

ತ್ರಿಶೂಲ ಕೈಗೆತ್ತಲು ಧೈರ್ಯ ತುಂಬುವ ಕೋಮುವಾದಿಗಳೇ…
ಖಬರಿಗೆ ಸಿದ್ಧತೆ ಮಾಡಿಕೊಂಡೆ ಹೋರಾಡುತ್ತೇವೆ ಎಂದು ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ರಾಜಕೀಯದ ಬೇಳೆ ಬೇಯಿಸುವ ಪುಡಾರಿಗಳೇ…ನಿಮ್ಮಿಂದ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು..?

ತ್ರಿಶೂಲ ಎತ್ತುವ ಬಾಂಧವರೇ..
ಅ ತ್ರಿಶೂಲ ಮರು ಬಾಣವಾಗಿ ಒಂದು ದಿನ ಕಡೆಯೂ ತಿರುಗಲಿದೆ , ನೆನಪಿಡಿ..

Jaib mein Qalam rakho, ye Qalam tumko zinda rakhega, Talwar zinda nahi rakhegi; Qalam rakhega

🖋️ಮುಸ್ತಾಫ ರೆಂಜಲಾಡಿ
(ಕಾರ್ಯದರ್ಶಿ, ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ )

Share this on:
error: Content is protected !!