ಕೇವಲ ಮೂರೇ ಮೂರು ಪದಾರ್ಥಗಳನ್ನು ಬಳಸಿಯೇ ಮಾಡಬಹುದಾಗಿದೆ ಈ ಟೇಸ್ಟಿಯಾದ ಕೇಕನ್ನು ನೀವು ಕೂಡ ಈ ಕೇಕ್ ರೆಸಿಪಿಯನ್ನು ಮಿಸ್ ಮಾಡದೇ ತಿಳಿದುಕೊಳ್ಳಿ ಮನೆಯಲ್ಲಿ ಟ್ರೈ ಮಾಡಿ ನೋಡಿ ಹೇಗೆ ಟೇಸ್ಟಿಯಾದ ಕೇಕ್ ಕೇವಲ ಮೂವತ್ತು ನಿಮಿಷಗಳಲ್ಲಿಯೇ ರೆಡಿ ಆಗುತ್ತದೆ ಎಂಬುದನ್ನು.
ಕೇವಲ ಮೂರೇ ಮೂರು ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಒಂದು ಕೇಕ್ ನಲ್ಲಿ ಯಾವುದೇ ಮೈದಾ ಹಿಟ್ಟು ಮೊಟ್ಟೆಯನ್ನು ಬಳಸಿಲ್ಲ ಸುಲಭವಾಗಿ ಮಾಡಬಹುದಾದಂತಹ ಟೇಸ್ಟಿಯಾದ ಹಳ್ಳಿಯಾದ ಈ ಕೇಕ್ ಮಾಡುವ ವಿಧಾನವನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಕೂಡ ತಿಳಿಸಿಕೊಡಿ ಹಾಗೂ ಮಾಹಿತಿ ಅನ್ನು ಶೇರ್ ಮಾಡಿ.
ಇದೀಗ ಕೇಕ್ ಮಾಡುವ ವಿಧಾನವನ್ನು ಶುರು ಮಾಡೋಣ ಫ್ರೆಂಡ್ಸ್ ಈ ಕೇಕ್ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಮೊದಲನೆಯದಾಗಿ ಓರಿಯೋ ಬಿಸ್ಕೆಟ್, ಫ್ರೆಂಡ್ಸ್ ನೀವು ಟೇಸ್ಟಿಯಾದ ಚಾಕ್ಲೇಟ್ ಫ್ಲೇವರ್ ಅಥವಾ ಬೇರೆ ಫ್ಲೇವರ್ ಯಾವುದಾದರೂ ಬಿಸ್ಕೆಟ್ ಅನ್ನು ಬಳಸಬಹುದು ಹಾಗೆ ಬಿಸ್ಕೆಟ್ ನೊಂದಿಗೆ ನಿಮಗೆ ಬೇಕಾಗಿರುವಂತಹದ್ದು ಒಂದು ಕಪ್ ಹಾಲು ಒಂದು ಚಮಚ ಅಡುಗೆ ಸೋಡಾ.
ಇದೀಗ ನೀವು ತೆಗೆದುಕೊಂಡಿರುವ ಬಿಸ್ಕೆಟ್ ಪ್ರಮಾಣವೂ ದೊಡ್ಡ ಪ್ಯಾಕ್ ಆಗಿದ್ದಾರೆ ಎರಡು ಪೂರ್ತಿ ಪ್ಯಾಕ್ ಅನ್ನು ಬಳಸಿದರೆ ಅದಕ್ಕೆ ಒಂದು ಕಪ್ ಹಾಲನ್ನು ಬಳಸಿ ನೀವೇನಾದರೂ ಒಂದೇ ಒಂದು ಬಿಸ್ಕೆಟ್ ಪ್ಯಾಕ್ ಅನ್ನು ಬಳಸಿದರೆ ಅದಕ್ಕೆ ಅರ್ಧ ಕಪ್ ಹಾಲು ಸಾಕಾಗುತ್ತದೆ ನಂತರ. ಇದೀಗ ಮಿಕ್ಸರ್ ಅನ್ನು ತೆಗೆದುಕೊಂಡು ಅದಕ್ಕೆ ಬಿಸ್ಕೆಟ್ ಅನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ನಂತರ ಒಂದು ಕಪ್ ಹಾಲನ್ನು ಇದಕ್ಕೆ ಹಾಕಿ ಒಂದು ಚಮಚ ಅಡುಗೆ ಸೋಡಾವನ್ನು ಹಾಕಿ ಗ್ರೈಂಡ್ ಮಾಡಿಕೊಳ್ಳಬೇಕು.
