Latest Posts

ಅಬ್ಬರಿಸಿದ ಸಂಜು ಸ್ಯಾಮ್ಸನ್:ರಾಜಸ್ತಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಹೀನಾಯ ಸೋಲು

ಶಾರ್ಜಾ: ಐಪಿಎಲ್ 2020 ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಸೂಪರ್ ಕಿಂಗ್ಸ್ ರಾಜಸ್ತಾನ್ ರೊಯಲ್ಸನ್ನು ಬ್ಯಾಟಿಂಗ್ ಗೆ ಆಹ್ವಾನಿಸಿಕೊಂಡಿತು.


ಆರಂಭದಲ್ಲೇ ಅಬ್ಬರಿಸಿದ ಸಂಜು ಸಾಮ್ಸನ್ ಮತ್ತು ಸ್ಟೀವನ್ ಸ್ಮಿತ್ (49 ಎಸೆತಗಳಲ್ಲಿ 69) ಪ್ರತಿ ಓವರ್ ಗೆ 12 ರನ್ ಸರಾಸರಿಯಲ್ಲಿ ತಲಾ ಅರ್ಧಶತಕ ದಾಖಲಿಸಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಬರೀ 32 ಎಸೆತಗಳಲ್ಲಿ 9 ಸಿಕ್ಸರ್ ಸಹಿತ 74 ರನ್ ಸಿಡಿಸಿದರು.
ಅಂತಿಮ ಓವರ್ ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಆರ್ಚರ್ ತಂಡದ ಮೊತ್ತವನ್ನು ವೇಗವಾಗಿ 216 ತಲುಪಿಸುವಲ್ಲಿ ಯಶಸ್ವಿಯಾದರು.
ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಸ್ಯಾಮ್ ಕರನ್ ಪ್ರಮುಖ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.


217 ರನ್ ಗಳ ಗುರಿಯನ್ನು ಬೆನ್ನೆತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಶೇನ್ ವಾಟ್ಸನ್ ಮುರಳಿ ವಿಜಯ್ ವಿಕೆಟ್ ಗಳನ್ನು ಕಳೆದುಕೊಂಡಿತು. ನಂತರ ಕ್ರೀಸಿಗೆ ಬಂದಂತಹ ಎಡಗೈ ದಾಂಡಿಗ ಸ್ಯಾಮ್ ಕರನ್ ಆರ್ಭಟಿಸುವ ಸೂಚನೆ ನೀಡಿದರಾದರೂ ಕೇವಲ 5 ಎಸೆತಗಳಲ್ಲಿ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

ಫಾಫ್ ಡುಪ್ಲೆಸಿಸ್ 37 ಎಸೆತಗಳಲ್ಲಿ 72 ರನ್ ಸಿಡಿಸಿ ಭರವಸೆ ಮೂಡಿಸಿದರಾದರೂ ಹಂದಿನೆಂಟನೇ ಓವರ್ ಎಸೆಯಲು ಬಂದ ಆರ್ಚುರ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಪ್ರಯತ್ನದಲ್ಲಿ ವಿಕೆಟ್ ಕೀಪರ್ ಸ್ಯಾಮ್ಸನ್ಗೆ ಕ್ಯಾಚ್ ನೀಡಿದಾಗಲೇ  ಚೆನ್ನೈ ಸೋಲು ಖಚಿತವಾಯಿತು. ಕೊನೆಯದಾಗಿ 20 ಓವರ್ ಗಳಲ್ಲಿ 200 ರನ್ ಗಳಿಗೆ ಚೆನ್ನೈ ತನ್ನ ಇನ್ನಿಂಗ್ಸ್ ಮುಕ್ತಾಯಗೊಳಿಸಿ ಸೋಲೊಪ್ಪಿಕೊಂಡಿತು..

ಸ್ಕೋರ್ :
ರಾಜಸ್ತಾನ್: 216-7
ಚೆನ್ನೈ :200-6

Share this on:
error: Content is protected !!