Latest Posts

ಕೊರೋನ ಆರ್ಭಟದ ನಡುವೆ ಶಾಲಾ ಕಾಲೇಜು ಆರಂಭ…!!

ಬೆಂಗಳೂರು: ಕೊರೊನಾ ಸೋಂಕಿನ ಆರ್ಭಟದ ನಡುವೆಯೂ ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಪದವಿ ಕಾಲೇಜು ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ . ಹೌದು , ಅಕ್ಟೋಬರ್ 1 ರಿಂದ ಕೊರೊನಾ ಮುಂಜಾಗೃತೆಯೊಂದಿಗೆ ರಾಜ್ಯದಲ್ಲಿ ಸ್ನಾತಕ , ಸ್ನಾತಕೋತ್ತರ ತರಗತಿಗಳು ಆರಂಭವಾಗಲಿದೆ.

ಸೆಪ್ಟೆಂಬರ್. 1 ರಿಂದ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮಾಹಿತಿ ರವಾನಿಸಿದದ್ದಾರೆ
ಆದರೆ ಸರ್ಕಾರದ ಅಧಿಕೃತ ಆದೇಶ ಹೊರಡಿಸಲು ಮಾತ್ರ ಬಾಕಿ ಉಳಿದಿದೆ. ಆದರೆ ಸದ್ಯಕ್ಕೆ ಶಾಲೆ ಹಾಗೂ ಪಿಯುಸಿ ತರಗತಿಗಳು ತೆರೆಯುವುದಿಲ್ಲ ಎಂದು ಹೇಳಲಾಗುತ್ತಿದೆ . ಇನ್ನೂ , ಇತ್ತೀಚೆಗಷ್ಟೇ ಅಂತಿಮ ಸೆಮಿಸ್ಟರ್‌ ಹಾಗೂ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಿದೆ . ಸೆಪ್ಟೆಂಬರ್‌ ಒಳಗಾಗಿ ಪರೀಕ್ಷೆಗಳನ್ನು ಮುಗಿಸಬೇಕೆಂದು ಸ್ಪಷ್ಟನೆ ನೀಡಿದೆ .

Share this on:
error: Content is protected !!