Latest Posts

ಫಿರೋಝ್ ಕುನ್ನಪರಂಬಿಲ್ ಮನವಿ; ಪಿತ್ತಜನಕಾಂಗದ ರೋಗಿಗೆ ಎರಡೂವರೆ ಘಂಟೆಯಲ್ಲಿ ಸಿಕ್ಕಿದ್ದು 40‌ ಲಕ್ಷ

ಕಲ್ಲಿಕೋಟೆ: ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಕಷ್ಟಪಡುತ್ತಿದ್ದ ರೋಗಿಗೆ ಸಮಾಜಿಕ ಕಾರ್ಯಕರ್ತ ಫಿರೋಜ್ ಕುನ್ನಂಪರಂಬಿಲ್ ಅವರ ಒಂದೇ ಒಂದು ವಿಡಿಯೋ ದಿಂದ ಕೋಝಿಕ್ಕೋಡ್ ಮಿಮ್ಸ್ ಆಸ್ಪತ್ರೆಯಲ್ಲಿರುವ ತಲಶೇರಿ ಮೂಲದ ನೌಶಾದ್ ಅವರಿಗೆ ಎರಡೂವರೆ ಗಂಟೆಯಲ್ಲಿ 40 ಲಕ್ಷ ರೂ.‌ಸಹಾಯಧನ ಲಭಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೌಶಾದ್ ಒಬ್ಬ ಆಟೋ ಚಾಲಕ,ಅವರಿಗೆ ಮೂರು ಮಕ್ಕಳಿದ್ದಾರೆ ಆತನ ಚಿಕಿತ್ಸೆಗಾಗಿ ಸುಮಾರು 20 ಲಕ್ಷ ರೂ ಬೇಕಾಗಿದ್ದು ಕಡುಬಡವನಾದ ಕಾರಣ ಅಷ್ಟು ದೊಡ್ಡ ಮೊತ್ತ ಅವರಲ್ಲಿ ಇಲ‌್ಲ ಆದ್ದರಿಂದ ವಿಡಿಯೋ ಮಾಡಿ ಸಹಾಯ ಅಭ್ಯರ್ಥನೆ ಮಾಡಿದ್ದರು ಫಿರೋಝ್.ರೋಗಿ ನೌಶಾದ್ ನ ಮಗನು ಕರುಳು ದಾನ ಮಾಡಿರುತ್ತಾರೆ.

ಫಿರೋಜ್ ಈ ಘಟನೆಯ ಬಗ್ಗೆ ಫೇಸ್‌ಬುಕ್ ಲೈವ್ ಮೂಲಕ ರೋಗಿಯ ಮಾಹಿತಿ ನೀಡಿ ಮನೆಗೆ ತಲುಪುವ ಹೊತ್ತಿಗೆ ರೋಗಿಯ ಖಾತೆಗೆ ಸಾರ್ವಜನಿಕರಿಂದ 40 ಲಕ್ಷಕ್ಕೂ ಹೆಚ್ಚು ರೂಪಾಯಿಗಳು ಜಮೆ ಆಗಿದ್ದು ಇನ್ನು ಯಾರೂ ಹಣ ಕಳುಹಿಸಬೇಡಿ ಎಂದು ಫಿರೋಝ್ ಕುನ್ನಪರಂಬಿಲ್ ಮನವಿ ಮಾಡಿದ್ದಾರೆ.

Share this on:
error: Content is protected !!