ಮುಂಬೈ: ಭಾರತದ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವಾದ ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್, Z ಪ್ಲಸ್ ಭದ್ರತೆಯನ್ನು ಹೊಂದಿರುವ ಐಶರಾಮಿ ಕಾರನ್ನು ಖರೀದಿಸಲಾಗಿದೆ. ಜರ್ಮನ್ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ನ ಅತ್ಯಾಧುನಿಕ ಬೆಂಜ್ ಎಸ್ 600 ಗಾರ್ಡ್ ಕಾರು ಶಸ್ತ್ರಸಜ್ಜಿತ ವಾಹನವು ಬೆಂಜ್ ಮೇಬ್ಯಾಕ್ ಎಸ್ 600 ಅನ್ನು ಆಧರಿಸಿದೆ.ಸಂಪೂರ್ಣವಾಗಿ ಜರ್ಮನಿಯಲ್ಲಿ ತಯಾರಿಸಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಎಸ್ 600 ಗಾರ್ಡ್ ಬೆಲೆ ಸುಮಾರು 10 ಕೋಟಿ ರೂ ಎಂದು ಹೇಳಲಾಗುತ್ತಿದೆ.

ಈ ವಾಹನದ ಮುಖ್ಯವಾಗಿ ಸಂಪೂರ್ಣವಾಗಿ ಬುಲೆಟ್ ಪ್ರೂಫ್ ಆಗಿದ್ದು ಇದು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬಾಂಬ್, ಗ್ರೆನೇಡ್ ಮತ್ತು ಗುಂಡು ನಿರೋಧಕವಾಗಿದೆ.ಈ ಕಾರು 80 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು ಮತ್ತು ಟೈರ್ ಪಂಕ್ಚರ್ ಆಗಿದ್ದರೂ 30 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು ಎಂದು ಕಂಪನಿಯು ತಿಳಿಸಿದ್ದು, ವಿಆರ್ 10 ಲಿವರ್ ರಕ್ಷಣೆ ಹೊಂದಿದ ವಿಶ್ವದ ಮೊದಲ ನಾಗರಿಕ ವಾಹನವಾಗಿ ಮಾನ್ಯತೆ ಪಡೆದಿದೆ.