Latest Posts

ಪ್ರಶಾಂತ್ ಭೂಷಣ್ ವಿರುದ್ಧ ಪ್ರಕರಣ; ತೀರ್ಪು ಸೋಮವಾರ

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಎಸ್‌ಎ ಬಾಬ್ಡೆ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ.
ಮಂಗಳವಾರ ನಡೆದ ಕೊನೆಯ ವಿಚಾರಣೆಯಲ್ಲಿ ಭೂಷಣ್ ತಮ್ಮ ಟ್ವೀಟ್‌ಗಳಿಗೆ ಕ್ಷಮೆಯಾಚಿಸಲು ನಿರಾಕರಿಸಿದರು, ಪ್ರಶಾಂತ್ ಭೂಷಣ್ ಅವರಿಗೆ ಕ್ಷಮಾದಾನ ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ಮನವಿಯನ್ನು ಮಾಡಿದ್ದರು.

ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಭೂಷಣ್ ರವರಿಗೆ ಹಲವಾರು ಬಾರಿ ಕ್ಷಮೆಯಾಚಿಸುವಂತೆ ಕೇಳಿಕೊಂಡಿತು.
‘ಕ್ಷಮೆ’ ಪದವನ್ನು ಬಳಸುವುದರಲ್ಲಿ ತಪ್ಪೇನಿದೆ? ಕ್ಷಮೆಯಾಚಿಸುವುದರಲ್ಲಿ ತಪ್ಪೇನಿದೆ? ಇದು ಅಪರಾಧದ ಪ್ರತಿಬಿಂಬವೇ? ಕ್ಷಮೆ ಒಂದು ಮ್ಯಾಜಿಕ್ ಪದ, ಬಹಳಷ್ಟು ವಿಷಯಗಳನ್ನು ಗುಣಪಡಿಸುವ ಪದ, ನಾನು ಇದನ್ನು ಸಾಮಾನ್ಯವಾಗಿ ಹೇಳುತ್ತೇನೆ,ನೀವು ಕ್ಷಮೆಯಾಚಿಸಿದರೆ ಮಹಾತ್ಮ ಗಾಂಧಿ ಸ್ಥಾನಕ್ಕೆ ಏರುತ್ತೀರಿ,ಗಾಂಧೀಜಿಯವರು ಇದನ್ನು ಮಾಡಿದ್ದಾರೆ, ನೀವು ಯಾರನ್ನಾದರೂ ನೋಯಿಸಿದ್ದರೆ,ನೀವು ಅದನ್ನು ಹೇಳಬೇಕು,ಕ್ಷಮೆ ಕೇಳುವ ಮೂಲಕ ಯಾರೂ ಸಣ್ಣವರಾಗುವುದಿಲ್ಲ ಎಂದು ತೀರ್ಪನ್ನು ಮುಂದೂಡುವಾಗ ನ್ಯಾಯಮೂರ್ತಿ ಮಿಶ್ರಾ ಹೇಳಿದರು.

Share this on:
error: Content is protected !!