Latest Posts

ರಾಯಲ್ ಚಾಲೆಂಜರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಭರ್ಜರಿ ಜಯ: ಶತಕ ಸಿಡಿಸಿ ಮಿಂಚಿದ ಕನ್ನಡಿಗ ಕೆ ಎಲ್ ರಾಹುಲ್

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹಣಾಹಣಿಯಲ್ಲಿ ಪಂಜಾಬ್ ಏಕಪಕ್ಷೀಯವಾಗಿ ಗೆಲುವನ್ನು ತನ್ನದಾಗಿಸಿಕೊಂಡಿತು. ಪಂಜಾಬ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ ಎಲ್ ರಾಹುಲ್ ಕೇವಲ 69 ಎಸೆತಗಳಲ್ಲಿ ಬರೋಬ್ಬರಿ 132 ರನ್ ದಾಖಲಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ತಲುಪಿಸಿದರು.

ಗುರಿಯನ್ನು ಬೆನ್ನೆಟ್ಟಿದ ಬೆಂಗಳೂರು ಪಂಜಾಬ್ ಬೌಲರ್ ಗಳ ಕರಾರುವಾಕ್ ದಾಳಿಗೆ ಆರಂಭದಲ್ಲೆ ವಿಕೆಟ್ ಕಳೆದುಕೊಳ್ಳಲಾರಂಭಿಸಿತು.
ಕೊನೆಯದಾಗಿ ತನ್ನೆಲ್ಲ ವಿಕೆಟ್ ಕಳೆದು ಕೊಂಡು 109 ಗಳಿಗೆ ಇನ್ನಿಂಗ್ಸ್ ಮುಕ್ತಾಯ ಗೊಳಿಸಿತು

ಸ್ಕೋರ್
ಪಂಜಾಬ್ :206-3
ಬೆಂಗಳೂರು :109-10

Share this on:
error: Content is protected !!