Latest Posts

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ಫೋಟೋ ದ ನಿಜಾಂಶವೇನು….??

ರಾಹುಲ್ ಗಾಂಧಿಯವರ ಕ್ಷೇತ್ರವಾದ ವಯನಾಡ್ ದೇಶದ ಮೊದಲ ಸ್ಮಾರ್ಟ್ ಸಿಟಿಯಾಗಿದ್ದು, ಪ್ರತಿ ಮನೆಯ ಹೊರಗೆ ವಿಭಿನ್ನ ಈಜುಕೊಳಗಳನ್ನು ನಿರ್ಮಿಸಿದ ಮೊದಲ ನಗರವಾಗಿದೆ ಎಂಬ  ಚಿತ್ರವೂ ವೈರಲಾಗಿದೆ.ರಸ್ತೆಯಲ್ಲಿ ನೂರಾರು ಗುಂಡಿಗಳಿರುವ, ಮಳೆ ನೀರು ತುಂಬಿರುವ ರಸ್ತೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದು ಕಾಂಗ್ರೆಸ್ ಮುಂಖಡ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್‌ಗೆ ಸೇರಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.

ವಾಸ್ತವದಲ್ಲಿ ಇದು ಬಿಜೆಪಿ (NDA) ಪ್ರತಿನಿಧಿಸುವ ಬಿಹಾರ ರಾಜ್ಯದ ಫೋಟೋ ಆಗಿದ್ದು ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ಇದೇ ಚಿತ್ರವನ್ನು 2017 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಲೇಖನವೊಂದನ್ನು ಕಾಣಬಹುದಾಗಿದೆ. ಅದರಲ್ಲಿ “ಭಾಗಲ್ಪುರ್ ಎನ್ಎಚ್ -80 ಕೆಟ್ಟ ಸ್ಥಿತಿಯಲ್ಲಿದೆ” ಎಂದು ವರದಿಯಾಗಿದೆ. ಅಂದರೆ ಅದು ಬಿಹಾರ ರಾಜ್ಯಕ್ಕೆ ಸೇರಿದ ಎಂಬುದು ದೃಢಪಟ್ಟಿದೆ.

ಬಿಹಾರದ ರಸ್ತೆಯ ಈ ಹಳೆಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಕೇರಳದ ವಯನಾಡ್‌ಗೆ ಸೇರಿದ್ದು ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.

Share this on:
error: Content is protected !!