Latest Posts

ಐಸಿಸಿ ರ‌್ಯಾಕಿಂಗ್, 2ನೇ ಸ್ಥಾನಕ್ಕೆ ಕುಸಿದ ಭಾರತ

ದೆಹಲಿ: 2019ರಿಂದ ಆರಂಭವಾಗಿ 2021ರವರೆಗೆ ನಡೆಯುವ ಸುದೀರ್ಘ ಅವಧಿಯ ಟೆಸ್ಟ್ ಚಾಂಪಿಯನ್ಶಿಪ್ಗೆ ಐಸಿಸಿ ಪಾಯಿಂಟ್ಸ್ ಸಿಸ್ಟಮ್ ಬದಲಾವಣೆ ಮಾಡಿದೆ. ಹೊಸ ಪಾಯಿಂಟ್ಸ್ ಸಿಸ್ಟಮ್ ಅನ್ವಯ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದ್ದು, ಭಾರತ 2ನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವದ ಬಹುತೇಕ ದೇಶಗಳಲ್ಲಿ ಲಾಕ್​ಡೌನ್​ ವಿಧಿಸಿದ್ದ ಕಾರಣ ಶೇಕಡಾ 85 ರಷ್ಟು ಪಂದ್ಯಗಳು ಆಯೋಜನೆ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಐಸಿಸಿ ಮೀಟಿಂಗ್​ನ,ಲ್ಲಿ ಪಾಯಿಂಟ್ ಸಿಸ್ಟಮ್ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೇತೃತ್ವದ ಕಮಿಟಿ ಮಾಡಿದ ಶಿಫಾರಸ್ಸಿನ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Share this on:
error: Content is protected !!