Latest Posts

ಹೊಟ್ಟೆಯೊಳಗೆ ನಾಲ್ಕು ಅಡಿ ಉದ್ದದ ಹಾವು, ಹಾವನ್ನು ಹೊರತೆಗೆಯೋ ವೀಡಿಯೋ ವೈರಲ್ :ಇದು ನಂಬಲೇಬೇಕು

ರಷ್ಯಾ : ಹಾವು ಎದುರಾಗುವ ಸಂದರ್ಭವನ್ನು ಕಲ್ಪಿಸುವುದು ಅತ್ಯಂತ ಭೀಕರವಾದುದು.
ಅಂತಹದರಲ್ಲಿ ಹಾವು ನಮ್ಮ ಕೈ ಅಥವ ಮೈಗೆ ಸುತ್ತಿಕೊಂಡರೇ ಪಾಡೇನು? ಕಲ್ಪಿಸಿಕೊಂಡರೆ ಮೈ ಜುಂ ಎನ್ನುತ್ತದೆ, ರೋಮಗಳು ಸೆಟೆದು ಸಿಲ್ಲುತ್ತದೆ.
ಆದರೆ ರಷ್ಯಾದ ಡಾಗೆಸ್ತಾನ್‌ನಲ್ಲಿ ಒಂದು ವಿಶೇಷ ಪ್ರಕರಣ ನಡೆದಿದೆ. ಇಲ್ಲಿನ ಮಹಿಳೆಯೊಬ್ಬರ ಬಾಯಿಯಿಂದ ಬರೊಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ವೈದ್ಯರು ಹೊರತೆಗೆದಿದ್ದಾರೆ. ನೀವು ಕಷ್ಟವಾದರೂ ಇದನ್ನು ನಂಬಲೇಬೇಕು.


ಮಹಿಳೆ ಹೊಟ್ಟೆ ನೋವಿನ ಕಾರಣಕ್ಕಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರಂಭದಲ್ಲಿ ಮಹಿಳೆಯಲ್ಲಿನ ಸಮಸ್ಯೆ ಏನು ಎಂಬ ಕುರಿತು ವೈದ್ಯರಿಗೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದರೆ ಪರೀಕ್ಷೆಯ ಬಳಿಕ ಆಕೆಯ ಹೊಟ್ಟೆಯಲ್ಲಿ ಬಾಹ್ಯವಾದ ಏನೂ ವಸ್ತು ಇದೆ ಎಂಬ ಅರಿವು ವೈದ್ಯರಲ್ಲಿ ಮೂಡಿದೆ.


ಇದರ ಬಳಿಕ ಮಹಿಳೆಯನ್ನು ಪ್ರಜ್ಞಾಹೀನಗೊಳಿಸಿದ ವೈದ್ಯರು ಟ್ಯೂಬ್‌ ಅನ್ನು ಬಾಯಿ ಹಾಕಿ, ಹೊಟ್ಟೆಯಲ್ಲಿನ ಬಾಹ್ಯ ವಸ್ತುವನ್ನು ತೆಗೆದುಹಾಕಲು ಕಾರ್ಯಪ್ರವೃತ್ತರಾದರು. ಈ ವೇಳೆ ಹೊಟ್ಟೆಯಲ್ಲಿ ಇದ್ದದ್ದು ಹಾವು ಎಂಬುದು ಸಾಬೀತಾಗಿದೆ.
ಮಹಿಳೆಯ ಬಾಯಿಂದ ಹಾವನ್ನು ಹರ ತೆಗೆಯುವ ಪ್ರಕ್ರಿಯೆಯ ಸಂಪೂರ್ಣ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕೆಲವೇ ನಿಮಿಷಗಳಲ್ಲಿ ಇದು ವೈರಲ್‌ ಆಗಿದೆ. ವೈರಲ್‌ ಆದ ಈ ವೀಡಿಯೋದಲ್ಲಿ ವೈದ್ಯರು ಮಹಿಳೆಯ ಬಾಯಿಯಿಂದ ಹಾವುಗಳನ್ನು ಹೊರತೆಗೆಯುತ್ತಿದ್ದು, ಹಾವು ಹೊಟ್ಟೆಯಿಂದ ಹೊರಬಂದ ತತ್‌ಕ್ಷಣ ವೈದ್ಯೆ ಹಾವಿನ ಗಾತ್ರ ನೋಡಿ ಗಾಬರಿಗೊಂಡ ದೃಶ್ಯ ಇದೆ.

Share this on:
error: Content is protected !!