Latest Posts

ಜಿ ಮೇಲ್ ಬಳಕೆದಾರರೇ ಗಮನಿಸಿ ನಿಮ್ಮ ಅಕೌಂಟ್ ಡಿಲೀಟ್ ಆಗಬಹುದು

2 ವರ್ಷಗಳಿಂದ ನೀವು ಜಿಮೇಲ್ ಖಾತೆಯನ್ನು ಬಳಸುತ್ತಿ ಲ್ಲವೇ? ಹಾಗಿದ್ದರೆ, ಆ ಖಾತೆಯನ್ನು ಗೂಗಲ್ ಡಿಲೀಟ್ ಮಾಡಲಿದೆ.

ಹೌದು! ಟೆಕ್ ದೈತ್ಯ ಗೂಗಲ್ ತನ್ನ ಖಾತೆ ಬಳಕೆದಾರರಿಗೆ ನೂತನ ನಿಯ ಮಾವಳಿ ರೂಪಿಸಿದೆ. ಖಾತೆ 2 ವರ್ಷಗಳಿಂದ ನಿಷ್ಕ್ರಿಯವಾಗಿದ್ದಲ್ಲಿ ಅದನ್ನು ಗೂಗಲ್ ಡಿಲೀಟ್ ಮಾಡಲಿದೆ. ಅಲ್ಲದೆ ಜಿಮೇಲ್ ಗೂಗಲ್‌ಡ್ರೈವ್ ನಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಕಡತ ಸಂಗ್ರಹ ಮಿತಿಮೀರಿದ್ದರೂ ಗೂಗಲ್ ಕ್ರಮ ಜರುಗಿಸಲಿದೆ. ಇಂಥ ಖಾತೆಗಳಲ್ಲಿನ ಫೋಟೊ, ಡಾಕ್ಯುಮೆಂಟ್ಸ್, ಸೈಡ್ಸ್, ಕ್ಯಾಂಬೋರ್ಡ್‌ಗಳನ್ನು ಗೂಗಲ್ ಡಿಲೀಟ್ ಮಾಡಲಿದೆ. 2021ರ ಜೂನ್ 1ರಿಂದ ಈ ನೀತಿ ಜಾರಿಗೆ ಬರಲಿದೆ.

ಪರಿಹಾರ ಏನು?: ಇದಕ್ಕೂ ಮೊದಲು ನಿಷ್ಕ್ರಿಯ ಮತ್ತು ಮಿತಿಮೀರಿದ ಸಂಗ್ರಹ ವಿರುವ ಖಾತೆಗಳಿಗೆ ಗೂಗಲ್ ಮುನ್ಸೂಚನೆ ಮೇಲ್ ರವಾನಿಸುತ್ತದೆ. ಇದನ್ನು ಗಮನಿಸಿ, ಇಮೇಲ್‌ಗೆ ನಿಗದಿತ ಭೇಟಿ ಹೆಚ್ಚಿಸಿದರೆ ಖಾತೆ ಡಿಲೀಟ್ ಆಗುವುದು ತಪ್ಪುತ್ತದೆ. ಮಿತಿಮೀರಿದ ಸಂಗ್ರಹವುಳ್ಳ ಖಾತೆದಾರರು ಕಡತಗಳನ್ನು ಬೇರೆಡೆ ಸ್ಥಳಾಂತರಿಸಿಕೊಳ್ಳುವುದೇ ಉತ್ತಮ.

Share this on:
error: Content is protected !!