ಬೆಂಗಳೂರು (ಆ 29) : ನಗರದಲ್ಲಿ ಎನ್ಸಿಬಿ ಅಧಿಕಾರಿಗಳ ದಾಳಿ ಬಳಿಕ ಬಯಲಾಗಿರೋ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸ್ಯಾಂಡಲ್ವುಡ್ ನಟ ನಟಿಯರು ಹಾಗೂ ಸಂಗೀತ ನಿರ್ದೇಶಕರು, ಉದ್ಯಮಿ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಸುಳಿಯಲ್ಲಿ ಸಿಲುಕಿರೊ ಆರೋಪ ಕೇಳಿಬಂದ ಹಿನ್ನೆಲೆ, ಅವರೆಲ್ಲಾ ಯಾರು ಅನ್ನೋದು ತನಿಖೆಯಿಂದ ಬಯಲಾಗಲಿ ಎಂದಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗಾಂಜಾ ಮಾರೋದು ಕೊಂಡುಕೊಳ್ಳೋದು ಅಪರಾಧ. ಅದನ್ನು ಸೇವಿಸೋದು ಅಫೆನ್ಸ್. ಇದನ್ನು ಸರ್ಕಾರ ಬಿಗಿ ಕ್ರಮದ ಮೂಲಕ ತಪ್ಪಿಸಬೇಕು ಎಂದು ಹೇಳಿದ್ರು. ಇದರಲ್ಲಿ ಯಾವ ರಾಜಕಾರಣಿಗಳ ಮಕ್ಕಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಯಾವ ಸಿನಿಮಾ ತಾರೆಯರ ಮಕ್ಕಳು ಇದರಲ್ಲಿದ್ದಾರೆ ಅಂತ ಗೊತ್ತಿಲ್ಲ. ತನಿಖೆಯಿಂದ ಬಯಲಾಗಲಿ ಎಂದರು.