Latest Posts

ವಿಶ್ವದಾದ್ಯಂತ ಎರಡೇ ವರ್ಷಗಳಲ್ಲಿ ಕೊರೊನಾ ನಿರ್ಮೂಲನೆ: ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ಸಾಂಕ್ರಮಿಕ ವಿಶ್ವದಾದ್ಯಂತ ಎರಡು ವರ್ಷದಲ್ಲಿ ನಿರ್ಮೂಲನೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಶತಕ ಹಿಂದೆ 1918 ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಈಗ ಒಂದು ವೇಳೆ ಲಸಿಕೆ ಪತ್ತೆಹಚ್ಚಲು ಜಗತ್ತು ಒಗ್ಗೂಡಿ ಯಶಸ್ವಿಯಾದರೆ, ಕೊರೊನಾ ವೈರಸ್‌ ಪಿಡುಗು ಎರಡು ವರ್ಷಗಳಲ್ಲಿ ಇಲ್ಲವಾಗಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕ ತಂತ್ರಜ್ಞಾನ ಮತ್ತು ಸಂಪರ್ಕದಿಂದಾಗಿ ವೈರಸ್ ಹರಡುವ ಸಾಧ್ಯತೆ ಅಧಿಕ. ಅದು ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೆ ಇದನ್ನು ತಡೆಯಲು ಅಗತ್ಯವಾದ ತಂತ್ರಜ್ಞಾನ ಹಾಗೂ ಜ್ಞಾನ ಕೂಡಾ ನಮ್ಮ ಬಳಿ ಇದೆ. ಆರೋಗ್ಯ ಸಂಸ್ಥೆ ಯಾವಾಗಲೂ ಜಾಗರೂಕವಾಗಿರುತ್ತದೆ ಎಂದು ಅವರು‌ ಹೇಳಿದರು‌.

ವಿಶ್ವಾದ್ಯಂತ 2.28 ಕೋಟಿ ಮಂದಿಗೆ ಸೋಂಕು ತಗುಲಿದ್ದು, 1.46 ಕೋಟಿ ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 7.96 ಲಕ್ಷ ಜನರು ಬಲಿಯಾಗಿದ್ದಾರೆ.

Share this on:
error: Content is protected !!