Latest Posts

ಐಪಿಎಲ್: ಚೆನ್ನೈ ಬೌಲರ್‌ಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಕೋವಿಡ್ ಪಾಸಿಟಿವ್ – ವರದಿ

ದುಬೈ: ಐಪಿಎಲ್‌ಗಾಗಿ ಯುಎಇಗೆ ಆಗಮಿಸಿದ ಚೆನ್ನೈ ಸೂಪರ್ ಕಿಂಗ್ಸ್‌ನ ವೇಗದ ಬೌಲರ್ ಮತ್ತು 10 ಸಿಬ್ಬಂದಿಗಳಿಗೆ ಕೋವಿಡ್ ದೃಡೀಕರಿಸಲಾಗಿದೆ. ಧೋನಿ ನೇತೃತ್ವದ ತಂಡ ಆಗಸ್ಟ್ 21 ರಂದು ಭಾರತದಿಂದ ಹೊರಟಿತು. ಯುಎಇಗೆ ಆಗಮಿಸಿದವರಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಶೇನ್ ವ್ಯಾಟ್ಸನ್ ಕೂಡ ಇದ್ದರು.

ನಂತರ ತಂಡದ ಸದಸ್ಯರು ಹೋಟೆಲ್ ಕೊಠಡಿಗಳಲ್ಲಿ ಕ್ವಾರಂಟೈನಿಗಾಗಿ ತಂಗಿದ್ದರು. ಕೋವಿಡ್ ದೃಢಪಟ್ಟ ಬೌಲರ್ ಭಾರತ ತಂಡದ ಪರವಾಗಿ ಆಡಿದ್ದಾರೆ ಎಂದು ಎ.ಎನ್.ಐ ವರದಿ ಮಾಡಿದೆ.

ದುಬೈಗೆ ಹಿಂದಿರುಗುವ ಮೊದಲು ತಂಡವು ಚೆನ್ನೈನಲ್ಲಿ ತರಬೇತಿ ಪಡೆದಿದ್ದು ತಂಡದ ಸದಸ್ಯರನ್ನು ಮರುದಿನ ಮತ್ತೆ ಕೊರೋನ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

Share this on:
error: Content is protected !!