Latest Posts

ಡಾ.ಕಫೀಲ್ ಖಾನ್ ಜೈಲಿನಿಂದ ಬಿಡುಗಡೆ

ಅಲಹಾಬಾದ್ (ಯುಪಿ): ಡಾ. ಕಫೀಲ್ ಖಾನ್ ಅವರನ್ನು ಮಂಗಳವಾರ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಯಿತು.ಅಲಿಗಡ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣಕ್ಕಾಗಿ ಕಫೀಲ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಜೈಲಿಗೆ ಹಾಕಲಾಯಿತು.ಆದರೆ, ಕಫೀಲ್ ಖಾನ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು.ಖಾನ್ ಅವರ ತಾಯಿ ನುಸ್ರತ್ ಪರ್ವೀನ್ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಈ ತೀರ್ಪು ನೀಡಲಾಗಿತ್ತು.

ರಾತ್ರಿ 11 ಗಂಟೆಗೆ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಖಾನ್ ಅವರನ್ನು ಮಧ್ಯರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.ಶಿಕ್ಷೆ ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ.ಪೌರತ್ವ ಕಾನೂನಿನ ಕುರಿತು ಅಲಿಗಢ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣಕ್ಕಾಗಿ ಖಾನ್ ಅವರನ್ನು ಡಿಸೆಂಬರ್ 12, 2019 ರಂದು ಬಂಧಿಸಲಾಗಿತ್ತು.ಭಾಷಣವು ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸಲಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.

Share this on:
error: Content is protected !!