Latest Posts

ದಲಿತ ಎಂಬ ಒಂದೇ ಕಾರಣಕ್ಕೆ ಅಮಾಯಕ ಯುವಕನ ಬರ್ಬರ ಕೊಲೆ

ಸಿಂದಗಿ: ದೇವಸ್ಥಾನದಲ್ಲಿ ದಲಿತ ಸಮುದಾಯದ ವ್ಯಕ್ತಿಯೂರ್ವ ತಮಗೆ ಸರಿಸಮವಾಗಿ ಕುಳಿತಿದ್ದರಿಂದ ಅಸಮಾಧಾನಗೊಂಡ ಆರೋಪಿಗಳು, ತಮ್ಮ ಸಂಬಂಧಿಯಗಳ ಜೊತೆಗೂಡಿ ಬೂದಿಹಾಳ ಪಿ.ಎಚ್‌ ಗ್ರಾಮದ ಅನಿಲ ಶರಣಪ್ಪ ಇಂಗಳಗಿ (28) ಅವರನ್ನು ಬುಧವಾರ ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗ್ರಾಮದ ಸವರ್ಣಿಯರಾದ ಸಿದ್ದು ಸುಭಾಸ ಬಿರಾದಾರ ಹಾಗೂ ಆತನ ಸಂಬಂಧಿ ಮಣೂರ ಗ್ರಾಮದ ಸಂತೋಷ ಸುರೇಶ ಹಿರ್ಲಾಕುಂಡ ಆರೋಪಿಗಳೆಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದ ಇಂಗಳಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ಅನಿಲ ತಮಗೆ ಸರಿಸಮವಾಗಿ ಕುಳಿತಿದ್ದಕ್ಕೆ ಸಿದ್ದು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಸಂಬಂಧಿ
ಸಂತೋಷ ಅವರ ಜೊತೆಗೂಡಿ, ಕಣ್ಣಿಗೆ ಖಾರದ ಪುಡಿ ಎರಚಿ, ಚೂರಿಯಿಂದ ಹೊಟ್ಟೆ, ಕುತ್ತಿಗೆಗೆ ಇರಿದು
ಕೊಲೆ ಮಾಡಿದ್ದಾರೆ ಎಂದು ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this on:
error: Content is protected !!