Latest Posts

ಅಕ್ರಮ ಚಿನ್ನ ಸಾಗಾಟ ಆರೋಪವನ್ನು ಮುಚ್ಚಿ ಹಾಕಲು ಸಚಿವಾಲಯಕ್ಕೆ ಸರಕಾರವೇ ಬೆಂಕಿ ಹಚ್ಚಿ ಸಾಕ್ಷಿ ಆಧಾರಗಳನ್ನು ನಾಶಪಡಿಸಿದೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಕಾಸರಗೋಡು: ಕಳ್ಳರನ್ನು ರಕ್ಷಣೆ ಮಾಡಲು ಕೇಂದ್ರದ ಅದೇ ತತ್ವವನ್ನು ಪಿಣರಾಯಿ ಸರಕಾರವೂ ನಡೆಸುತ್ತಿದೆ ಎಂದು ಆರೋಪಿಸಿ ಎನ್ಮಕಜೆ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ನಿಸಾರ್ ಬಂಪತ್ತಡ್ಕ ನೇತೃತ್ವದಲ್ಲಿ ಪಿಣರಾಯಿ ಸರಕಾರಕ್ಕೆದುರಾಗಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಿಸಾರ್ ಬಂಪತ್ತಡ್ಕ
“ಇದು ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಸರಕಾರವೇ ನಡೆಸಿದ ಷಡ್ಯಂತ್ರ ವಾಗಿದೆ” ಕೇಂದ್ರದ ಭ್ರಷ್ಟಾಚಾರದ ಅದೇ ರೀತಿಯಲ್ಲಿ ಕೇರಳ ಸರಕಾರವೂ ಸಾಗುತ್ತಿದೆ
ಈ ಕೊಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದೂ, ಈ ಪ್ರಕರಣವನ್ನು ಸಿಬಿಐ ಅನ್ವೇಷಣೆಗೆ ನೀಡಬೇಕೆಂದೂ l ಒತ್ತಾಯಿಸಿದರು.
ಕಾಸರಗೋಡು ಕಾಂಗ್ರೆಸ್ ಕಾರ್ಯದರ್ಶಿಯಾದ ಸೋಮಶೇಖರ್ ಪ್ರತಿಭಟನೆಯನ್ನು ಉದ್ಘಾಟಿಸಿದರು.

ಕೇರಳ ಸಚಿವಾಲಯದಲ್ಲಿ ಬೆಂಕಿ ಅವಘಡ :

ತಿರುವನಂತಪುರಂ: ಕೇರಳ ಸರಕಾರದ ವೈಪಲ್ಯದಿಂದ ಸಚಿವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದ್ದರು. ಬೆಂಕಿಯಲ್ಲಿ ಪ್ರಮುಖ ಫೈಲ್ ಗಳು ನಾಶವಾಗಿದೆ ಎಂದು ವರದಿಯಾಗಿತ್ತು .

ಸೆಕ್ರಟಿಯೇಟ್ ವಿಭಾಗದಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಚಿನ್ನದ ಕಳ್ಳಸಾಗಣೆ ಸೇರಿದಂತೆ ವಿವಾದಾತ್ಮಕ ವಿಷಯಗಳಿಗೆ ಸಂಬಂಧಿಸಿದ ನಿರ್ಣಾಯಕ ದಾಖಲೆಗಳನ್ನು ಶೇಖರಿಸಲಾಗಿತ್ತು.ಇದು ವ್ಯವಸ್ಥಿತವಾಗಿ ನಡೆದ ಸಂಚು,ಉದ್ದೇಶಪೂರ್ವಕವಾಗಿ ಬೆಂಕಿಯನ್ನು ಹಚ್ಚಲಾಗಿದೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದರು .
ಘಟನೆ ನಡೆದ ದಿನ ಸಂಜೆ 5 ಗಂಟೆ ಸುಮಾರಿಗೆ ಸೆಕ್ರಟರಿಯೇಟ್ ಕಚೇರಿಯಿಂದ ಹೊಗೆ ಏರುತ್ತಿರುವುದನ್ನು ಕಂಡ ನೌಕರರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಚಿಸಿದರು.
ಬದಿಯಲ್ಲಿರುವ ಏರ್ ಕಂಡೀಶನ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ನೌಕರರು ಹೇಳುತ್ತಾರೆ.

Share this on:
error: Content is protected !!