ಇದೀಗ ಒಂದು ಕಡಾಯಿಯನ್ನು ತೆಗೆದುಕೊಂಡು ಅದರ ತಳಕ್ಕೆ ಎಣ್ಣೆಯನ್ನು ಸವರಬೇಕು ನಂತರ ಅದರ ಮೇಲೆ ಒಂದು ಬಟರ್ ಪೇಪರ್ ಅನ್ನು ಹಾಕಿ ಅದರ ಮೇಲೆಯೂ ಕೂಡ ಎಣ್ಣೆ ಅನ್ನು ಸವರಬೇಕು. ಇದೀಗ ತಯಾರಿಸಿಕೊಂಡು ಇಟ್ಟು ಕೊಂಡಂತಹ ಬ್ಯಾಟರ್ ಅನ್ನು ಆ ಕಾಡಾಯಿ ಯೊಳಗೆ ಹಾಕಬೇಕು. ಇದನ್ನು ಬಯಸುವ ಕ್ರಮ ಹೇಗೆ ಅಂದರೆ ಮೊದಲು ಒಂದು ಚಪಾತಿ ಅಥವಾ ರೊಟ್ಟಿಯನ್ನು ಬೇಯಿಸುವ ಹಂಚನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ ನಂತರ ಕಡಾಯಿ ಅನ್ನು ಅದರ ಮೇಲೆ ಇಟ್ಟು ಲಿಡ್ಡನ್ನು ಕ್ಲೋಸ್ ಮಾಡಬೇಕು.
ಕಡೆಯ ಮೇಲೆ ಮುಚ್ಚಿರುವ ಲೆಡ್ ನಿಂದ ಗಾಳಿ ಹೋಗದೇ ಇರುವ ಹಾಗೆ ನೋಡಿಕೊಳ್ಳಿ ಹಾಗೆ ಈ ಒಂದು ಬ್ಯಾಟ್ ಅನ್ನು ಸರಿಯಾಗಿ ಇಪ್ಪತ್ತೈದರಿಂದ ಮೂವತ್ತು ನಿಮಿಷಗಳವರೆಗೆ ಬೇಯಿಸಿಕೊಂಡು ನಂತರ ಇದನ್ನು ತಣ್ಣಗಾದ ಮೇಲೆ ಕಡೆಯಿಂದ ಬೇರ್ಪಡಿಸಿ ನೀರು ನೋಡಬಹುದು ಇದೀಗ ಸಾಫ್ಟ್ ಆದ ಕೇಕ್ ಹೇಗೆ ರೆಡಿ ಆಗಿದೆ ಎಂದು ಮತ್ತು ಇದರ ರುಚಿ ಕೂಡ ಚೆನ್ನಾಗಿರುತ್ತದೆ ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನಿಮ್ಮ ಮನೆಯಲ್ಲಿ ಯಾರದ್ದಾದರೂ ಹುಟ್ಟಿದ ಹಬ್ಬವಿದ್ದರೆ ಅಥವಾ ಮನೆಗೆ ಗೆಸ್ಟ್ ಬಂದರೆ ಕೇವಲ ಮೂವತ್ತು ನಿಮಿಷಗಳಲ್ಲಿಯೇ ತಯಾರಿಸಬಹುದು.
ಕೇವಲ 3 ಪದಾರ್ಥಗಳನ್ನು ಬಳಸಿ ಕೇಕ್ ಮಾಡುವುದು ಹೇಗೆ ಗೊತ್ತಾ…! ನಿಮಗೊಂದು ಸವಾಲ್
