ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ತನ್ನ ರೀಚಾರ್ಚ್ ಯೋಜನೆಗಳಲ್ಲಿ ಭಾರಿ ಹೆಚ್ಚಳ ಘೋಷಿಸಿದೆ. 100 ರೂ.ಗೆ ಒಂದು ಜಿಬಿ ಡೇಟಾವನ್ನು ನೀಡಲು ಯೋಚಿಸುತ್ತಿದ್ದೇವೆ ಎಂದು ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಹೇಳಿದ್ದಾರೆ.
ಒಂದೋ ನೀವು 160 ರೂ ನೀಡಿ 1.6GB ಬಳಸಿ,ಅಲ್ಲದಿದ್ದರೆ ಹೆಚ್ಚು ದರ ನೀಡಲು ತಯಾರಾಗಿ.ಅಮೇರಿಕಾ,ಯುರೋಪ್ ನಲ್ಲಿರುವ ಹಾಗೆ GB ಗೆ 50-60 ಡಾಲರ್ ದರ ಪಡೆಯುತ್ತಿಲ್ಲ.ಡಾಲರ್ ಗೆ 16GB ದೊಡ್ಡ ಮೊತ್ತವಲ್ಲ ಎಂದು ತನ್ನ ಸಹೋದ್ಯೋಗಿ ಅಖಿಲ್ ಗುಪ್ತಾ ಬರೆದ ಪುಸ್ತಕ ಪ್ರಕಾಶನದ ವೇಳೆ ಸುನಿಲ್ ಮಿತ್ತಲ್ ಹೇಳಿದ್ದಾರೆ.