ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್ ಮಾತು ವಿವಾದಕ್ಕೆ ಕಾರಣವಾಗಿದೆ.
ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ರ ಎರಡು ಕ್ಯಾಚ್ಗಳನ್ನು ಕೈಚೆಲ್ಲಿದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಫನ್ನಿಯಾಗಿ ಕಮೆಂಟ್ ಮಾಡಿದ ಗವಾಸ್ಕರ್ ಕೊಹ್ಲಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪತ್ನಿ ಅನುಷ್ಕಾ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಎಷ್ಟು ಪ್ರಾಕ್ಟೀಸ್ ಮಾಡ್ತಾರೋ ಅಷ್ಟು ಅವರು ಆಟದಲ್ಲಿ ಉತ್ತಮರಾಗ್ತಾರೆ. ಇದು ಕೊಹ್ಲಿಗೂ ಗೊತ್ತು. ಕೊಹ್ನಿ ಒಬ್ಬ ಚಾಂಪಿಯನ್. ಆದ್ರೆ ಲಾಕ್ಡೌನ್ನಲ್ಲಿ ಕೇವಲ ಅನುಷ್ಕಾರ ಬೌಲಿಂಗ್ಗೆ ಪ್ರಾಕ್ಟೀಸ್ ಮಾಡಿದ್ದಾರೆ. ಅದನ್ನ ವಿಡಿಯೋದಲ್ಲಿ ನೋಡಿದ್ವಿ. ಆದು ಇಲ್ಲಿ ಉಪಯೋಗಕ್ಕೆ ಬರಲ್ಲ ಎಂದು ಸುನೀಲ್ ಗವಾಸ್ಕರ್ ಎಂದು ವ್ಯಂಗ್ಯವಾಡಿದ್ದರು.
ನಿಮ್ಮ ಸಂದೇಶ ಅಸಹ್ಯಕರವಾಗಿದ್ದು, ಒಬ್ಬರ ಆಟದ ಬಗ್ಗೆ ಮಾತನಾಡುವಾಗ ಪತ್ನಿಯ ಹೆಸರನ್ನು ಏಕೆ ಪ್ರಸ್ತಾಪಿಸಿದ್ದೀರಿ ಎಂಬುದನ್ನು ವಿವರಿಸುವಿರಾ? ನೀವು ಇಷ್ಟೊಂದು ವರ್ಷ ಎಲ್ಲಾ ಆಟಗಾರರ ಖಾಸಗಿ ಬದುಕನ್ನು ಗೌರವಿಸಿದ್ದೀರಿ. ನಮಗೂ ಕೂಡ ಅದೇ ಗೌರವ ನೀಡಬೇಕೆಂದು ನಿಮಗೆ ಅನಿಸುವುದಿಲ್ಲವೇ? 2020ರಲ್ಲಿಯೂ ನನಗೆ ಏನೂ ಬದಲಾವಣೆ ಅನಿಸಲ್ಲ. ಕ್ರಿಕೆಟ್ ವಿಷಯವಾಗಿ ನನ್ನ ಮೇಲೆ ಬರುವ ಅಸಂಬದ್ಧ ಆರೋಪಗಳಿಗೆ ಕೊನೆ ಎಂದು? ಹೀಗೆ ಕೊಹ್ಲಿ ಪತ್ನಿ
ಅನುಷ್ಕಾ ಶರ್ಮಾ ಕುಟುಕಿದ್ದಾರೆ.
ಸುನಿಲ್ ಗವಾಸ್ಕರ್ ಸ್ಪಷ್ಟನೆ:
ಈ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುನಿಲ್ ಗವಾಸ್ಕರ್, “ಲಾಕ್ಡೌನ್ ಸಮಯದಲ್ಲಿ, ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮನೆಯ ಆವರಣದಲ್ಲಿ ಕ್ರಿಕೆಟ್ ಆಡುತ್ತಿರುವ ವೀಡಿಯೋವೊಂದನ್ನು ನೋಡಿದ್ದೆ. ಅದರಲ್ಲಿ ಅನುಷ್ಕಾ ಬೌಲಿಂಗ್ ಮಾಡುತ್ತಿದ್ದರು. ನಾನು ಅದನ್ನಷ್ಟೇ ಪ್ರಸ್ತಾಪಿಸಿದ್ದೆ. ಸಾಕಷ್ಟು ಅಭ್ಯಾಸ ಮಾಡಲು ಅವಕಾಶ ಸಿಗಲಿಲ್ಲ ಎಂಬುದನ್ನು ಹೇಳಲು ಈ ಮಾತನ್ನು ಬಳಸಿದ್ದೆ” ಎಂದು ಹೇಳಿದರು.