ಅಬುದಾಬಿ: ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅವರ ಉಗ್ರ ಸ್ವರೂಪದ ಆಟ ಮತ್ತು ಕೋಪಕ್ಕೆ ಸಾಕ್ಷಿ ಆಗಿದ ಘಟನೆ ಇಂದು ಶೇಕ್ ಝಾಯಿದ್ ಸ್ಟೇಡಿಯಂ ನಲ್ಲಿ ನಡೆಯಿತು.
ಪಂಜಾಬ್ ತಂಡಕ್ಕೆ ಆಸರೆಯಾಗಿ ಕ್ರೀಸ್ನಲ್ಲಿ ಆರ್ಭಟಿಸಿದ ಕ್ರಿಸ್ಗೇಲ್, 99 ರನ್ಗಳಿಸಿ ಒಂದು ರನ್ ನಿಂದ ಶತಕ ವಂಚಿತರಾಗಿ ತುಂಬಾ ನೋವಿನಿಂದ ಔಟಾಗಿ ಕ್ರೀಸ್ನಿಂದ ಹೊರನಡೆದರು. ಕೊನೆಯ 20ನೇ ಓವರ್ನ 4ನೇ ಬಾಲ್ನಲ್ಲಿ ಕ್ರಿಸ್ಗೇಲ್ ಔಟ್ ಆಗಿದ್ದು, ಜೋಫ್ರಾ ಅರ್ಚರ್ ಬಾಲ್ಗೆ ಕಟ್ ಆ್ಯಂಡ್ ಬೌಲ್ಡ್ ಆಗುವ ಮೂಲಕ ತಮ್ಮ ಶತಕದ ಆಸೆಯನ್ನು ಕೈ ಚೆಲ್ಲಿದರು. ಇದರಿಂದ ಹತಾಶರಾದ ಗೇಲ್ ಬ್ಯಾಟ್ ಎತ್ತಿ ಬಿಸಾಡಿ ನಂತರ ತಾವು ತಮ್ಮನ್ನ ಔಟ್ ಮಾಡಿದ ಜೋಫ್ರಾ ಅರ್ಚರ್ಗೆ ಕೈ ಕುಲುಕಿದ್ದು ವಿಶೇಷವಾಗಿತ್ತು.

ನಂತರ ಮ್ಯಾಕ್ಸ್ವೆಲ್ ಎಸೆದಿದ್ದ ಬ್ಯಾಟ್ ಅನ್ನ ಗೇಲ್ ಕೈಗೆ ಇಟ್ಟರು.ಅಲ್ಲಿಂದ ಗೇಲ್ ತುಂಬಾ ಬೇಸರಿಂದ ಪೆವಿಲಿಯನ್ ಕಡೆ ನಡೆದರು. ಒಟ್ಟು 8 ಸಿಕ್ಸ್ ಹಾಗೂ 6 ಬೌಂಡರಿ ಬಾರಿಸಿರುವ ಗೇಲ್, 63 ಬಾಲ್ಗಳನ್ನ ಎದುರಿಸಿ 99 ರನ್ಗಳ ಕಾಣಿಕೆಯನ್ನ ತಂಡಕ್ಕೆ ನೀಡಿದರು.ಇಂದು ಟಿಟ್ವೆಂಟಿ ಕ್ರಿಕೆಟ್ ನಲ್ಲಿ ತನ್ನ 1000 ನೇ ಸಿಕ್ಸರ್ ಸಿಡಿಸಿ ಸಾಧನೆ ಮಾಡಿದರು.
ಒಟ್ಟು 4 ವಿಕೆಟ್ ಕಳೆದುಕೊಂಡ ಪಂಜಾಬ್ 185 ರನ್ ಗಳಿಸಿತು. ರಾಜಸ್ಥಾನ್ ಪರ ಜೋಫ್ರಾ ಅರ್ಚರ್ ಹಾಗೂ ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದುಕೊಂಡರು.
#KXIPvRR#UniverseBoss #Gayle#RRvsKXIP
— Pawan Shukla (@PawanSh10237254) October 30, 2020
Chris Gayle thrown his bat after getting out on 99 in frustration, deserved a century here. What an outstanding knock it was. pic.twitter.com/bjG9Mvbw8P