Latest Posts

ಸವಿಯಿರಿ ರುಚಿಕರವಾದ ಆಡಿನ ಕಾಲಿನ ಸೂಪ್

ಬೇಕಾಗುವ ಪದಾರ್ಥಗಳು

ಆಡಿನ ಕಾಲು- 4
ಶುಂಠಿ, ಬೆಳ್ಳುಳ್ಳಿ- ಸ್ವಲ್ಪ
ಕರಿಬೇವು- ಸ್ವಲ್ಪ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಪುದೀನಾ- ಸ್ವಲ್ಪ
ಹಸಿಮೆಣಸಿನಕಾಯಿ- 2-4
ಟೊಮೆಟೋ- 1
ಕಾಳುಮೆಣಸು- ಸ್ವಲ್ಪ
ಜೀರಿಗೆ- ಸ್ವಲ್ಪ
ಎಣ್ಣೆ- ಸ್ವಲ್ಪ
ಸಾಸಿವೆ-ಸ್ವಲ್ಪ
ಅರಿಶಿನದಪುಡಿ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

ಶುಂಠಿ, ಬೆಳ್ಳುಳ್ಳಿ, ಮೆಣಸು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಸಾಸಿವೆ, ಕರಿಬೇವು, ಮೇಕೆ ಕಾಲು ಹಾಗೂ ಉಪ್ಪು ಹಾಕಬೇಕು. ಉಪ್ಪು ಆಡಿನ ಕಾಲಿಗೆ ಹಿಡಿಯುವಂತೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಹುರಿದುಕೊಂಡು ನೀರು ಹಾಕಿ, ಜೀರಿಗೆ, ಕಾಳುಮೆಣಸಿನ ಪುಡಿ, ಅರಿಶಿಣದ ಪುಡಿ ಹಾಕಿ ಕುಕ್ಕಲ್ ಮುಚ್ಚಳ ಮುಚ್ಚಿ, 10-15 ವಿಸಿಲ್ ತನಕ ಕಾಯಬೇಕು. ಪ್ರೆಶರ್ ಸಂಪೂರ್ಣವಾಗಿ ಹೊರ ಬಂದ ಬಳಿಕ ಮುಚ್ಚಳ ತೆಗೆದು ಮತ್ತೆ ಸ್ವಲ್ಪ ಸಮಯ ಬೇಯಿಸಿದರೆ, ರುಚಿಕರವಾದ ಮಟನ್ ಕಾಲಿನ ಸೂಪ್ ಸವಿಯಲು ಸಿದ್ಧ.

Share this on:
error: Content is protected !!