ಕೇರಳ ಅಬಕಾರಿ ದಳದ ಅಧಿಕಾರಿಗಳು ರಾಜ್ಯ ಹೆದ್ದಾರಿಯಲ್ಲಿ ಟ್ರಕ್ ನಿಲ್ಲಿಸಿ ಬೃಹತ್ ಪ್ರಮಾಣದ ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಬಕಾರಿ ವೃತ್ತ ಇನ್ಸ್ಪೆಕ್ಟರ್ ಟಿ ಅನಿಲ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಕೇರಳದ ಇದುವರೆಗಿನ ಅತಿದೊಡ್ಡ ಮಾದಕ ದ್ರವ್ಯದ ಜಾಲ ಇದಾಗಿದ್ದು ಸುಮಾರು 20 ಕೋಟಿ ರೂ. ಮೌಲ್ಯದ 500 ಕೆ.ಜಿ ಗಾಂಜಾವನ್ನು ಅಟ್ಟಿಂಗಲ್ನ ಸಮೀಪ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಮೈಸೂರು ಮೂಲದ ಕೆಲವು ಕೇರಳಿಗರು ಗಾಂಜಾವನ್ನು ಕೇರಳಕ್ಕೆ ಸಾಗಿಸಲು ಪ್ರಯತ್ನಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಕೇರಳದಲ್ಲಿ ವಶಪಡಿಸಿಕೊಂಡ ಪ್ರಕರಣ ಇದೇ ಮೊದಲು.ಬಂಧಿತರನ್ನು ಪಂಜಾಬ್ ಮತ್ತು ಜಾರ್ಖಂಡ್ ಮೂಲದವರು ಎಂದು ತಿಳಿದು ಬಂದಿದೆ.