Latest Posts

ಮೊದಲ ಸ್ಥಾನಕ್ಕೆ ಮತ್ತೆ ಮರಳಿದ ಮುಂಬೈ :ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಜಯ

ಯುಎಇ : ಮೊದಲ ಸ್ಥಾನಕ್ಕಾಗಿನ ಹೋರಾಟದಂತಿದ್ದ ಇಂದಿನ ಐಪಿಎಲ್ ಪಂದ್ಯಕೂಟದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಗೆಲುವು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳ ಸವಾಲಿನ ಮೊತ್ತವನ್ನು ಪೇರಿಸಿತು. ಕ್ಯಾಪಿಟಲ್ಸ್ ಪರ ಧವನ್ ಅರ್ಧಶತಕ (69) ಮತ್ತು ಶ್ರೇಯಸ್ ಅಯ್ಯರ್ 42 ರನ್ ಗಳಿಸಿ ಮಿಂಚಿದರು.

ಗುರಿಯನ್ನು ಬೆನ್ನೆಟ್ಟಿದ ಮುಂಬೈ ಡಿ ಕೊಕ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು ವಿಜಯವನ್ನು ತನ್ನದಾಗಿಸಿಕೊಂಡಿತು.

ಸ್ಕೋರ್:
DC : 162-4
MI : 166-5

Share this on:
error: Content is protected !!