ಲಿಸ್ಬನ್: ಪೋರ್ಚುಗೀಸ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊವಿಡ್ ದೃಡ ಪಡಿಸಿದ್ದು, ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ ಇದನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಇದರೊಂದಿಗೆ, ನಾಳೆ ನಡೆಯಲಿರುವ ಸ್ವೀಡನ್ ವಿರುದ್ಧದ ಯುಇಎಫ್ಎ ನೇಷನ್ಸ್ ಲೀಗ್ ಪಂದ್ಯದಲ್ಲಿ ಆಟಗಾರನಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆಟಗಾರನಿಗೆ ಯಾವುದೇ ಲಕ್ಷಣಗಳಿಲ್ಲ ಮತ್ತು ಕ್ರಿಸ್ಟಿಯಾನೊ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ ಎಂದು ಫೆಡರೇಶನ್ ಹೇಳಿದೆ.