Latest Posts

ಚೀನಾದಲ್ಲಿ ಮಾಸ್ಕ್ ಕಡ್ಡಾಯವಿಲ್ಲ;ಕೊರೋನಾದಿಂದ ಮುಕ್ತಿಹೊಂದಿದೆ ಎಂದ ಚೀನಾ

ಬೀಜಿಂಗ್ : ಇದುವರೆಗೆ ವಿಶ್ವದಲ್ಲಿ 22,888,418 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 15,536,978 ರೋಗಿಗಳು ಗುಣಮುಖರಾಗಿದ್ದು, 797,600 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಚೀನದ ಬೀಜಿಂಗ್‌ನಲ್ಲಿ ಕಳೆದ 13 ದಿನಗಳಿಂದ ಯಾವುದೇ ಹೊಸ ಪ್ರಕರಣಗಳಿಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಮಾಸ್ಕ್ ಧರಿಸುವ ಅಗತ್ಯ ಇಲ್ಲ ಎಂದು ಸರಕಾರ ಹೇಳಿದೆ.


ಕೋವಿಡ್‌ ಸೋಂಕುಗಳ ಪತ್ತೆಗಳು ಇತ್ತೀಚ್ಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದರೂ,ಹೆಚ್ಚಿನ ಜನರು ಮಾಸ್ಕ್ ಗಳನ್ನು ಧರಿಸಿ ಹೊರ ಬರುತ್ತಿದ್ದಾರೆ. ಮಾಸ್ಕ ಗಳು ಚೀನದಲ್ಲಿ ಕೊರೊನಾ ಪ್ರಕರಣವನ್ನು ಕಡಿಮೆ ಆಗಲು ಒಂದು ಕಾರಣವಾಗಿದೆ. ನಾವು ಸುರಕ್ಷಿತರಾಗಿದ್ದಾರೆಂದು ಎಂದು ಜನರು ಹೇಳುತ್ತಾರೆ. ಈ ಎಲ್ಲ ಕಾರಣಗಳಿಂದ ಬೀಜಿಂಗ್‌ ಎರಡನೇ ಬಾರಿಗೆ ಕೋವಿಡ್‌ ನಿಯಂತ್ರಣ ನಿರ್ಬಂಧಗಳನ್ನು ಸರಕಾರ ಸಡಿಲಗೊಳಿಸಿದೆ. ಈ ಹಿಂದೆ ಎಪ್ರಿಲ್‌ನಲ್ಲಿ ಸ್ಥಳೀಯ ಆಡಳಿತ ಮಾಸ್ಕ್ ಇಲ್ಲದೇ ಹೊರಬರಲು ಅವಕಾಶ ಮಾಡಿಕೊಟ್ಟಿತ್ತು.
ಲ್ಯಾಟಿನ್‌ ಅಮೆರಿಕ 3.5 ಮಿಲಿಯನ್‌ ಸೋಂಕು
ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ (ಮೆಕ್ಸಿಕೋ, ಬ್ರೆಜಿಲ್, ಪೆರು ಮತ್ತು ಅರ್ಜೆಂಟೀನಾ), ಸಾವಿನ ಸಂಖ್ಯೆ 2 ಲಕ್ಷ ದಾಟಿದೆ. ಈ ನಾಲ್ಕು ದೇಶಗಳಲ್ಲಿ 3.5 ಮಿಲಿಯನ್‌ ಸೋಂಕು ದಾಖಲಾಗಿದ್ದು ಒಟ್ಟಾರೆ ಪ್ರಕರಣಗಳಲ್ಲಿ ಬ್ರೆಜಿಲ್‌ ಮೊದಲ ಸ್ಥಾನದಲ್ಲಿದೆ. 5 ದಶಲಕ್ಷಕ್ಕೂ ಹೆಚ್ಚು ಸೋಂಕಿಗೆ ಒಳಗಾದ ಮೆಕ್ಸಿಕೊ ಎರಡನೇ ಸ್ಥಾನದಲ್ಲಿದೆ. ಇದರೊಂದಿಗೆ ಪೆರು ಮತ್ತು ಅರ್ಜೆಂಟೀನಾದಲ್ಲೂ ಹೊಸ ಪ್ರಕರಣಗಳು ಹೆಚ್ಚಿವೆ. ಕಳೆದ ವಾರದಲ್ಲಿ ಈ ದೇಶಗಳಲ್ಲಿ ಪ್ರತಿದಿನ ಸುಮಾರು 3 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ.

Share this on:
error: Content is protected !!