Latest Posts

64 ವರ್ಷಗಳ ನಂತರ, ಕೆಎಫ್‌ಸಿ ತನ್ನ ಅಪ್ರತಿಮ ಮುಖಮುದ್ರೆಯನ್ನು ತ್ಯಜಿಸಿದೆ, ಕಾರಣ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ

ಡಬ್ಲಿನ್: ಹಲವಾರು ವರ್ಷಗಳಿಂದ, ಕೆಎಫ್‌ಸಿಯ ಮುಖಮುದ್ರೆಯಾಗಿದೆ , ತಿಂದ ಮೇಲು ತನ್ನ ನಾಲಿಗೆಗೆ ಆಸೆ ಹುಟ್ಟಿಸಿ ಇನ್ನೂ ತಿನ್ನಬೇಕೆನ್ನುವ ಆ ಬರಹ ”ಫಿಂಗರ್ ಲಿಕ್ಕಿಂಗ್ ಗುಡ್” ಎಂಬ ಸಾಲು.ಆದರೆ ಕೇವಲ ಕೋವಿಡ್ ಕಾರಣ ಪ್ರಸ್ತುತ 64 ವರ್ಷಗಳಿಂದ ಉಪಯೋಗಿಸಿದಂತ ಕೆಎಫ್‌ಸಿ ಆ ಘೋಷಣೆಯನ್ನು ಕೈಬಿಟ್ಟಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕೋವಿಡ್ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಆ ಜಾಹೀರಾತು ಸಂಪೂರ್ಣವಾಗಿ ಸೂಕ್ತವಲ್ಲದ ಕಾರಣಕ್ಕೆ ಈ ಘೋಷಣಾ ಮುದ್ರಾವಾಕ್ಯವನ್ನು ತೆಗೆಯಲಾಗುತ್ತಿದೆ ಎಂದು ಕಂಪನಿಯ ಚೀಫ್ ಮಾರ್ಕಟ್ಟಿಂಗ್ ಆಫಿಸರ್ ಕ್ಯಾಥರಿನ್ ಟಾನ್ ಗಿಲ್ಲೆಸ್ಪಿ, ತಿಳಿಸಿದರು.

ರೋಗ ನಿಯಂತ್ರಣ ಮತ್ತು ರೋಗನಿರೋಧಕ ಸಂಸ್ಥೆಗಳು ವೈರಸ್ ವಿರುದ್ಧ ಹೋರಾಡಲು ತಮ್ಮ ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸ ಹೊರತು ಅವರ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬಾರದು ಎಂದು ನಿರಂತರವಾಗಿ ಒತ್ತಾಯಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಅಂತಹ ಘೋಷಣೆಯನ್ನು ಬಳಸುವುದು ಸೂಕ್ತವಲ್ಲ ಎಂದು ಅವರು ಹೇಳಿದರು.

ಕೊರೋನ ಸಂಪೂರ್ಣ ಮುಕ್ತವಾಗಿ ದೇಶವಿಡೀ ಶಾಂತಿಯುತವಾದ ನಂತರ ನಿಗದಿತ ಸಮಯದಲ್ಲಿ ಈ ಮುದ್ರಾವಾಕ್ಯವನ್ನು ಮರಳಿ ತರುವುದಾಗಿ ಕಂಪನಿ ತಿಳಿಸಿದೆ.

Share this on:
error: Content is protected !!