ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಯೂಟ್ಯೂಬ್ ವಿಡಿಯೋ ಕಾಮೆಂಟ್ ಬಾಕ್ಸ್ ಮುಚ್ಚಲಾಗಿದೆ.ವೀಡಿಯೊಗೆ ಡಿಸ್ಲೈಕ್ ಮತ್ತು ನೆಗಟಿವ್ ಕಮೆಂಟ್ಗಳ ಹೆಚ್ಚಳ ಆದ ಕಾರಣ ಕಮೆಂಟ್ ಮಾಡುವ ಅವಕಾಶವನ್ನು ತಡೆಹಿಡಿಯಲಾಗಿದೆ.
ಪ್ರಧಾನಿ ನಿನ್ನೆ ಈ ದೇಶವನ್ನು ಉದ್ದೇಶಿಸಿ ಮುಖ್ಯ ಪ್ರಭಾಷಣವನ್ನು ಮಾಡಿದ್ದರು.ಬಿಜೆಪಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ತಿಂಗಳ ಮಂಕೀಬಾತ್ ನೇರಪ್ರಸಾರ ನಡೆಸಲಾಗುತ್ತಿತ್ತು. ಈ ಹಿಂದೆ ಹಾಕಿದ ವಿಡಿಯೋ ಗೆ ಲೈಕ್ ಮಾಡಿದವರಿಗಿಂತ ಡಿಸ್ಲೈಕ್ ಮಾಡಿದವರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿತ್ತು.ಕೇಂದ್ರ ಸರಕಾರದ ವೈಫಲ್ಯ ಗಳ ವಿರುದ್ಧ ದೇಶದ ಜನತೆ ವಿಡಿಯೋ ಡಿಸ್ಲೈಕ್ ಮಾಡುವ ಮೂಲಕ ಪ್ರತಿಭಟನೆಯನ್ನು ನಡೆಸಿದ್ದರು.