Latest Posts

ಸಿದ್ದು ಹೊಗಳಿದ ಜಿ.ಪಂ ಸದಸ್ಯೆ;ಮುಖಭಂಗವಾಗಿ ಎದ್ದುಹೋದ ಸಂಸದ

ಪುತ್ತೂರು: ಈಶ್ವರಮಂಗಳ ಸರಕಾರಿ ಕಾರ್ಯಕ್ರಮದಲ್ಲಿ ಕೈ-ಕಮಲ ನಾಯಕ,ನಾಯಕಿಯರ ಮಾತಿನ ವಾಕ್ಸಮರ ನಡೆದಿದ್ದು ಸರಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ರಾಜಕೀಯ ಮಾತನಾಡಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ವೇದಿಕೆಯಲ್ಲೇ ತಿರುಗೇಟು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಕಾಂಗ್ರೆಸ್ ನಾಯಕಿಯ ಉತ್ತರಕ್ಕೆ ಸಂಸದ ತೀವ್ರ ಮುಜುಗರಕ್ಕೊಳಗಾಗಿದ್ದು ವೇದಿಕೆಯಿಂದ ಹೊರ ನಡೆದ ಪ್ರಸಂಗ ವರದಿಯಾಗಿದೆ.

ಸಿದ್ದರಾಮಯ್ಯ ಸರಕಾರ ಇದ್ದಾಗ ಪುತ್ತೂರು ಕ್ಷೇತ್ರಕ್ಕೆ ಯಾವುದೇ ಅನುದಾನ ಬಂದಿರಲಿಲ್ಲ,ಯಡಿಯೂರಪ್ಪ ಸರಕಾರ ಬಂದ ಮೇಲೆ ಅನುದಾನ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದೆ’ ಎಂದು ನಳೀನ್ ಹೇಳಿದರು.ಈ ಮಾತಿನಿಂದ ಕೆರಳಿದ ಅನೀತಾ ಹೇಮನಾಥ ಶೆಟ್ಟಿ ತನ್ನ ಸರದಿ ಬಂದಾಗ ಮಾತನಾಡಿ “ಇಂದು ಉದ್ಘಾಟನೆಯಾದ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದ್ದೇ ಮಾಜೀ ಶಾಸಕಿ ಶಕುಂತಳಾ ಶೆಟ್ಟಿಯವರು,ಸಿದ್ದರಾಮಯ್ಯ ಸರಕಾರ ಇದ್ದಾಗ ಬಂದಷ್ಟು ಅನುದಾನ ಯಾವ ಸರಕಾರ ಇದ್ದಾಗಲು ಬರಲಿಲ್ಲ” ಎನ್ನುವಷ್ಟರಲ್ಲೇ ಬಿಜೆಪಿ ಸಂಸದರು,ಶಾಸಕರು ಜಾಗ ಖಾಲಿ ಮಾಡಿದ ಘಟನೆ ವರದಿಯಾಗಿದೆ.ವೇದಿಕೆಯಲ್ಲಿದ್ದ ಸಚಿವ ಕೋಟ ರವರು ನಿಂತುಕೊಂಡೇ ಭಾಷಣ ಕೇಳಿದರು.

ಕೈ ನಾಯಕಿಯ ಈ ನಡೆ ಕಾಂಗ್ರೆಸ್ ಕಾರ್ಯಕರ್ತರ ಮತ್ತು ನಾಯಕರ ಪ್ರಶಂಸೆಗೆ ಪಾತ್ರವಾಗಿದೆ.

Share this on:
error: Content is protected !!